)
Saif Ali Khan: ಸೈಫ್ ಅಲಿ ಖಾನ್ ತಮ್ಮ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್ ಅವರೊಂದಿಗಿನ ಸಂಬಂಧದ ಬಗ್ಗೆ ಕಹಿ ಸತ್ಯವನ್ನು ಬಹಿರಂಗಪಡಿಸಿದ್ದರು. ಸೈಫ್ ತನ್ನ ತಾಯಿ ಮತ್ತು ಸಹೋದರಿಯನ್ನು ತಮ್ಮ ಮೊದಲ ಪತ್ನಿ ನಿರಂತರವಾಗಿ ಅವಮಾನಿಸದ್ದರು ಎಂದು ಹೇಳಿದ್ದು ತಮ್ಮ ವಿಚ್ಚೇದನದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
90ರ ದಶಕದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ವಿವಾಹಗಳಲ್ಲಿ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ವಿವಾಹವೂ ಒಂದು. ಈ ಜೋಡಿ ಸದಾ ಚರ್ಚೆಯಲ್ಲಿರುತ್ತದೆ, ಇಂದಿಗೂ ಕೂಡ ಇವರ ವಿಚ್ಛೇದನದ ಕುರಿತು ಚರ್ಚೆಗಳು ನಡೆಯುತ್ತಿರುತ್ತದೆ. ವಯಸ್ಸು ಮತ್ತು ಧರ್ಮವನ್ನು ಲೆಕ್ಕಿಸದೆ ಇಬ್ಬರೂ 1991 ರಲ್ಲಿ ವಿವಾಹವಾಗಿದ್ದರು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಸೈಫ್ ಅವರ ತಾಯಿ ಶರ್ಮಿಳಾ ಟ್ಯಾಗೋರ್ ಈ ನಿರ್ಧಾರದಿಂದ ತುಂಬಾ ಅಸಮಾಧಾನಗೊಂಡಿದ್ದರು. ಎಲ್ಲರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ದಾಂಪತ್ಯ ಕೆಲವೇ ದಿನದಲ್ಲಿ ಬಿರುಕು ಬಿಟ್ಟಿತ್ತು. ಸೈಫ್ ತಮ್ಮ ಸಂದರ್ಶನವೊಂದರಲ್ಲಿ ಅಮೃತಾ ಅವರೊಂದಿಗಿನ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದರು. ಈ ಸಂದರ್ಶನಲದಲ್ಲಿ ಅವರು, ಅಮೃತ ಹೇಗೆ ತಮ್ಮ ತಾಯಿ ಹಾಗೂ ಸಹೋದರಿಯನ್ನು ನಿಂದಿಸುತ್ತಿದ್ದರು ಎಂಬುದನ್ನು ಹೇಳಿದ್ದಾರೆ.
ಅಮೃತಾಳ ಕೋಪದ ವರ್ತನೆ ಮತ್ತು ಸೈಫ್ ಚಿತ್ರರಂಗದಲ್ಲಿನ ನಿರಂತರ ಹೋರಾಟ ಅವರ ಸಂಬಂಧದಲ್ಲಿ ಬಿರುಕು ಮೂಡಿಸಿತು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ, ಅಮೃತಾ ಉದ್ಯಮದಲ್ಲಿ ದೊಡ್ಡ ತಾರೆಯಾಗಿದ್ದರು ಮತ್ತು ಸೈಫ್ ತಮ್ಮ ವೃತ್ತಿಜೀವನಕ್ಕಾಗಿ ಕಷ್ಟಪಡುತ್ತಿದ್ದರು. ಆದರೆ, ಸಂಬಂಧ ಮುರಿದು ಬಿದ್ದಾಗ, ಸೈಫ್ ಕೆಲವು ಕಹಿ ಸತ್ಯಗಳನ್ನು ಸಹ ಹೇಳಿದರು. ದಿ ಟೆಲಿಗ್ರಾಫ್ಗೆ ನೀಡಿದ ಸಂದರ್ಶನದಲ್ಲಿ, ಅಮೃತಾ ತನ್ನ ಕುಟುಂಬವನ್ನು, ವಿಶೇಷವಾಗಿ ತನ್ನ ತಾಯಿ ಮತ್ತು ಸಹೋದರಿಯರನ್ನು ನಿಂದಿಸುತ್ತಿದ್ದರು ಮತ್ತು ಕೋಪದಲ್ಲಿ ಕೆಟ್ಟ ಪದಗಳನ್ನು ಬಳಸುತ್ತಿದ್ದರು ಎಂದು ಸೈಫ್ ಹೇಳಿದ್ದರು. ಈ ಬಗ್ಗೆ ಮಾತನಾಡಿದ ಸೈಫ್, "ನನ್ನ ತಾಯಿ ಮತ್ತು ಸಹೋದರಿಯರು ನಿಂದನೆಗಳನ್ನು ಸಹಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ನಾನು ಅಮೃತಾ ಜೊತೆ ವಾದ ಮಾಡಲು ಬಯಸಲಿಲ್ಲ, ಅವಳು ನನ್ನ ಜೀವನದ ಪ್ರಮುಖ ಭಾಗವಾಗಿದ್ದಳು ಮತ್ತು ಯಾವಾಗಲೂ ಇರುತ್ತಾಳೆ ಎಂದುಕೊಂಡಿದ್ದೆ. ಅವಳು ಮತ್ತು ನನ್ನ ಮಕ್ಕಳು ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದ್ದರು.
ಇದಲ್ಲದೆ, ವಿಚ್ಛೇದನದ ನಂತರ ತನ್ನ ಮಕ್ಕಳನ್ನು ಭೇಟಿಯಾಗಲು ಎದುರಿಸಿದ ತೊಂದರೆಗಳ ಬಗ್ಗೆಯೂ ಸೈಫ್ ಮಾತನಾಡಿದರು. "ನನ್ನ ಮಗಳು ಸಾರಾ ಮತ್ತು ಮಗ ಇಬ್ರಾಹಿಂ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ಅವರನ್ನು ನೋಡಲು ನನಗೆ ಅವಕಾಶವಿರಲಿಲ್ಲ. ವಿಚ್ಛೇದನದ ನಂತರ, ಅವರನ್ನು ಭೇಟಿ ಮಾಡಲು ನನಗೆ ಎಂದಿಗೂ ಅವಕಾಶವಿರಲಿಲ್ಲ" ಎಂದು ಅವರು ಹೇಳಿದರು. ವಿಚ್ಛೇದನದ ನಂತರ ಅಮೃತಾಗೆ ಜೀವನಾಂಶ ನೀಡುವ ಬಗ್ಗೆಯೂ ಸೈಫ್ ಮಾತನಾಡಿದರು. ಅವರ ವಿಚ್ಛೇದನವು ಉದ್ಯಮದಲ್ಲಿ ಅತ್ಯಂತ ದುಬಾರಿಯಾಗಿದೆ ಎಂದು ಅವರು ಹೇಳಿದರು.
"ನಾನು ಅಮೃತಾಗೆ 5 ಕೋಟಿ ರೂ. ಜೀವನಾಂಶ ನೀಡುವುದಾಗಿ ಒಪ್ಪಿಕೊಂಡಿದ್ದೇನೆ, ಮತ್ತು ನಾನು ಈಗಾಗಲೇ 2.5 ಕೋಟಿ ರೂ. ನೀಡಿದ್ದೇನೆ. ಇದಲ್ಲದೆ, ನನ್ನ ಮಗನಿಗೆ 18 ವರ್ಷ ತುಂಬುವವರೆಗೆ ಪ್ರತಿ ತಿಂಗಳು 1 ಲಕ್ಷ ರೂ. ನೀಡುತ್ತಿದ್ದೆ. ನಾನು ಶಾರುಖ್ ಖಾನ್ ಅಲ್ಲ. ಆಗ ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ಜಾಹೀರಾತುಗಳು, ವೇದಿಕೆ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದ ನಾನು ಗಳಿಸಿದ್ದನ್ನೆಲ್ಲಾ ನನ್ನ ಮಕ್ಕಳಿಗಾಗಿ ಸಂಪಾದಿಸಿದೆ. ಆಗ ನನ್ನ ಬಳಿ ಅಷ್ಟೊಂದು ಹಣವಿರಲಿಲ್ಲ. ನಮ್ಮ ಬಂಗಲೆ ಅಮೃತಾ ಮತ್ತು ಮಕ್ಕಳಿಗಾಗಿ" ಎಂದು ಸೈಫ್ ಹೇಳಿದರು. ಸೈಫ್ ಯಾವಾಗಲೂ ತನ್ನ ಮದುವೆ, ಅಮೃತಾ ಜೊತೆಗಿನ ಸಂಬಂಧ ಮತ್ತು ಅವರ ವಿಚ್ಛೇದನದ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಳುತ್ತಲೇ ಬಂದಿದ್ದಾರೆ, ಆದರೆ ಅಮೃತಾ ಸಿಂಗ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಈ ಸಂದರ್ಶವನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ