)
Rukmini Vasanth : ಸ್ಯಾಂಡಲ್ವುಡ್ ಸುಂದರಿ ರುಕ್ಮಿಣಿ ವಸಂತ್ ಪ್ರಸ್ತುತ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿ ಬ್ಲಾಕ್ಬಸ್ಟರ್ ಹಿಟ್ ಪಡೆದ ಕಾಂತಾರ 2 ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿದ್ದರು. ಇದೀಗ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ...
ಹೌದು... ಸಂದರ್ಶನವೊಂದರಲ್ಲಿ ಮಾತನಾಡಿದ ರುಕ್ಕು, ಕಾಂತಾರ ಸಿನಿಮಾದಲ್ಲಿನ ತಮ್ಮ ನಕಾರಾತ್ಮಕ ಪಾತ್ರದ ಬಗ್ಗೆ ಮಹತ್ವದ ವಿಚಾರ ಬಿಚ್ಚಿಟ್ಟರು. ಅಲ್ಲದೆ, ಸಿನಿರಂಗಕ್ಕೆ ಬಂದ ಹೊಸತರಲ್ಲಿ ಈ ರೀತಿಯ ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸುವುದು ಎಷ್ಟು ಅಪಾಯಕಾರಿ ಎಂಬುದರ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕಾಂತಾರ ಅಧ್ಯಾಯ 1 ಚಿತ್ರದಲ್ಲಿ ನಕಾರಾತ್ಮಕ ಪಾತ್ರದಲ್ಲಿ ನಟಿಸಿದ ಬಗ್ಗೆ ರುಕ್ಮಿಣಿ ವಸಂತ್ ಮಾತನಾಡುತ್ತಾ.. "ನನ್ನ ಸಿನಿಮಾ ವೃತ್ತಿಜೀವನದ ಆರಂಭದಲ್ಲಿ 'ಕಾಂತಾರ ಅಧ್ಯಾಯ 1' ಚಿತ್ರದಲ್ಲಿ ನಕಾರಾತ್ಮಕ ಪಾತ್ರದಲ್ಲಿ ನಟಿಸುವುದು ತುಂಬಾ ಅಪಾಯಕಾರಿ ಪ್ರಯೋಗವಾಗಿತ್ತು. ಆದರೆ ಜನರು ಅದನ್ನು ಇಷ್ಟಪಟ್ಟರು ಅಂತ ಕನಕಾವತಿ ಪಾತ್ರದ ಬಗ್ಗೆ ವಿವರಿಸಿದರು.
"Playing the Antagonist character in #KantaraChapter1 is dangerous to experiment in early of career🤞. People are saying that they loved me playing an evil role, they didn't hate🫶. Nobody guessed that i will turn out as Antagonist🫰❤️🔥"
- #RukminiVasanthpic.twitter.com/TlnSskjVdB— AmuthaBharathi (@CinemaWithAB) December 17, 2025
ನನ್ನನ್ನು ದ್ವೇಷಿಸುವುದಿಲ್ಲ ಎಂದು ತುಂಬಾ ಜನರು ನನಗೆ ಹೇಳಿದರು. ಅಲ್ಲದೆ, ಈ ಚಿತ್ರದಲ್ಲಿ ನನ್ನ ಪಾತ್ರ ಆರಂಭದಲ್ಲಿ ಚೆನ್ನಾಗಿದ್ದರೂ, ಕೊನೆಯಲ್ಲಿ ನಾನೇ ನಾಯಕನಿಗೆ ಶತ್ರುವಾಗುತ್ತೇನೆಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಅವರು ಸಂದರ್ಶನದಲ್ಲಿ ರುಕ್ಮಿಣಿ ತಮಾಷೆ ಮಾಡಿದರು..
ಅಂದಹಾಗೆ ನಟಿ ರುಕ್ಮಿಣಿ ವಸಂತ್ ಪ್ರಸ್ತುತ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ, ಬಹುನಿರೀಕ್ಷಿತ ನಟ ಯಶ್ ಅಭಿನಯದ ಟಾಕ್ಸಿಕ್ ನಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ ಮುಂಬರುವ ಚಿತ್ರದಲ್ಲೂ ಅವರು ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.