ಚಿತ್ರಮಂದಿರಗಳಲ್ಲಿ ಇಂದಿನಿಂದ ಮತ್ತೊಮ್ಮೆ ಸಲಾರ್‌; ಮರು ಬಿಡುಗಡೆ ಆಯ್ತು ಪ್ರಭಾಸ್-‌ ಹೊಂಬಾಳೆ ಫಿಲಂಸ್‌ನ ಹಿಟ್‌ ಸಿನಿಮಾ

ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನ ಸಲಾರ್‌ ಸಿನಿಮಾ ಈಗಾಗಲೇ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಅಭಿಮಾನಿಗಳನ್ನು ರಂಜಿಸಿದೆ. ಈ ನಡುವೆ ಇದೇ ಹೈ-ಆಕ್ಟೇನ್ ಆಕ್ಷನ್ ಸಿನಿಮಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಮರು ಬಿಡುಗಡೆ ಆಗಿದೆ.

Written by - YASHODHA POOJARI | Last Updated : Mar 21, 2025, 11:08 PM IST
    • ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೊಂಬಾಳೆ ಫಿಲಂಸ್‌ ಹೆಸರು ಮಾಡುತ್ತಿದೆ
    • ಈಗಾಗಲೇ ಸರಣಿ ಹಿಟ್‌ ಸಿನಿಮಾಗಳನ್ನೇ ನೀಡಿದೆ
    • ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಪ್ರಭಾಸ್ ಕಾಂಬಿನೇಷನ್‌ನ ಸಲಾರ್‌ ಸಿನಿಮಾ
ಚಿತ್ರಮಂದಿರಗಳಲ್ಲಿ ಇಂದಿನಿಂದ ಮತ್ತೊಮ್ಮೆ ಸಲಾರ್‌; ಮರು ಬಿಡುಗಡೆ ಆಯ್ತು ಪ್ರಭಾಸ್-‌ ಹೊಂಬಾಳೆ ಫಿಲಂಸ್‌ನ ಹಿಟ್‌ ಸಿನಿಮಾ

ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹೊಂಬಾಳೆ ಫಿಲಂಸ್‌ ಹೆಸರು ಮಾಡುತ್ತಿದೆ. ಬಿಗ್‌ ಬಜೆಟ್‌ನ ಸಾಲು ಸಾಲು ಸಿನಿಮಾಗಳಲ್ಲಿ ಚಿತ್ರೋದ್ಯಮಕ್ಕೆ ನೀಡಿರುವ ಇದೇ ಸಂಸ್ಥೆ, ಈಗಾಗಲೇ ಸರಣಿ ಹಿಟ್‌ ಸಿನಿಮಾಗಳನ್ನೇ ನೀಡಿದೆ. ರಾಜಕುಮಾರ, ಯುವರತ್ನ, ಬಘೀರ, ಕೆಜಿಎಫ್ ಚಾಪ್ಟರ್‌ 1 ಮತ್ತು 2, ಕಾಂತಾರ ಸಿನಿಮಾಗಳು ಹಿಟ್‌ ಲಿಸ್ಟ್‌ನಲಿದೆ. ಹೀಗಿರುವಾಗಲೇ ಇದೇ ಸಂಸ್ಥೆಯ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ, "ಸಲಾರ್‌ ಪಾರ್ಟ್‌ 1 ಸೀಸ್‌ ಫೈರ್‌" ಇಂದು (ಮಾರ್ಚ್‌ 21) ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಿದೆ.

Add Zee News as a Preferred Source

ಇದನ್ನೂ ಓದಿ: ಮನೆಯ ಈ ಭಾಗದಲ್ಲಿ ಶತಪದಿ ಕಾಣಿಸಿಕೊಂಡರೆ ಅಶುಭ ನಿವಾರಣೆ ಖಂಡಿತ! ಕೆಟ್ಟ ದೃಷ್ಟಿ ಬಿದ್ದಿದ್ದರೂ ದೂರವಾಗುವುದು

ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರೆಬೆಲ್ ಸ್ಟಾರ್ ಪ್ರಭಾಸ್ ಕಾಂಬಿನೇಷನ್‌ನ ಸಲಾರ್‌ ಸಿನಿಮಾ ಈಗಾಗಲೇ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟಿ ಸೇರಿದ ಸಿನಿಮಾ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಅಭಿಮಾನಿಗಳನ್ನು ರಂಜಿಸಿದೆ. ಈ ನಡುವೆ ಇದೇ ಹೈ-ಆಕ್ಟೇನ್ ಆಕ್ಷನ್ ಸಿನಿಮಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಮರು ಬಿಡುಗಡೆ ಆಗಿದೆ.

ಈಗಾಗಲೇ ಮೊದಲ ಭಾಗದ ಬಳಿಕ 'ಸಲಾರ್: ಪಾರ್ಟ್ 2 - ಶೌರ್ಯಾಂಗ ಪರ್ವಂ'‌ ಸಲುವಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರ ನಡುವೆಯೇ ಮೊದಲ ಭಾಗದ ಮರುಬಿಡುಗಡೆ ಮತ್ತಷ್ಟು ಕುತೂಹಲ ಮೂಡಿದೆ.  ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ, ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿಯೂ ಸಲಾರ್‌ ಸಿನಿಮಾ ಮರು ಬಿಡುಗಡೆ ಆಗಿದೆ.

“ಸಲಾರ್‌ನ ಮರುಬಿಡುಗಡೆ ಒಂದು ರೀತಿ ರೋಮಾಂಚನಕಾರಿಯಾಗಿದೆ. ಚಿತ್ರಮಂದಿರಗಳಲ್ಲಿ ಸಲಾರ್ ಸಿನಿಮಾ ಮತ್ತೆ ಘರ್ಜಿಸುತ್ತಿದೆ. ಭಾಗ 2ಕ್ಕೆ ನಾವು ಸಜ್ಜಾಗುತ್ತಿರುವಾಗ ಈ ಪ್ರತಿಕ್ರಿಯೆ ನಮಗೆ ಸ್ಫೂರ್ತಿ ನೀಡುತ್ತದೆ. ಮರುಬಿಡುಗಡೆಯನ್ನು ಮತ್ತೆ ಒಪ್ಪಿಕೊಂಡಿದ್ದಕ್ಕೆ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು" ಎಂದಿದ್ದಾರೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು.

ಇದನ್ನೂ ಓದಿ:  ಗೋರಂಟಿ ಅಲ್ಲ.. ಮೊಸರಿಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು 2 ನಿಮಿಷದಲ್ಲೇ ಕಪ್ಪಾಗುವುದು!

“ಸಲಾರ್ ಯಾವಾಗಲೂ ನಮ್ಮ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದೆ. ಮರುಬಿಡುಗಡೆಗೆ ಬಂದಿರುವ ಅಗಾಧ ಪ್ರತಿಕ್ರಿಯೆಯು ಪ್ರೇಕ್ಷಕರು ನಮ್ಮ ಕಥೆಗಳ ಬಗ್ಗೆ ತೋರಿಸುತ್ತಿರುವ ಪ್ರೀತಿಯ ಪ್ರತಿಬಿಂಬವಾಗಿದೆ. ಚಿತ್ರಮಂದಿರಗಳು ಮತ್ತೆ ಹೌಸ್‌ಫುಲ್ ಆಗುತ್ತಿರುವುದನ್ನು ನೋಡಲು ನಾವು ಕೃತಜ್ಞರಾಗಿರುತ್ತೇವೆ" ಎಂಬುದು ಹೊಂಬಾಳೆ ಫಿಲಂಸ್‌ನ ಸಹ ಸಂಸ್ಥಾಪಕ ಚಲುವೆ ಗೌಡ ಅವರ ಮಾತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Trending News