Salman Khan Bodyguard: ಬಾಲಿವುಡ್ ಸೂಪರ್ಸ್ಟಾರ್ಗಳು ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಚರ್ಚೆಯಾಗುತ್ತಿರುತ್ತಾರೆ. ಕೆಲವೊಮ್ಮೆ ಪ್ರೇಮ ಜೀವನಕ್ಕೆ ಕುರಿತಾಗಿ ಚರ್ಚೆಯಾದರೆ, ಇನ್ನೂ ಕೆಲವೊಮ್ಮೆ ಬೆದರಿಕೆ ಸಂದೇಶಗಳ ಬಗ್ಗೆ ಸುದ್ದಿಯಲ್ಲಿರುತ್ತಾರೆ.

Salman Khan Bodyguard: ಏಪ್ರಿಲ್ 14, 2025 ರಂದು, ಅಪರಿಚಿತ ವ್ಯಕ್ತಿಯೊಬ್ಬ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದ. ಪರಿಶೀಲನೆ ನಡೆಸಿದ ಪೊಲೀಸರು ಸೂಪರ್ಸ್ಟಾರ್ಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪಿಯನ್ನು ಗುಜರಾತ್ನ ವಡೋದರಾದಿಂದ ವಶಕ್ಕೆ ಪಡೆದರು. ಪೊಲೀಸರ ಪ್ರಕಾರ, 26 ವರ್ಷದ ಯುವಕನೊಬ್ಬ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಆದರೆ, ಆ ಹುಡುಗನ ಕುಟುಂಬ ಸದಸ್ಯರು ಆತ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ. ಇದೇ ಕಾರಣದಿಂದ ಸಲ್ಮಾನ್ ಖಾನ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಇದಕ್ಕೂ ಮುನ್ನ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಸದಸ್ಯರಿಗೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿವೆ. ಒಮ್ಮೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಶೂಟರ್ಗಳು ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಸೂಪರ್ಸ್ಟಾರ್ ಮನೆಯ ಮೇಲೆ ಗುಂಡು ಹಾರಿಸಿದರು ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಗುಂಡಿನ ದಾಳಿ ನಡೆದ ಘಟನೆಯ ನಂತರ, ಸಲ್ಮಾನ್ ಖಾನ್ ಅವರಿಗೆ Y+ ಸೆಕ್ಯುರಿಟಿಯನ್ನು ಒದಗಿಸಲಾಗಿತ್ತು. ಇದಲ್ಲದೆ, ನಟನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಸಲ್ಮಾನ್ ಖಾನ್ ಅವರ ಭದ್ರತೆಯ ಸಂಪೂರ್ಣ ಜವಾಬ್ದಾರಿ ಅವರ ವೈಯಕ್ತಿಕ ಅಂಗರಕ್ಷಕ ಶೇರಾ ಅವರ ಮೇಲಿದೆ. ಶೇರಾ ಯಾವಾಗಲೂ ಸೂಪರ್ಸ್ಟಾರ್ ಜೊತೆ ನೆರಳಿನಂತೆ ಇರುತ್ತಾರೆ.
ಅಂಗರಕ್ಷಕರು, ಸ್ಟಾರ್ಗಳ ನೆರಳಿನಂತೆ ಅವರೊಂದಿಗೆ ಇರುತ್ತಾರೆ. ಅವರು ಎಲ್ಲಾ ದಿಕ್ಕಿನಲ್ಲೂ ಕಣ್ಣಿಟ್ಟು ತಮ್ಮ ನಟರನ್ನು ಕಾಯುತ್ತಾರೆ. ಸಲ್ಮಾನ್ ಖಾನ್ ಅವರ ವೈಯಕ್ತಿಕ ಅಂಗರಕ್ಷಕ ಶೇರಾ ಸಾಕಷ್ಟು ಜನಪ್ರಿಯ. ಶೇರಾ ಕಳೆದ 25 ವರ್ಷಗಳಿಂದ ಸಲ್ಮಾನ್ ಖಾನ್ ಜೊತೆಗಿದ್ದು, ಸಲ್ಮಾನ್ ಖಾನ್ ಅವರನ್ನು ಎಲ್ಲಾ ಬೆದರಿಕೆಗಳಿಂದಲೂ ಅವರನ್ನು ಕಾಯುತ್ತಾ, ಅವರಿಗೆ ಸ್ವಲ್ಪವೂ ಅಪಾಯ ಬರದಂತೆ ಕಾಯುತ್ತಾರೆ. ಭೈಜಾನ್ ಶೇರಾ ಅವರನ್ನು ತನ್ನ ಕುಟುಂಬದ ಸದಸ್ಯನೆಂದು ಪರಿಗಣಿಸುತ್ತಾರೆ. ಶೇರಾ ಅವರ ನಿಜವಾದ ಹೆಸರು ಗುರ್ಮೀತ್ ಸಿಂಗ್ ಜಾಲಿ, ಶೇರಾ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಇವರು ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.
ಶೇರಾ ಕೂಡ ತನ್ನ ಮಾಲೀಕ ಸಲ್ಮಾನ್ ಖಾನ್ ನಂತೆಯೇ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಶೇರಾಗೆ ದುಬಾರಿ ಕಾರುಗಳೆಂದರೆ ತುಂಬಾ ಇಷ್ಟ. ಮಾಧ್ಯಮ ವರದಿಗಳ ಪ್ರಕಾರ, ಶೇರಾ ಸಲ್ಮಾನ್ ಖಾನ್ ಅವರಿಂದ ಭದ್ರತೆಗಾಗಿ ಪ್ರತಿ ತಿಂಗಳು 15 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಅವರು ವಾರ್ಷಿಕವಾಗಿ 2 ಕೋಟಿ ರೂ.ಗಳವರೆಗೆ ಸಂಪಾದಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮ ವರದಿಗಳ ಪ್ರಕಾರ, ಶೇರಾ ಅವರ ಒಟ್ಟು ಸಂಪತ್ತು ಸುಮಾರು 100 ಕೋಟಿ ರೂ. ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ 1995 ರಿಂದ ಖಾನ್ ಕುಟುಂಬದೊಂದಿಗೆ ಇದ್ದಾರೆ. ಅವರು ಸ್ವತಃ ಟೈಗರ್ ಸೆಕ್ಯುರಿಟಿ ಎಂಬ ಭದ್ರತಾ ಸಂಸ್ಥೆಯನ್ನು ನಡೆಸುತ್ತಾರೆ, ಇದರಿಂದ ಅವರು ಉತ್ತಮ ಹಣವನ್ನು ಸಹ ಗಳಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ