)
ನಾಗ ಚೈತನ್ಯ ಎರಡನೇ ಮದುವೆಯ ಬಳಿಕ ಸಮಂತಾ ರುತ್ ಪ್ರಭು ಸಹ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಲ್ಲದೇ ಮಗು ಪಡೆಯಲು ವಯಸ್ಸು ಮ್ಯಾಟರ್ ಆಗಲ್ಲ ಎಂದು ಸಮಂತಾ ಹೇಳಿದ್ದರು.
ಸಮಂತಾ ಇತ್ತೀಚೆಗೆ ಬಾಲಿವುಡ್ ನಿರ್ದೇಶಕರೊಬ್ಬರ ಜೊತೆ ಕಾಣಿಸಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಎಲ್ಲದರ ನಡುವೆ ನೀನೊಬ್ಬ ಶ್ರೇಷ್ಠ ವ್ಯಕ್ತಿ, ನಮ್ಮ ಸುಂದರ ಮಗುವಿಗೆ ಪರಿಪೂರ್ಣ ತಂದೆ ಎಂದು ಸಮಂತಾ ಭಾವುಕರಾಗಿ ಹೇಳುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಮಂತಾ ಅವರ ಈ ಪೋಸ್ಟ್ ಭಾರೀ ವೈರಲ್ ಆಗಿದೆ.
ಸಮಂತಾ ರುತ್ ಪ್ರಭು ಗುಟ್ಟಾಗಿ ಎರಡನೇ ಮದುವೆ ಆದ್ರಾ? ಸಮಂತಾ ಗರ್ಭಿಣಿಯಾಗಿದ್ದಾರಾ? ಅವರು ಈ ರೀತಿ ಇಷ್ಟೊಂದು ಭಾವುಕರಾಗಿ ಹೇಳಿದ್ದು ಯಾರಿಗೆ ಎಂದು ಪ್ರಶ್ನೆಗಳು ಉದ್ಭವಿಸಿವೆ. ಆದರೆ ಅಸಲಿ ಸತ್ಯವೇ ಬೇರೆ ಇದೆ.
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರ ವಿವಾಹದ ಹಳೆಯ ವೀಡಿಯೊ ಇದಾಗಿದೆ. ಈ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ 2017ರಲ್ಲಿ ಅಕ್ಟೋಬರ್ 6 ರಂದು ಹಿಂದೂ ಆಚರಣೆಗಳ ಪ್ರಕಾರ ಮತ್ತು ಅಕ್ಟೋಬರ್ 7 ರಂದು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ಗೋವಾದಲ್ಲಿ ವಿವಾಹವಾದರು. ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2, 2021 ರಂದು ವಿಚ್ಛೇದನ ಪಡೆದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.