ಆ ಸಮಯದಲ್ಲಿ ನಾನು ಮದ್ಯಪಾನ ಮಾಡುತ್ತೇನೆ: ಮುಕ್ತವಾಗಿ ಮಾತನಾಡಿದ ಖ್ಯಾತ ನಟಿ

ಇತ್ತೀಚಿನ ಸಂದರ್ಶನವೊಂದರಲ್ಲಿ ಹಲವಾರು ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. 

Written by - Chetana Devarmani | Last Updated : Mar 5, 2025, 12:00 PM IST
ಆ ಸಮಯದಲ್ಲಿ ನಾನು ಮದ್ಯಪಾನ ಮಾಡುತ್ತೇನೆ: ಮುಕ್ತವಾಗಿ ಮಾತನಾಡಿದ ಖ್ಯಾತ ನಟಿ

ಸಿನಿಮಾ ತಾರೆಯರ ಜೀವನ ಸಹಜವಾಗಿಯೇ ಕುತೂಹಲಕಾರಿಯಾಗಿರುತ್ತದೆ. ಸಿನಿಮಾ ತಾರೆಯರ ಪಾರ್ಟಿಗಳು ಮತ್ತು ಕಾರ್ಯಕ್ರಮಗಳು ಯಾವಾಗಲೂ ವರ್ಣಮಯವಾಗಿರುತ್ತವೆ. ಆದರೆ ಈ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಹಿಂಜರಿಯುತ್ತಾರೆ.  

Add Zee News as a Preferred Source

ಈ ಸುಂದರ ನಟಿ 2016 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಅದಾದ ನಂತರ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಫೇಮಸ್‌ ಆದರು. ಅವರು ಚಿತ್ರರಂಗಕ್ಕೆ ಪರಿಚಯವಾದ ಸುಮಾರು 5 ವರ್ಷಗಳ ನಂತರ ತೆಲುಗು ಸಿನಿಮಾಗೆ ಪದಾರ್ಪಣೆ ಮಾಡಿದರು. 

ಇದನ್ನೂ ಓದಿ : ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ‘ತಂದೆಗೆ ತಕ್ಕ ಮಗ’ ಸಿನಿಮಾ ನಟಿ ಲೈಲಾ!

ಪವನ್ ಕಲ್ಯಾಣ್ ಅಭಿನಯದ ಚಿತ್ರದ ಮೂಲಕ ಅವರು ಟಾಲಿವುಡ್‌ಗೆ ಪರಿಚಯವಾದರು. ತಮ್ಮ ಮೊದಲ ಚಿತ್ರದಲ್ಲಿಯೇ ಜನರ ಮನಗೆದ್ದರು. ಎರಡನೇ ಚಿತ್ರದಲ್ಲಿ ಕಲ್ಯಾಣ್ ರಾಮ್ ಅವರೊಂದಿಗೆ ನಟಿಸಿದರು. ಈ ಸಿನಿಮಾ ದೊಡ್ಡ ಯಶಸ್ಸನ್ನು ಗಳಿಸಿತು. ಮೂರನೇ ಚಿತ್ರವೂ ಬ್ಲಾಕ್‌ಬಸ್ಟರ್ ಆಗಿತ್ತು.

ಈ ಸುಂದರಿ ಬೇರೆ ಯಾರೂ ಅಲ್ಲ, ಸೌಂದರ್ಯ ರಾಣಿ ಎಂದೇ ಖ್ಯಾತರಾದ ಸಂಯುಕ್ತಾ ಮೆನನ್. ಸಾಲು ಸಾಲು ಯಶಸ್ಸಿನ ಹೊರತಾಗಿಯೂ ಸಂಯುಕ್ತಾ ಮೆನನ್ ಚಲನಚಿತ್ರಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸುಂದರಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಂಯುಕ್ತಾ ಮನಸ್ಸಿನಲ್ಲಿ ಏನನ್ನೂ ಮುಚ್ಚಿಡದೆ, ನೇರವಾಗಿ ಮಾತನಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಹಲವಾರು ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಚಲನಚಿತ್ರ ತಾರೆಯರು ಸಾಮಾನ್ಯವಾಗಿ ಭೋಜನ, ಮನರಂಜನೆ ಮತ್ತು ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ. ಇದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಮದ್ಯಪಾನ ಕೂಡ ಸಾಮಾನ್ಯವಾಗಿದೆ. ಆದರೆ ನಾಯಕಿಯರು ಈ ವಿಷಯದ ಬಗ್ಗೆ ಅಷ್ಟೊಂದು ಬಹಿರಂಗವಾಗಿ ಮಾತನಾಡುವುದಿಲ್ಲ. ಆದರೆ ಸಂಯುಕ್ತಾ ಈ ವಿಷಯದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದಾರೆ.

ನಾನು ಸಾಂದರ್ಭಿಕವಾಗಿ ಮದ್ಯಪಾನ ಮಾಡುತ್ತೇನೆ ಎಂದು ಸಂಯುಕ್ತಾ ಮೆನನ್ ಒಪ್ಪಿಕೊಂಡಿದ್ದಾರೆ. ಪಾರ್ಟಿಗಳಲ್ಲಿ ಮದ್ಯಪಾನ ಮಾಡುತ್ತೇನೆ. ಆದರೆ ಎಲ್ಲಾ ಪಾರ್ಟಿಗಳಲ್ಲಿ ಅಲ್ಲ, ಆಪ್ತ ಸ್ನೇಹಿತರನ್ನು ಒಳಗೊಂಡ ಕಾರ್ಯಕ್ರಮಗಳಲ್ಲಿ ಮಾತ್ರ ಮದ್ಯಪಾನ ಮಾಡುತ್ತೇನೆ. ಅದು ಕೂಡ ಸಣ್ಣ ಪ್ರಮಾಣದಲ್ಲಿ ಎಂದು ಸಂಯುಕ್ತಾ ಮೆನನ್ ಹೇಳಿದ್ದಾರೆ. ಅಚ್ಚರಿಗೊಳಿಸಿದಳು. 

ತುಂಬಾ ಒತ್ತಡ ಅಥವಾ ಉದ್ವಿಗ್ನತೆ ಅನುಭವಿಸಿದಾಗಲೆಲ್ಲಾ ಸ್ವಲ್ಪ ಮದ್ಯ ಸೇವಿಸುತ್ತೇನೆ ಎಂದು ಸಂಯುಕ್ತಾ ಮೆನನ್ ಹೇಳಿದ್ದಾರೆ. ಇದರೊಂದಿಗೆ ಸಂಯುಕ್ತಾ ಆಡಿದ ಈ ಮಾತುಗಳು ವೈರಲ್ ಆಗುತ್ತಿವೆ. ಕೆಲವರು ಅವರ ನೇರ ಮಾತಿನ ಧೈರ್ಯ ಮೆಚ್ಚಿದರೆ.. ಇನ್ನು ಕೆಲವರು "ಮಹಿಳೆಯರು ಕುಡಿಯುವುದರಲ್ಲಿ ತಪ್ಪೇನಿದೆ?" ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಮಹಾರಾಣಿ ಎಂಬ ಬಾಲಿವುಡ್ ಚಿತ್ರದಲ್ಲಿ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ. ಸಂಯುಕ್ತಾ ಮೆನನ್ ತೆಲುಗು ಚಿತ್ರವಾದ ಸ್ವಯಂಭು, ಮುರಾರಿ ಮತ್ತು ಅಖಂಡ 2 ನಲ್ಲಿಯೂ ನಟಿಸುತ್ತಿದ್ದಾರೆ. ರಾಮ್ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಸಂಯುಕ್ತಾ ಮೆನನ್ ಅವರು ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : ʼಮಗಳೇ ಅಂತ ಬಾಯ್ತುಂಬ ಕರ್ದು.. ಕೊನೆಗೆ ಅವಳನ್ನೇ ಮದುವೆಯಾದ್ರುʼ.. ಪ್ರಖ್ಯಾತ ಹಿರಿಯ ನಟಿ ಸೆನ್ಸೇಷನಲ್‌ ಕಾಮೆಂಟ್!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News