)
Samruddhi kelkar : ಸಿನಿಮಾಗಳಂತೆ ಕಿರುತೆರೆಯಲ್ಲಿಯೂ ಸಹ ಇತ್ತೀಚಿಗೆ ಪ್ರಯೋಗಾತ್ಮಕ ಸಾಹಸ ದೃಶ್ಯಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಸಿರೀಯಲ್ ನಟ-ನಟಿಯರೂ ಸಹ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಟಂಟ್ಗಳನ್ನು ಮಾಡುವ ಮೂಲಕ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡುತ್ತಿದ್ದಾರೆ..
ಈ ಪೈಕಿ ಮರಾಠಿ ವಾಹಿನಿ ಸ್ಟಾರ್ ಪ್ರವಾಹ್ ಚಾನೆಲ್ನಲ್ಲಿ ಇತ್ತೀಚೆಗೆ ಬಿಡುಗಡೆಯಾದ 'ಹಲಾದ್ ರುಸಾಲಿ ಕುಂಕು ಹಸ್ಲಾಂ' ಧಾರಾವಾಹಿ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ. ಈ ಸೀರಿಯಲ್ನ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟಿ ಬಾವಿಗೆ ಹಾರುವ ದೃಶ್ಯವಿದೆ. ಯಾವುದೇ ಡೂಪ್ ಇಲ್ಲದೆ ಈ ದೃಶ್ಯವನ್ನು ಶೂಟ್ ಮಾಡಲಾಯಿತು.
ತಮ್ಮ ದೃಶ್ಯದ ಕುರಿತು ಅನುಭವ ಹಂಚಿಕೊಂಡಿರುವ ನಟಿ ಸಮೃದ್ಧಿ ಕೆಲ್ಕರ್ (Samruddhi Kelkar), "ನನಗೆ ಈಜು ಬರುತ್ತೆ, ಆದರೆ ನಾನು ಎಂದಿಗೂ ಆಳವಾದ ನೀರಿನಲ್ಲಿ ಧುಮುಕಿರಲಿಲ್ಲ. ಈ ದೃಶ್ಯದ ಬಗ್ಗೆ ತಿಳಿದ ತಕ್ಷಣ, ಅದನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಕುತೂಹಲ ನನಗಿತ್ತು. ಕೊಲ್ಲಾಪುರದ ಹೊಲವೊಂದರಲ್ಲಿ 40 ಅಡಿ ಆಳದ ಬಾವಿಗೆ ಹಾರುವ ದೃಶ್ಯವಿತ್ತು. ಈ ದೃಶ್ಯವನ್ನು ಒಂದೇ ಟೇಕ್ನಲ್ಲಿ ಪೂರ್ಣಗೊಳಿಸುವುದು ಅತ್ಯಂತ ಮುಖ್ಯವಾದ ವಿಷಯವಾಗಿತ್ತು. ಯಾವುದೇ ಬಾಡಿ ಡಬಲ್ ಅನ್ನು ಬಳಸದೆ ಈ ದೃಶ್ಯವನ್ನು ಮಾಡಲು ನಾನು ನಿರ್ಧರಿಸಿದ್ದೆ."
"ನಾನು ನನ್ನನ್ನು ಸಿದ್ಧಪಡಿಸಿಕೊಂಡು ಬಾವಿಗೆ ಹಾರಿದೆ. ಈ ಅನುಭವವನ್ನು ನಾನು ಎಂದಿಗೂ ಮರೆಯುವುದಿಲ್ಲ. ಸರಣಿಯ ಇಡೀ ತಂಡ ಇದಕ್ಕಾಗಿ ಶ್ರಮಿಸಿತು ಮತ್ತು ನನ್ನನ್ನು ನೋಡಿಕೊಂಡಿತು. ಬಾವಿಯಲ್ಲಿ ನನ್ನ ಸಹಾಯಕ್ಕಾಗಿ ಕೆಲವು ಜನರು ಇದ್ದರು. ನಾನು ಯಾವಾಗಲೂ ಧೈರ್ಯಶಾಲಿ ಪ್ರಯೋಗಗಳನ್ನು ಮಾಡಲು ಇಷ್ಟಪಡುತ್ತೇನೆ. ಈ ದೃಶ್ಯದ ನಂತರ ನನ್ನ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ನಟಿ ಹೇಳಿದರು.
ಈ ದೃಶ್ಯದ ವಿಡಿಯೋವನ್ನು ಸಮೃದ್ಧಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ, ವಿಡಿಯೋ ನೋಡಿದ ಜನರು ನಟಿಯ ಸಾಹಸವನ್ನು ಹೊಗಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ