ʻನನ್ನಿಂದ ನೀವು ದೂರವಿದ್ದರೂ.. ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆʼ : ನಟಿ ಸಮಂತಾ ಕಣ್ಣೀರು

Samantha Rut Prabhu: ಸಮಂತಾ ರುತ್ ಪ್ರಭು ವೇದಿಕೆ ಮೇಲೆಯೇ ಕಣ್ಣೀರಿಟ್ಟ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : Jul 7, 2025, 12:08 AM IST
  • ಸಮಂತಾ ಭಾಷಣದ ವಿಡಿಯೋ
  • ಸಮಂತಾ ರುತ್ ಪ್ರಭು
  • ಸಮಂತಾ ಯುಎಸ್ ಕಾರ್ಯಕ್ರಮದ ಭಾಷಣ
ʻನನ್ನಿಂದ ನೀವು ದೂರವಿದ್ದರೂ.. ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆʼ : ನಟಿ ಸಮಂತಾ ಕಣ್ಣೀರು
ಸಮಂತಾ ಭಾಷಣದ ವಿಡಿಯೋ

Samantha emotional speech: ನಟಿ ಸಮಂತಾ ಅಮೆರಿಕದಲ್ಲಿ ಮೂರು ದಿನಗಳ ಕಾಲ ನಡೆಯುವ ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕ (TANA) 2025 ರ ಆಚರಣೆಯಲ್ಲಿ ಭಾಗವಹಿಸಿದ್ದರು. ಅಲ್ಲಿ  ವೇದಿಕೆಯಲ್ಲಿ ಮಾತನಾಡುವಾಗ ಸಮಂತಾ ಇದ್ದಕ್ಕಿದ್ದಂತೆ ಭಾವುಕರಾದರು. ಜನರ ಎದುರಲ್ಲೇ ಬಿಕ್ಕಿ ಬಿಕ್ಕಿ ಅಳುತ್ತ ಕಣ್ಣೀರು ಹಾಕಿದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Add Zee News as a Preferred Source

ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕ (TANA) 2025 ರ ವೇದಿಕೆಯಲ್ಲಿ ಸಮಂತಾ ಅವರು ಆಡಿದ ಮಾತುಗಳು ಸಖತ್‌ ವೈರಲ್‌ ಆಗಿವೆ. "ಈ ವೇದಿಕೆಯಲ್ಲಿ ನಿಲ್ಲುವ ಅವಕಾಶ ಸಿಕ್ಕಿದ್ದು ನನ್ನ ಜೀವನದಲ್ಲಿ ಒಂದು ದೊಡ್ಡ ಸಂತೋಷದ ಸಮಯ ಎಂದು ನಾನು ಭಾವಿಸುತ್ತೇನೆ. ಈ ವೇದಿಕೆಯಲ್ಲಿ ನಿಲ್ಲಲು ನನಗೆ 15 ವರ್ಷಗಳು ಬೇಕಾಯಿತು. ಪ್ರತಿ ವರ್ಷ ನಾನು ತೆಲುಗು ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕ (TANA) ಮತ್ತು ಇಲ್ಲಿನ ತೆಲುಗು ಜನರ ಬಗ್ಗೆ ಕೇಳುತ್ತಲೇ ಇರುತ್ತೇನೆ. ಆದರೆ ನಾನು ಇಲ್ಲಿಗೆ ಬಂದು ನೀವು ನನಗೆ ತೋರಿಸಿದ ಪ್ರೀತಿಗೆ ಧನ್ಯವಾದ ಹೇಳಲು ಈಗ ಸಾಧ್ಯವಾಯಿತು" ಎಂದು ಹೇಳಿದರು.

ಇದನ್ನೂ ಓದಿ: ಇಂಡಸ್ಟ್ರಿಯಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಸ್ಟಾರ್‌ ಹೀರೋಯನ್‌ ಈ ಫೋಟೋದಲ್ಲಿರುವ ಪುಟ್ಟ ಬಾಲಕಿ!

"ನನ್ನ ಮೊದಲ ಚಿತ್ರದೊಂದಿಗೆ ನೀವು ನನ್ನನ್ನು ಬೆಂಬಲಿಸಿದ್ದೀರಿ. ನೀವು ನನ್ನನ್ನು ನಿಮ್ಮ ಕುಟುಂಬದ ಸದಸ್ಯೆಯಾಗಿ ಸ್ವೀಕರಿಸಿದ್ದೀರಿ. ಅಂದಿನಿಂದ ನೀವು ನನಗೆ ನಿರಂತರ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದ ಹೇಳಲು ನನಗೆ ಇಷ್ಟು ವರ್ಷಗಳು ಬೇಕಾಯಿತು" ಎಂದು ಸಮಂತಾ ತಲೆ ಬಾಗಿಸಿ ನಮಿಸಿದರು.

 

 

"ನನ್ನ ವೃತ್ತಿಜೀವನದಲ್ಲಿ ನಾನು ಒಂದು ಪ್ರಮುಖ ಹಂತದಲ್ಲಿದ್ದೇನೆ. ನನ್ನ ಜೀವನದಲ್ಲಿ ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಪರವಾಗಿಲ್ಲ.. ನೀವು ನನ್ನೊಂದಿಗಿದ್ದೀರಿ ಎಂಬ ಧೈರ್ಯವಿದೆ. ನಾನು ತಲಾಲಾ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದೇನೆ. ನಿರ್ಮಾಪಕಿಯಾಗಿ ನಾನು ನನ್ನ ಮೊದಲ ಹೆಜ್ಜೆ ಇಟ್ಟಿದ್ದೇನೆ. ಉತ್ತರ ಅಮೆರಿಕದ ತೆಲುಗು ಜನರು ನನಗೆ ತುಂಬಾ ಬೆಂಬಲ ನೀಡಿದ್ದಾರೆ" ಎಂದು ಸಮಂತಾ ಹೇಳಿದರು.

"ನಾನು ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ.. ನಾನು ಯಾವುದೇ ತಪ್ಪು ಮಾಡಿದರೂ.. ನೀವು ಯಾವಾಗಲೂ ನನ್ನೊಂದಿಗಿರುತ್ತೀರಿ. ನನಗೆ ಅದರ ಬಗ್ಗೆ ಹೆಮ್ಮೆ ಇದೆ. ನಾನು ಎಲ್ಲಿಗೆ ಹೋದರೂ, ನಾನು ಏನೇ ಮಾಡಿದರೂ, ನಾನು ಯಾವುದೇ ಉದ್ಯಮದಲ್ಲಿ ಕೆಲಸ ಮಾಡಿದರೂ.. ತೆಲುಗು ಪ್ರೇಕ್ಷಕರು ನನ್ನ ಬಗ್ಗೆ ಹೆಮ್ಮೆ ಪಡುತ್ತಾರೋ ಇಲ್ಲವೋ ಎಂದು ನಾನು ಯೋಚಿಸುತ್ತೇನೆ. ಇಷ್ಟು ವರ್ಷಗಳ ಕಾಲ ನನ್ನ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಸಮಂತಾ ಹೇಳಿದರು.

 

 

"ನೀವು ನನಗೆ ಒಂದು ಗುರುತನ್ನು, ಕುಟುಂಬವನ್ನು ನೀಡಿದ್ದೀರಿ. ನಿಮ್ಮ ಕಾರಣದಿಂದಾಗಿಯೇ ಓ ಬೇಬಿ ಚಿತ್ರ ಮಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದೆ. ಇದೆಲ್ಲವೂ ನಿಮ್ಮಿಂದ ಸಾಧ್ಯವಾಯಿತು. ನೀವು ನನ್ನಿಂದ ದೂರವಿದ್ದರೂ, ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿರುತ್ತದೆ" ಎಂದು ಸಮಂತಾ ಇದ್ದಕ್ಕಿದ್ದಂತೆ ಕಣ್ಣೀರು ಹಾಕಿದ್ದಾರೆ. ಸಮಂತಾ ಅವರ ಈ ಭಾವುಕ ಮಾತುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಸಮಂತಾ ಅಲ್ಲ.. ನಾಗಚೈತನ್ಯ ಅವರ ಮೊದಲ ಕ್ರಶ್‌ ಈಕೆ! ಮೊದಲ ಗೆಳತಿಯ ಹೆಸರು ಬಿಚ್ಚಿಟ್ಟ ಚೈತು

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News