)
ಇತ್ತೀಚಿಗೆ ಅಷ್ಟೇ ಎರಡನೇ ಮದುವೆಯಾಗಿರುವ ಟಾಲಿವುಡ್ ಬ್ಯೂಟಿ ಸಮಂತಾ ರುತ್ಪ್ರಭು ಅವರು ಮತ್ತೆ ಸಿನಿಮಾ ಫೀಲ್ಡ್ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. ಏ ಮಾಯ ಚೇಶಾವೆ ಮೂವಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸ್ಯಾಮ್ ಬಳಿ ಕಡಿಮೆ ಸಮಯದಲ್ಲೇ ದೊಡ್ಡ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗು ಸೇರಿ ಸ್ಟಾರ್ ನಟರೊಡನೆ ಅಭಿನಯಿಸಿ ಅಭಿಮಾನಿಗಳನ್ನು ಸಮಂತಾ ಸಂಪಾದಿಸಿದ್ದಾರೆ.
ಈ ಹಿಂದೆ ಸಮಂತಾ ಅವರು ಮಾತನಾಡಿರುವುದು ಈಗ ವೈರಲ್ ಆಗುತ್ತಿವೆ. ತೆಲುಗು ಸಿನಿಮಾ ರಂಗದಲ್ಲಿ ಬಿಗ್ ಸ್ಟಾರ್ಗಳಡೊನೆ ನಟಿಸಿದರೂ ಇದರಲ್ಲಿ ಒಬ್ಬರು ಮಾತ್ರ ನನ್ನ ಗುರುಗಳು ಎಂದು ಸ್ಯಾಮ್ ಹೇಳಿದ್ದಾರೆ. ಆಂಧ್ರ ಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್, ಮಹೇಶ್ ಬಾಬು, ನಾಗ ಚೈತನ್ಯ, ಅಲ್ಲು ಅರ್ಜುನ್, ಎನ್ಟಿಆರ್ ಸೇರಿ ಇನ್ನು ಕೆಲವು ನಟರ ಜೊತೆ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ತೆಲುಗಿನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ಅತ್ತರಿಂಟಿಕಿ ದಾರೇದಿ ಸಿನಿಮಾದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ಸಮಂತಾ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲ, ಸಿನಿಮಾ ಕೂಡ ಬಿಗ್ ಹಿಟ್ ಆಗಿ ದೊಡ್ಡ ಮಟ್ಟದಲ್ಲೇ ಹಣ ಗಳಿಸಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ, ಈ ಸಿನಿಮಾದಿಂದ ಪವನ್ ಕಲ್ಯಾಣ್ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡೆ ಎಂದಿದ್ದರು. ಸಿನಿಮಾ ಶೂಟಿಂಗ್ ವೇಳೆ ಕ್ಲಿಕ್ ಮಾಡಿದಂತ ಫೋಟೋವೊಂದು ಸಖತ್ ವೈರಲ್ ಆಗಿತ್ತು.
ಈ ಫೋಟೋದಲ್ಲಿ ಪವನ್ ಕಲ್ಯಾಣ್ ಅವರು ಸಮಂತಾರನ್ನ ಆಶೀರ್ವಾದಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಮಂತಾ, ಪವನ್ ಕಲ್ಯಾಣ್ ನನ್ನ ಗುರುಗಳು. ಸ್ವಿಟ್ಜರ್ಲೆಂಡ್ನಲ್ಲಿ ಸುಮ್ಮನೆ ತೆಗೆದ ಫೋಟೋ ಅದು. ಸಿನಿಮಾದಲ್ಲಿ ಅವರು ಇಲ್ಲದಿದ್ದರೆ ನನ್ನ ಗುರುಗಳು ಆಗಿರಿ ಎಂದು ಅವರಲ್ಲಿ ಮನವಿ ಮಾಡುತ್ತಿದ್ದೆ ಎಂದು ಸಮಂತಾ ಅವರು ಹೇಳಿದ್ದಾರೆ.