"ಜೀವನ ಸಾಕಾಗಿದೆ, ನನಗೆ ನಿಮ್ಮ ಬೆಂಬಲ ಬೇಕಾಗಿದೆ" ಎಂದು ಕಣ್ಣೀರಿಟ್ಟ ಸಲ್ಮಾನ್‌ ಖಾನ್‌! ಅಂಗಲಾಚಲು ಕಾರಣವೇನು?

salman khan: ಸಿನಿಮಾ ಇಂಡಸ್ಟ್ರಿಯಲ್ಲಿ ಸೋಲು, ಗೆಲುವು ಸಾಮಾನ್ಯ. ಸದ್ಯ ಸೋಲಿನಿಂದ ಕಂಗೆಟ್ಟಿರುವ ಸಲ್ಮಾನ್‌ ಖಾನ್‌ ಅಂಗಲಾಚಿ ಸಹಾಯ ಕೇಳಿದ್ದಾರೆ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಮನಸ್ಸಿನ ದುಖಃವನ್ನು ಹೊರಹಾಕಿದ್ದಾರೆ.  

Written by - Zee Kannada News Desk | Last Updated : Apr 3, 2025, 04:18 PM IST
  • ಬ್ಲಾಕ್‌ ಬಸ್ಟರ್‌ ಆಗುತ್ತೆ ಅಂದುಕೊಳ್ಳುವ ಸಿನಿಮಾಗಳು ಸೋತು ಸುಣ್ಣವಾಗುತ್ತೆ.
  • ಹೊಸಬರು ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲ್ಲುವುದು ಸಿನಿಮಾದ ಹಿಟ್‌ ಕೊಡುವುದು ಎಂದರೆ ಸುಲಭದ ಮಾತಾಗಿರಲಿಲ್ಲ.
  • ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಸಿನಿಮಾ ಆಮೆಯಂತೆ ತೆವಳುತ್ತಿದೆ.
"ಜೀವನ ಸಾಕಾಗಿದೆ, ನನಗೆ ನಿಮ್ಮ ಬೆಂಬಲ ಬೇಕಾಗಿದೆ" ಎಂದು ಕಣ್ಣೀರಿಟ್ಟ ಸಲ್ಮಾನ್‌ ಖಾನ್‌! ಅಂಗಲಾಚಲು ಕಾರಣವೇನು?

salman khan: ಅಭಿಮಾನಿಗಳು ಯಾವಾಗ, ಹೇಗೆ ತಮ್ಮ ಮನಸ್ಸು ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ಅಂದಾಜಿಸಲು ಆಗುವುದಿಲ್ಲ, ಕೆಲವೊಮ್ಮೆ ನಿರೀಕ್ಷೆಯೇ ಇರದ ಸಿನಿಮಾಗಳು ಇಂಡಸ್ಟ್ರಿಯಲ್ಲಿ ಗೆದ್ದು, ಇನ್ನೂ ಕೆಲವೊಮ್ಮೆ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡು ಸಿನಿಮಾ ಗೆದ್ದೇ ಗೆಲ್ಲುತ್ತೆ, ಬ್ಲಾಕ್‌ ಬಸ್ಟರ್‌ ಆಗುತ್ತೆ ಅಂದುಕೊಳ್ಳುವ ಸಿನಿಮಾಗಳು ಸೋತು ಸುಣ್ಣವಾಗುತ್ತೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರ ಈ ಸಮಸ್ಯೆ ಇದೆ ಎಂದುಕೊಂಡರೆ ಅದು ಅಕ್ಷರಷಃ ತಪ್ಪು. ಇಂತಹ ಸಮಸ್ಯೆ ಬಾಲಿವುಡ್‌ ನಟರನ್ನು ಸಹ ಕಾಡುತ್ತವೆ, ಎಲ್ಲಾ ಇಂಡಸ್ಟ್ರಿಯಲ್ಲಿಯೂ ಇಂತಹದ್ದೊಂದು ಕತೆ ಇದ್ದೇ ಇರುತ್ತೆ.

Add Zee News as a Preferred Source

ಮೊದಲೊಂದು ಕಾಲ ಇತ್ತು, ಆಗಿನ ಸಂದರ್ಭದಲ್ಲಿ ಹೊಸಬರು ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲ್ಲುವುದು ಸಿನಿಮಾದ ಹಿಟ್‌ ಕೊಡುವುದು ಎಂದರೆ ಸುಲಭದ ಮಾತಾಗಿರಲಿಲ್ಲ, ಆದರ ಇದೀಗ ಆಗಲ್ಲ, ಲಕ್‌ ಇದ್ರೆ ಪ್ರೇಕ್ಷಕರು ನೋಡಬೇಕು ಸಿನಿಮಾದ ಕತೆ ಚೆನ್ನಾಗಿದೆ, ಈ ಸಿನಿಮಾವನ್ನು ಗೆಲ್ಲಿಸಲೇ ಬೇಕು ಎಂದು ನಿರ್ಧಾರ ಮಾಡಿದರೆ, ಅದನ್ನು ಯಾರಿಂದಲೂ ತಡೆಯೋಕೆ ಸಾಧ್ಯವಾಗುವುದಿಲ್ಲ. ಆದರೆ, ಅದು ಸ್ಟಾರ್‌ ನಟನ ಸಿನಿಮಾವಾಗಿದ್ರು ಸ್ಟೋರಿ ಚೆನ್ನಾಗಿಲ್ಲ ಅಂದ್ರೆ ಆ ದೇವರೇ ದರೆಗಿಳಿದು ಬಂದರೂ ಸಹ ಆ ಸಿನಿಮಾವನ್ನು ಗೆಲ್ಲಿಸೋಕೆ ಸಾಧ್ಯ ಆಗುವುದಿಲ್ಲ.

ಇದನ್ನೂ ಓದಿ: ನನಗೆ ಆಗ 17 ವರ್ಷ ವಯಸ್ಸು.. ಆತ ಹೇಳಿದಂತೆ ಮಾಡಿದೆ, ಅಪ್ಪ ನೋಡಿ ಬೇಸರವಾಗಿದ್ರು: ನಟಿ ಅಮಲಾ ಪೌಲ್

ಹೌದು, ಇದಕ್ಕೆ ಸದ್ಯದ ಪ್ರತ್ಯಕ್ಷ ಉದಾಹರಣೆ ಸಲ್ಮಾನ್‌ ಖಾನ್‌, ನಟ ಸಲ್ಮಾನ್‌ ಖಾನ್‌ ಅಭಿನಯದ ಸಿಕಂದರ್‌ ಸಿನಿಮಾ ಇತ್ತೀಚೆಗಷ್ಟೆ ರಿಲೀಸ್‌ ಆಗಿತ್ತು, ಈದ್‌ ದಿನದ ಸಂದರ್ಭದಲ್ಲಿ ರಿಲೀಸ್‌ ಆದ ಈ ಸಿನಿಮಾದ ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಗಳಿದ್ದವು, ಸಿನಿಮಾ ರಿಲೀಸ್‌ ಆಗೋಕೂ ಮುಂಚೆಯಂತೂ, ಅಭಿಮಾನಿಗಳು ಈ ಸಿನಿಮಾ ಅದ್ಯಾವಗ್ಯಾಗ ರಿಲೀಸ್‌ ಆಗುತ್ತೋ ಎಂದು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದರು, ಪ್ರತಿ ವರ್ಷದಂತೆ ಈದ್‌ ಹಬ್ಬದಂದು ರಿಲೀಸ್‌ ಆಗುತ್ತಿದ್ದ ಸಲ್ಮಾನ್‌ ಖಾನ್‌ ಸಿನಿಮಾಗಳು ಹಿಟ್‌ ಆಗುತ್ತಿದ್ದವು, ಬಾಕ್ಸ್‌ ಆಫಿಸ್‌ ಅನ್ನು ಚಿಂದಿ ಚಿಂದಿ ಮಾಡುತ್ತಿದ್ದವು, ಆದರೆ ಈ ವರ್ಷ ಸೀನ್‌ ಕಂಪ್ಲೀಟ್‌ ರಿವರ್ಸ್‌ ಆಗಿದೆ. ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಸಿನಿಮಾ ಆಮೆಯಂತೆ ತೆವಳುತ್ತಿದೆ.

ರಶ್ಮಿಕಾ ಮಂದಣ್ಣ ಈವರೆಗೂ ಹಿಟ್‌ ಸಿನಿಮಾಗಳನ್ನಷ್ಟೇ ಕೊಡುತ್ತಾ ಬಂದಿದ್ದಾರೆ, ಅಬ್ಬಬ್ಬಾ.. ರಶ್ಮಿಕಾ ಲಕ್ಕೋ ಲಕ್ಕು, ಸಿಕಂದರ್‌ ಕೂಡ ಪಕ್ಕಾ ಹಿಟ್‌ ಆಗುತ್ತೆ ಅಂತ ಅಭಿಮಾನಿಗಳು ಟಾಲ್ಕ್ ಶುರು ಮಾಡಿದ್ದರು, ಆದರೆ ಇದೀಗ ಆ ನಂಬಿಕೆ ಎಲ್ಲಾ ಹುಸಿಯಾಗಿದೆ, ರಶ್ಮಿಕಾ ಮಂದಣ್ಣ ಕೈನಲ್ಲಿಯೂ ಸಹ ಸಲ್ಮಾನ್‌ ಖಾನ್‌ ಅವರನ್ನು ಉಳಿಸೋಕೆ ಆಗದ ಪತಿಸ್ಥಿತಿಗೆ ತಂದು ನಿಲ್ಲಿಸಿದೆ. 

ಇದನ್ನೂ ಓದಿ: ʼನಾಗ ಚೈತನ್ಯ ತುಂಬಾ ರೊಮ್ಯಾಂಟಿಕ್.. ಎರಡು ಗಂಟೆಗಳ ಕಾಲ ಬರೀ ಅದನ್ನೇ ಮಾಡ್ತಾರೆʼ.. ಪತ್ನಿ ಶೋಭಿತಾ ಶಾಕಿಂಗ್‌ ಹೇಳಿಕೆ!

ಸ್ಟಾರ್‌ ಹೀರೋಗಳಿಗೆ ಆ ನೇಮ್‌ ಫೇಮ್‌ ಯಾವುದೂ ಸಹ ಸುಮ್ಮನೆ ಬರುವುದಿಲ್ಲ. ಅದಕ್ಕಾಗಿ ಅವರು ಎಷ್ಟೋ ವರ್ಷಗಲ ಕಾಲ ಕಷ್ಟ ಪಟ್ಟಿರುತ್ತಾರೆ, ಸಾಲು ಸಾಲು ಸೋಲು ನೋವುಗಳನ್ನು ಅನುಭವಿಸಿ, ಎತ್ತರಕ್ಕೆ ಬೆಳೆದಿರುತ್ತಾರೆ. ಇದೀಗ ಹಾಗೆ ಹಂತ ಹಂತವಾಗಿ ಬೆಳೆದು ಒಂದು ರೇಂಜ್‌ಗೆ ಎದ್ದು ನಿಂತಿರುವ ಸಲ್ಮಾನ್‌ ಖಾನ್‌ ದೊಪ್ಪನೆ ನೆಲಕ್ಕೆ ಬಿದ್ದಂತಿದೆ, ಅಷ್ಟು ವರ್ಷಗಳ ಶ್ರಮ, ಇದೀಗ ನೀರು ಪಾಲಾದಂತಿದೆ. 

ಹೌದು, ಸಲ್ಮಾನ್‌ ಖಾನ್‌ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಸಲ್ಮಾನ್‌ ಖಾನ್‌ ಅವರಿಗಿದ್ದ ಡಿಮ್ಯಾಂಡ್‌ ಕಡಿಮೆಯಾಗುತ್ತಿದೆ, ಈಗಿರುವಾಗ ಸಲ್ಮಾನ್‌ ಖಾನ್‌ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ,ತಮ್ಮ ಮನದ ನೋವನ್ನು ಹೊರ ಹಾಕುತ್ತಾ ಅಂಗಲಾಚಿ ನನಗೆ ಬೆಂಬಲ ನೀಡಿ ಎಂದು ಬೇಡಿಕೊಂಡಿದ್ದಾರೆ. ತನ್ನ ಸಿನಿಮಾಗಳು ಮಾತ್ರ ಅಲ್ಲದೆ, ಬೇರೆಯವರ ಸಿನಿಮಾಗಳು ಸಹ ಬೆಳೆಯಬೇಕು, ಅವು ಕೂಡ ಗೆಲ್ಲಬೇಕು ಎಂದು ಸಲ್ಮಾನ್‌ ಖಾನ್‌ ಎಲ್ಲಾ ಸಿನಿಮಾಗಳಿಗೂ ತಮ್ಮ ಕೈಯಲ್ಲಾದಷ್ಟು ಬೆಂಬಲವನ್ನು ಕೊಡುತ್ತಲೇ ಬಂದಿದ್ದಾರೆ. ಆದರೆ, ಬೇರೆಯವರ ಸಿನಿಮಾಗಳಿಗೆ ಸಲ್ಮಾನ್‌ ಖಾನ್‌ ಕೊಟ್ಟುಷ್ಟು ಬೆಂಬಲ ಅವರ ಸಿನಿಮಾಗಳಿಗೆ ಯಾರು ಕೂಡ ಕೊಡುತ್ತಿಲ್ಲ, ಬಾಲಿವುಡ್‌ ಇಂಡಸ್ಟ್ರಿಗೆ ಸಲ್ಮಾನ್‌ ಖಾನ್‌ ಸಾಥ್‌ ಕೊಟ್ಟಂತೆ, ಸಲ್ಲುಗೆ ಬಾಲಿವುಡ್‌ ಕೈ ಹಿಡಿಯುತ್ತಿಲ್ಲ. 

ಇದನ್ನೂ ಓದಿ: ತಾಯಿಯ ಒತ್ತಾಯದ ಮೇರೆಗೆ ಸಹ ನಟಿಯ ಮೇಲೆ ಪ್ರೀತಿ.. ಇಬ್ಬರನ್ನು ಮದುವೆಯಾಗಿ ಇಂದು ಸಿಂಗಲ್‌ ಆಗಿ ಜೀವನ ಸಾಗಿಸುತ್ತಿರುವ ಈ ನಟ ಸೌತ್‌ ಇಂಡಸ್ಟ್ರಿಯ ಸೂಪರ್‌ಸ್ಟಾರ್‌

ಸಲ್ಮಾನ್‌ ಖಾನ್‌ ಸಿನಿಮಾ ನೋಡಿ ಕೆಲವೊಂದು ಮೆಚ್ಚುಗೆಯ ಮಾತುಗಳನ್ನಾಡುವುದನ್ನಷ್ಟೇ ಇಂಡಸ್ಟ್ರಿಯಲ್ಲಿ ಎಲ್ಲರು ಭಯಸುತ್ತಾರೆ, ಅದಕ್ಕಿಂತ ಹೆಚ್ಚಿನದ್ದೇನನ್ನೂ ಇಲ್ಲಿ ಯಾರೂ ಕೂಡ ನಿರೀಕ್ಷಿಸುವುದಿಲ್ಲ. ಈಗಿರುವಾಗ ಸಲ್ಮಾನ್‌ ಖಾನ್‌ ಅವರ ಸಿನಿಮಾಗಳಗೆ ಯಾರೂ ಕೂಡ ಸಾಥ್‌ ನೀಡದೆ ಇರುವುದು ಅವರಿಗೆ ದುಖಃವನ್ನುಂಟು ಮಾಡಿದೆ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, "ನನ್ನ ಚಿತ್ರಗಳಿಗೆ ಯಾರ ಬೆಂಬಲವೂ ಇಲ್ಲದೆ ಇದ್ದರೂ ಗೆಲ್ಲತ್ತೆ ಎಂದು ಎಲ್ಲರೂ ಅಂದುಕೊಂಡಿರಬಹುದು, ಆದರೆ, ನನಗೂ ಸಹ ಎಲ್ಲರಂತೆಯೇ ಬೆಂಬಲ ಬEಕು" ಎಂದು ಹೇಳಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News