)
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಅನೇಕರು ಶಾಕ್ ಆಗಿದ್ದರು. ಹಾಲು ಜೇನಿನಂತಿದ್ದ ಸಂಸಾರದಲ್ಲಿ ಆಗಿದ್ದೇನು ಎಂಬ ಆತಂಕ ಕಾಡಿತ್ತು. ಈ ಜೋಡಿ ಮತ್ತೆ ಒಂದಾಗ್ತಾರಾ ಇಲ್ಲವಾ ಎಂಬ ಪ್ರಶ್ನೆ ಮೂಡಿತ್ತು. ಇದೀಗ ನಟ ಅಜಯ್ ರಾವ್ ಪತ್ನಿ ಸಪ್ನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕೌಟುಂಬಿಕ ಕಲದ ಬಗ್ಗೆ ಪತ್ನಿ ಸಪ್ನ ಸ್ಪಷ್ಟನೆ ನೀಡಿದ್ದು, ನಾನು ತಾಯಿಯಾಗಿ ಪ್ರತಿದಿನ ನನ್ನ ಮಗಳಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದೇನೆ. ನಾನು ತೀವ್ರವಾಗಿ ಸವಾಲುಗಳನ್ನ ಎದುರಿಸುತ್ತಿದ್ದೇನೆ ಎಂದಿದ್ದಾರೆ.
ನಾನು ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಮತ್ತು ದಾಂಪತ್ಯ ಜೀವನವನ್ನ ಸರಿಪಡಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೇನೆ. ಇದು ನಮ್ಮ ವಯಕ್ತಿಕ, ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಸಂಭಂದಿಸಿದ್ದಾಗಿದೆ ಎಂದು ಸಪ್ನಾ ಹೇಳಿದ್ದಾರೆ.
ಮತ್ತೆ ಹೊಂದಾಣಿಕೆ ಜೀವನ ನಡೆಸಲು ಅಜಯ್ ರಾವ್ ಮತ್ತ ಪತ್ನಿ ಸಪ್ನಾ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.