RRR 2 Movie Updates : ಆರ್‌ಆರ್‌ಆರ್‌ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಜನಪ್ರಿಯ ಚಿತ್ರವಾಗಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ, ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಚಿತ್ರ ಆಸ್ಕರ್ ವೇದಿಕೆಯಲ್ಲೂ ಮಿಂಚಿತ್ತು. ಎಂಎಂ ಕೀರವಾಣಿ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆದರು. ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಸೇರಿದಂತೆ ಹಲವು ತಾರೆಯರು ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಚಿತ್ರದ ಎರಡನೇ ಭಾಗದ ಬಗ್ಗೆ ಹೊಸ ಅಪ್‌ಡೇಟ್‌ ಒಂದು ಹರಿದಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Taali Teaser: ನಿಂದನೆಯಿಂದ ಚಪ್ಪಾಳೆಯವರೆಗಿನ ಪಯಣದ ಕಥೆ, ಸುಶ್ಮಿತಾ ಸೇನ್ ನಟನೆಗೆ ಫ್ಯಾನ್ಸ್‌ ಫಿದಾ!


ಆರ್‌ಆರ್‌ಆರ್ 2 ಚಿತ್ರದ ಸ್ಕ್ರಿಪ್ಟ್ ಕೆಲಸ ಪ್ರಗತಿಯಲ್ಲಿದೆ. ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದು ಈಗಾಗಲೇ ಘೋಷಿಸಲಾಗಿತ್ತು. ಸದ್ಯ ಚಿತ್ರದ ಚಿತ್ರೀಕರಣ ಎಲ್ಲಿ ನಡೆಯಲಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜಮೌಳಿ ಅವರ ತಂದೆ ಹಾಗೂ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಆಫ್ರಿಕಾದಲ್ಲಿ ನಡೆಯಲಿದೆ. ಆಫ್ರಿಕಾದಲ್ಲಿ ನಡೆಯುವ ಕಥೆಯನ್ನು ರಾಜಮೌಳಿ ಅವರಿಗೆ ಹೇಳಿದ್ದು, ಇಷ್ಟವಾಗಿದೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.


ರಾಜಮೌಳಿ ಅವರು ಮಹೇಶ್ ಬಾಬು ಅಭಿನಯದ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಂತರವೇ RRR 2 ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವುದಾಗಿ ಪ್ರಸಾದ್ ಹೇಳಿದ್ದಾರೆ. ಏತನ್ಮಧ್ಯೆ, RRR ಚಿತ್ರ ವಿಶ್ವಾದ್ಯಂತ 1200 ಕೋಟಿ ಕಲೆಕ್ಷನ್ ಮಾಡಿತ್ತು. RRR ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಚಿತ್ರವಾಗಿತ್ತು. ಚಿತ್ರದ ಶೂಟಿಂಗ್‌ಗೆ 650 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ.


ಇದನ್ನೂ ಓದಿ: Tamannaah Bhatia: ರೆಡ್‌ ಸೀರೆಯುಟ್ಟ ಪಡ್ಡೆಹೈಕ್ಳ ಬ್ಲಡ್ ಪ್ರೆಶರ್ ಹೆಚ್ಚಿಸಿದ ʼಮಿಲ್ಕಿ ಬ್ಯೂಟಿʼ ..!


RRR ಎಂದರೆ ರುಧಿರಂ ರಣಂ ರೌದ್ರಂ. ಈ ಚಿತ್ರವು 1920 ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಥೆಯಾಗಿದೆ. ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೋಮರಂ ಭೀಮನಾಗಿ ಜೂನಿಯರ್ ಎನ್.ಟಿ.ಆರ್ ನಟಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.