Aishwarya Rai Salman Khan: ನಟಿ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ಗೆ ಸಂಬಂಧ ಪಟ್ಟ ಆಡಿಯೋ ಒಂದು ಇದೀಗ ಮತ್ತೆ ವೈರಲ್ ಆಗುತ್ತಿದೆ.

Aishwarya Rai Salman Khan: ಸಲ್ಮಾನ್ ಖಾನ್-ಐಶ್ವರ್ಯ ರೈ ಪ್ರೇಮಕಥೆ ಬಾಲಿವುಡ್ನಲ್ಲಿ ಎಂದಿಗೂ ಮುಗಿಯದ ಚರ್ಚೆಯ ವಿಷಯವಾಗಿದೆ. ಹಮ್ ದಿಲ್ ಜೆ ಚುಕೇ ಸನಮ್ ಚಿತ್ರದ ಸೆಟ್ಗಳಲ್ಲಿ ಪ್ರಾರಂಭವಾದ ಪ್ರಣಯ ಅಪೂರ್ಣವಾದ ಅಧ್ಯಾಯ. ಬಾಲಿವುಡ್ ಕಂಡ ಅತಿದೊಡ್ಡ ವಿವಾದಗಳಲ್ಲಿ ಒಂದಾಗಿ ಈ ಸಂಬಂಧ ಕೊನೆಗೊಂಡಿತು. ಸಲ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ನಂತರ ಐಶ್ವರ್ಯ ರೈ ಸಂಬಂಧವನ್ನು ಮುರಿದುಕೊಂಡರು.
ಸಲ್ಮಾನ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ ತನ್ನ ಜೀವನದ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಐಶ್ವರ್ಯಾ ಆರೋಪಿಸಿದ್ದಾರೆ. ಸಲ್ಮಾನ್ ವಿರುದ್ಧ ಸಾರ್ವಜನಿಕವಾಗಿ ಮಾತನಾಡುವ ಮೂಲಕ ಐಶ್ವರ್ಯಾ ರೈ ಸಲ್ಮಾನ್ ಖಾನ್ ಜೊತೆಗಿನ ತಮ್ಮ ಸಂಬಂಧವನ್ನು ಕೊನೆಗೊಳಿಸಿದರು.
ಈ ಮಧ್ಯೆ, ಸಲ್ಮಾನ್ ಖಾನ್ ಮತ್ತು ನಟಿ ಪ್ರೀತಿ ಜಿಂಟಾ ಆತ್ಮೀಯರಾಗಿದ್ದರು ಮತ್ತು ಐಶ್ವರ್ಯಾ ಅವರ ಸಂಬಂಧವನ್ನು ಕೊನೆಗೊಳಿಸಲು ಇದೇ ಕಾರಣ ಎಂದು ವರದಿಗಳು ಕೇಳಿಬಂದವು. ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವಿನ ಫೋನ್ ಸಂಭಾಷಣೆ ಸೋರಿಕೆಯಾಗಿದೆ ಎಂಬ ವರದಿಗಳೂ ಇವೆ. ಸಲ್ಮಾನ್ ಮತ್ತು ಐಶ್ವರ್ಯಾ ನಡುವಿನ ಫೋನ್ ಸಂಭಾಷಣೆಯನ್ನು ಮಾಧ್ಯಮವೊಂದು ಬಿಡುಗಡೆ ಮಾಡಿತ್ತು.
ಆಗಸ್ಟ್ 28, 2001 ರಂದು ಇಬ್ಬರ ನಡುವಿನ ಸಂಭಾಷಣೆಯಲ್ಲಿ ತಾನು ಮತ್ತು ಪ್ರೀತಿ ಜಿಂಟಾ ದೈಹಿಕ ಸಂಪರ್ಕ ಹೊಂದಿದ್ದಾಗಿ ಹೇಳಿಕೊಂಡಿದ್ದರು, ಈ ಆಡಿಯೋ ಆಗಿನ ಸಮಯದಲ್ಲಿ ಬಾಲಿವುಡ್ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿತ್ತು. ವಿಧಿವಿಜ್ಞಾನ ವರದಿಗಳು ನಂತರ ಫೋನ್ಗಳು ನಕಲಿ ಎಂದು ಸಾಬೀತುಪಡಿಸಿದವು. ಈ ಆಡಿಯೋ ಸಂಭಾಷಣೆಯ ಕಾರಣ ಇದು ಪ್ರೀತಿ ಜಿಂಟಾ ಮತ್ತು ನೆಸ್ವಾಡಿ ಅವರ ಸಂಬಂಧ ಕೂಡ ಮುರಿದು ಬಿದ್ದಿತ್ತು. ನಂತರ, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಪ್ರೀತಿ ಜಿಂಟಾ ಸಲ್ಮಾನ್ ಜೊತೆಗಿನ ತಮ್ಮ ನಿಕಟತೆಯ ಬಗ್ಗೆ ಮಾತನಾಡಿದರು.
"ಸಲ್ಮಾನ್ ನನ್ನ ಒಳ್ಳೆಯ ಸ್ನೇಹಿತ. ನಾನು ಅವರನ್ನು ಬಹಳ ಸಮಯದಿಂದ ಬಲ್ಲೆ. ನಾವು ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಿದ್ದೇವೆ. ಆದರೆ ನಮ್ಮ ನಡುವೆ ಸ್ನೇಹಕ್ಕಿಂತ ಹೆಚ್ಚೇನೂ ಇಲ್ಲ" ಎಂದು ಪ್ರೀತಿ ಜಿಂಟಾ ಆ ಸಮಯದಲ್ಲಿ ಹೇಳುತ್ತಾ, ವದಂತಿಗಳಿಗೆ ತೆರೆ ಎಳೆದಿದ್ದರು. ಐಶ್ವರ್ಯಾ ಮತ್ತು ಸಲ್ಮಾನ್ ಬೇರ್ಪಟ್ಟರು. ನಂತರ ಐಶ್ವರ್ಯಾ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.
ಪ್ರೀತಿ ಜಿಂಟಾ 2016 ರಲ್ಲಿ ಅಮೆರಿಕದ ಉದ್ಯಮಿ ಜೀನ್ ಗುಡೆನಫ್ ಅವರನ್ನು ವಿವಾಹವಾದರು. ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಲ್ಮಾನ್ ಮತ್ತು ಐಶ್ವರ್ಯಾ 2002 ರಲ್ಲಿ ಬೇರ್ಪಟ್ಟರು. ಅದಾದ ನಂತರ, ಐಶ್ವರ್ಯಾ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಪ್ರೀತಿಯ ವಿಘಟನೆಯ ಬಗ್ಗೆ ಮಾತನಾಡಿದರು.
"ಕಳೆದ ಮಾರ್ಚ್ನಲ್ಲಿ ಸಲ್ಮಾನ್ ಮತ್ತು ನಾನು ಬೇರ್ಪಟ್ಟೆವು. ಆದರೆ ಸಲ್ಮಾನ್ ಖಾನ್ಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ಬೇರ್ಪಡುವಿಕೆಯ ನಂತರವೂ, ಸಲ್ಮಾನ್ ನನಗೆ ಕರೆ ಮಾಡಿ ಸುಳ್ಳು ಹೇಳುತ್ತಿದ್ದರು. ನಾನು ಕೆಲಸ ಮಾಡುತ್ತಿದ್ದ ನಟರೊಂದಿಗೆ ನನಗೆ ಸಂಬಂಧವಿದೆ ಎಂದು ಅವರು ಅನುಮಾನಿಸಿದರು. ಅಭಿಷೇಕ್ ಬಚ್ಚನ್ನಿಂದ ಶಾರುಖ್ ಖಾನ್ವರೆಗೆ ಎಲ್ಲರೊಂದಿಗೂ ನನ್ನನ್ನು ಜೋಡಿಸಿ ಮಾತನಾಡಿದ್ದರು".
"ಸಲ್ಮಾನ್ ನನಗೆ ದೈಹಿಕವಾಗಿ ಹಿಂಸೆ ನೀಡಿದರು. ಅದೃಷ್ಟವಶಾತ್, ಯಾವುದೇ ಗಾಯದ ಗುರುತುಗಳಿರಲಿಲ್ಲ. ಹಾಗಾಗಿ ಏನೂ ಆಗಿಲ್ಲ ಎಂಬಂತೆ ನಾನು ಕೆಲಸಕ್ಕೆ ಹೋದೆ" ಎಂದು ಆ ಸಮಯದಲ್ಲಿ ಐಶ್ವರ್ಯಾ ಹೇಳಿದರು.