)
Sai Pallavi news : ದಕ್ಷಿಣದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರು. ನ್ಯಾಚುರಲ್ ಸುಂದರಿ ಅಂತ ಕರೆಯಿಸಿಕೊಳ್ಳುವ ಈ ಸುಂದರಿ, ಶೀಘ್ರದಲ್ಲೇ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಚಿತ್ರದ ಬಗ್ಗೆ ಜನರ ಮನಸ್ಸಿನಲ್ಲಿ ಸಾಕಷ್ಟು ಉತ್ಸಾಹವಿದೆ. ಇದರ ನಡುವೆ, ಸಾಯಿ ಪಲ್ಲವಿ ಮತ್ತು ಅವರ ಸಹೋದರಿ ಪೂಜಾ ಇತ್ತೀಚೆಗೆ ರಜೆಗೆ ಹೋಗಿದ್ದು, ಎಲ್ಲರಂತೆ, ಅಕ್ಕ-ತಂಗಿಯ ರಜೆಯ ಮೋಜಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಇಬ್ಬರು ಸಹೋದರಿಯರು ಈಜುಡುಗೆಗಳಲ್ಲಿ ಬೀಚ್ನಲ್ಲಿ ಕುಳಿತು ನಗುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಇದೀಗ ಈ ಚಿತ್ರಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿವೆ. ಅನೇಕ ಜನರು ಸಾಯಿ ಪಲ್ಲವಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಸಾಯಿ ಪಲ್ಲವಿ ಸಹೋದರಿ ಪೂಜಾ ತಮ್ಮ ರಜೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಬೀಚ್ ಹೈ.. ಸನ್ ಕಿಸ್ಡ್ ಎಂಬ ಶೀರ್ಷಿಕೆಯನ್ನು ಬರೆದು ಸಾಯಿ ಪಲ್ಲವಿ ಅವರನ್ನು ಟ್ಯಾಗ್ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಪೂಜಾ ಮತ್ತು ಸಾಯಿ ಪಲ್ಲವಿ ಇಬ್ಬರೂ ಬೀಚ್ನಲ್ಲಿ ಈಜುಡುಗೆಗಳಲ್ಲಿ ಕಾಣಿಸಿಕೊಂಡರು.
ಪರದೆ ಮತ್ತು ವೇದಿಕೆಯ ಮೇಲೆ ತುಂಬಾ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ಸಾಯಿ ಪಲ್ಲವಿ ನಿಜ ಜೀವನದಲ್ಲಿ ಬಿಕಿನಿ ಧರಿಸುತ್ತಾರೆ ಅಂತ ಕೆಲ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು "ಇವರೂ ಸಹ ಎಲ್ಲ ನಟಿಯರಂತೆ ಎಂದು ಸಾಬೀತುಪಡಿಸಿದರು..." ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆಯಾಗಿ, ಸಾಯಿ ಪಲ್ಲವಿಯವರ ಆಧುನಿಕ ಲುಕ್ ಜನರಿಗೆ ಇಷ್ಟವಾಗಿಲ್ಲ ಅನಿಸುತ್ತಿದೆ.
ಸಾಯಿ ಪಲ್ಲವಿ ಶೀಘ್ರದಲ್ಲೇ "ರಾಮಾಯಣ"ದಲ್ಲಿ ರಣಬೀರ್ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಈ ಮಹಾಕಾವ್ಯದ ಮೊದಲ ನೋಟ ರಿಲೀಸ್ ಆಗಿತ್ತು. ಎರಡು ಭಾಗವಾಗಿ ಈ ಸಿನಿಮಾ ತೆರೆ ಕಾಣಲಿದೆ. ಅಲ್ಲದೆ, ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕುತೂಹಲ ಹೆಚ್ಚಿಸಿದೆ.