close

News WrapGet Handpicked Stories from our editors directly to your mailbox

ದೀಪಿಕಾ ಪಡುಕೋಣೆ ಜೊತೆ ಸಲ್ಮಾನ್ ಖಾನ್ ಯಾಕೆ ಸಿನಿಮಾ ಮಾಡಿಲ್ಲ ಗೊತ್ತಾ?

  

Updated: Mar 28, 2019 , 12:36 PM IST
ದೀಪಿಕಾ ಪಡುಕೋಣೆ ಜೊತೆ ಸಲ್ಮಾನ್ ಖಾನ್ ಯಾಕೆ ಸಿನಿಮಾ ಮಾಡಿಲ್ಲ ಗೊತ್ತಾ?

ನವದೆಹಲಿ: ಬಾಲಿವುಡ್ ನಲ್ಲೀಗ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೆಸರು ಕೇಳಿದ್ರೆ ಸಾಕು ಜನರು ಸಿನಿಮಾ ನೋಡಲು ಮುಗಿಬೀಳುತ್ತಾರೆ. ಇದುವರೆಗೂ ಬಾಲಿವುಡ್ ನಲ್ಲಿರುವ ಎಲ್ಲಾ A ಲಿಸ್ಟ್ ನಟಿಯರೊಂದಿಗೆ ಅಭಿನಯಿಸಿರುವ ಸಲ್ಮಾನ್ 'ಪದ್ಮಾವತ್' ಖ್ಯಾತಿಯ ದೀಪಿಕಾ ಪಡುಕೋಣೆ ಜೊತೆ ಮಾತ್ರ ಯಾಕೆ ನಟಿಸಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. 

ಈಗಾಗಲೇ ಹಲವು ಬಾರಿ ದೀಪಿಕಾ-ಸಲ್ಮಾನ್ ಖಾನ್ ಜೋಡಿಯಾಗಿ ಚಿತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ವದಂತಿಗಳು ಹರಡಿದರೂ, ಅದೆಲ್ಲವೂ ವದಂತಿಯಾಗಿಯೇ ಉಳಿದಿವೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ದೀಪಿಕಾ ಪಡುಕೋಣೆ ಜೊತೆ ಚಿತ್ರ ಮಾಡದ ಬಗ್ಗೆ ಡಿಎನ್ಎ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿರುವ ಸಲ್ಮಾನ್ ಖಾನ್, " ನನಗೂ ಕೂಡ ಅಚ್ಚರಿಯಾಗಿದೆ, ದೀಪಿಕಾ ಜೊತೆ ಯಾವಾಗ ಅಭಿನಯಿಸುತ್ತೇನೆ? " ಎಂದು. ಇದುವರೆಗೂ ದೀಪಿಕಾ ಜೊತೆ ಅಭ್ನಯಿಸಲು ನನಗೆ ಯಾರೂ ಕೇಳಿಲ್ಲ ಎಂದು ನಗುತ್ತಲೇ ಹೇಳಿದ ಸಲ್ಮಾನ್, ದೀಪಿಕಾ ನಿಜಕ್ಕೂ ಬಹುದೊಡ್ಡ ನಟಿ. ಹಾಗಾಗಿ ನನ್ನ ಜೊತೆ ಸಿನಿಮಾ ಮಾಡುವ ಅರ್ಹತೆ ಅವರಿಗಿದೆ. ಆದರೆ ಸದ್ಯಕ್ಕೆ ಅಂತಹ ಸುದ್ದಿ ಇಲ್ಲ" ಎಂದಿದ್ದಾರೆ.

ಪ್ರಸ್ತುತ ಅಲಿ ಅಬ್ಬಾಸ್ ಜಾಫರ್ ಅವರ 'ಭಾರತ್' ಚಿತ್ರದಲ್ಲಿ ಸಲ್ಮಾನ್ ಅಭಿನಯಿಸುತ್ತಿದ್ದು, ಕತ್ರಿನಾ ಕೈಫ್ ಜೋಡಿಯಾಗಿದ್ದಾರೆ. ಟಬು, ದಿಶಾ ಪಟಾನಿ, ಶಶಾಂಕ್ ಅರೋರಾ, ಜಾಕಿ ಶ್ರೋಫ್, ಸುನಿಲ್ ಗ್ರೋವರ್, ಆಸಿಫ್ ಶೇಖ್ ಮತ್ತು ನೋರಾ ಫತೇಷಿ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ. ಜೂನ್ 5ರಂದು ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.