)
Samantha Remuneration : ಹಲವು ಬಾರಿ ಸಿನಿಮಾ ಫ್ಲಾಪ್ ಆದರೂ ಐಟಂ ಸಾಂಗ್ ಹಿಟ್ ಆಗಿದ್ದಿದೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ಡ್ಯಾನ್ಸ್ ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಟಾಪ್ ನಟಿಯರೂ ಐಟಂ ಸಾಂಗ್ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸ್ಟಾರ್ ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ.
ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದ ‘ಹೂ ಅಂತೀಯಾ ಮಾವ..’ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈಗಲೂ ಇದು ಜನರ ಫೆವರೇಟ್ ಹಾಡುಗಳಲ್ಲಿ ಒಂದು. ಈ ಹಾಡಿಗಾಗಿ ತೆಲುಗು ಸ್ಟಾರ್ ನಟಿ ಸಮಂತಾ ಸೊಂಟ ಬಳುಕಿಸಿದ್ದರು.
ಇಡೀ ಸಿನಿಮಾದಲ್ಲಿ ಐದು ನಿಮಿಷ ಕಾಣಿಸಿಕೊಂಡ ಸಮಂತಾ ಪಡೆದಿದ್ದು 5 ಕೋಟಿ ರೂಪಾಯಿ ಸಂಭಾವನೆ ಎನ್ನಲಾಗಿದೆ. ಇದು ಸಮಂತಾ ವೃತ್ತಿಜೀವನದ ಮೊದಲ ಐಟಂ ಸಾಂಗ್. ಹಾಡು, ಡ್ಯಾನ್ಸ್ ಎಲ್ಲವೂ ಸೂಪರ್ ಹಿಟ್ ಆಯಿತು.
ನಾಯಕಿ ಸಮಂತಾ ಟಾಲಿವುಡ್ನಲ್ಲಿ ತನಗೊಂದು ವಿಶೇಷ ಇಮೇಜ್ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಟಾಪ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಸಮಂತಾ ವಿಚ್ಛೇದನದ ಬಳಿಕ ಸಂಪೂರ್ಣವಾಗಿ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ಸಮಂತಾ ಸಹ ಶೀಘ್ರದಲ್ಲೇ ಎರಡನೇ ಮದುವೆ ಆಗಬಹುದು ಎಂಬ ವದಂತಿ ಗಳಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.