Sai Pallavi Old Video: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ನಾಯಕಿಯಾಗುವ ಮುನ್ನ ಟಿವಿ ಶೋ, ಸ್ಟೇಜ್ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಆಗ ತೆಗೆದ ವಿಡಿಯೋ ಕ್ಲಿಪ್‌ ಒಂದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ನಟನಾ ಕೌಶಲ್ಯವನ್ನು ಹೊಂದಿರುವ ನಟಿ ಸಾಯಿ ಪಲ್ಲವಿ. ಮಲಯಾಳಂ ಚಿತ್ರ ‘ಪ್ರೇಮಂ’ ಮೂಲಕ ಸಿನಿ ಜರ್ನಿ ಶುರುವಾಯಿತು. .


COMMERCIAL BREAK
SCROLL TO CONTINUE READING

ಸಾಯಿ ಪಲ್ಲವಿ ನಟಿಯಾಗುವ ಮೊದಲು ಹಲವಾರು ಟಿವಿ ಶೋಗಳಲ್ಲಿ ಭಾಗವಹಿಸಿದ್ದಾರೆ. ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಹೆಚ್ಚಾಗಿ ಡ್ಯಾನ್ಸ್‌ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪ್ರಸಾರವಾದ ತಮಿಳಿನ ಜನಪ್ರಿಯ ಟಿವಿ ಶೋ ಒಂದರಲ್ಲಿ ಸ್ಪರ್ಧಿಯಾಗಿದ್ದರು.  


ಇದನ್ನೂ ಓದಿ: ಇಂದು ಸಂಜೆ ಖ್ಯಾತ ನಿರೂಪಕಿ ಅನುಶ್ರೀ ಕೊಡಲಿದ್ದಾರೆ Exclusive ಮಾಹಿತಿ... ಮದುವೆನಾ? ಸಿನಿಮಾನಾ? 


ತಮಿಳಿನಲ್ಲಿ ಮಾತ್ರವಲ್ಲದೆ ಇತರ ಭಾಷೆಗಳ ಡ್ಯಾನ್ಸ್‌ ಶೋಗಳಲ್ಲಿಯೂ ಸಾಯಿ ಪಲ್ಲವಿ ಭಾಗವಹಿಸಿದ್ದಾರೆ. ಹಾಗಾಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಸಾಯಿ ಪಲ್ಲವಿಯನ್ನು ನಟಿ ಸಮಂತಾ ಹೊಗಳಿದ ಸಂದರ್ಭದ ಈ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.


 


ಈ ನಟಿ ಮಾಡಿದ ಆ ಒಂದು ತಪ್ಪು ʻಶ್ರೀದೇವಿʼಗೆ ಸ್ಟಾರ್ ಪಟ್ಟ ನೀಡಿತು.!


ಅಂದು ಸಾಯಿ ಪಲ್ಲವಿಯವರ ಡ್ಯಾನ್ಸ್ ಶೋಗೆ ವಿಶೇಷ ಅತಿಥಿಯಾಗಿ ಬಂದಿದ್ದ ಸಮಂತಾ ಈಗ ಅವರಿಗೆ ಸಹನಟಿ. ಸಮಂತಾ ತೆಲುಗು, ಹಿಂದಿ ಮತ್ತು ತಮಿಳು ತ್ರಿಭಾಷಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಯಿ ಪಲ್ಲವಿ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.