)
Samantha new movie : ಸಮಂತಾ ರುತ್ ಪ್ರಭು ಸೌತ್ ಸಿನಿರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಅವರು ವಿಜಯ್, ವಿಕ್ರಮ್, ಜೀವ, ಸಿದ್ಧಾರ್ಥ್, ಸೂರ್ಯ, ಧನುಷ್, ಶಿವಕಾರ್ತಿಕೇಯನ್ ಮತ್ತು ವಿಜಯ್ ಸೇತುಪತಿ ಸೇರಿದಂತೆ ತಮಿಳು ಚಿತ್ರರಂಗದ ಪ್ರಮುಖ ನಟರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಅನೇಕ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ.
ಅಲ್ಲದೆ, ನಟ ನಾಗ ಚೈತನ್ಯ ಜೊತೆ ವಿವಾಹವಾಗುವ ಮೂಲಕ ಸ್ಯಾಮ್ ಪ್ಯಾನ್ಸ್ ಖಷಿಗೆ ಕಾರಣರಾಗದ್ದರು. ಆದರೆ ಈ ಮದುವೆ 4 ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ತಮ್ಮ ವೈವಾಹಿಕ ಜೀವನದಿಂದ ಬೇರ್ಪಟ್ಟು ವಿಚ್ಛೇದನ ಪಡೆದರು. ಇದರ ನಂತರ, ಇಬ್ಬರೂ ತಮ್ಮ ಜೀವನದಲ್ಲಿ ಬ್ಯುಸಿಯಾದರು.
ವಿಚ್ಛೇದನದ ನಂತರ, ನಿರಂತರವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಮಂತಾ ಅನಾರೋಗ್ಯದ ಕಾರಣ ಚಿತ್ರರಂಗದಿಂದ ದೂರ ಸರಿದರು. ಪ್ರಸ್ತುತ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಅವರ ನಿರ್ಮಾಣದಲ್ಲಿ ಬಿಡುಗಡೆಯಾದ ಶುಭಂ ಚಿತ್ರವು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಈ ಪರಿಸ್ಥಿತಿಯಲ್ಲಿ, ಸಮಂತಾ ಮತ್ತೆ ಚಲನಚಿತ್ರದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಕುರಿತು ಸಮಂತಾ ಸಿಹಿ ಸುದ್ದಿ ನೀಡಿದ್ದಾರೆ.
ನಟಿ ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಲಿರುವ ಚಿತ್ರ 'ಮಾ ಇಂಟಿ ಬಂಗಾರಂ'. ಈ ಚಿತ್ರವನ್ನು ಸಮಂತಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ, ನಟಿ ಸಮಂತಾ ಜೊತೆಗೆ ನಟರಾದ ಗುಲ್ಶನ್ ದೇವಯ್ಯ, ದಿಗಂತ್, ಗೌತಮಿ ಮತ್ತು ಮಂಜುಷಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಘೋಷಣೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ.