ಬೆಂಗಳೂರು : ಕೋರ್ಟ್ ಆದೇಶದ ಮೇರೆಗೆ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಂಡ, ನಟ ದರ್ಶನ್ ಗೆ ನಿಯಮಾವಳಿ ಅನುಸಾರ ಸೌಲಭ್ಯ ನೀಡಲಾಗಿದೆಯೆ..? ಕೋರ್ಟ್ ಆದೇಶ ಹಾಗೂ ಜೈಲಿನ ಮ್ಯಾನ್ಯುಯಲ್ ಪಾಲನೆಯಾಗುತ್ತಿದೆಯೇ? ಸೇರಿದಂತೆ ನಟ ದರ್ಶನ್ ಇರುವ ಬ್ಯಾರಕ್ ನಲ್ಲಿ ಪರಿಶೀಲನೆ ನಡೆಸಲಾಯಿತು.
ದರ್ಶನ್‌ಗೆ ಸವಲತ್ತುಗಳನ್ನ ನೀಡುತ್ತಿಲ್ಲ ಎಂದು ಮೂರು ಪ್ರತ್ಯೇಕ ಅರ್ಜಿಗಳನ್ನ ಸಲ್ಲಿಸಿದ್ದ ವಕೀಲರು. ಅಲ್ಲದೆ, ಬಳಿಕ ಖುದ್ದು ನ್ಯಾಯಾಧೀಶರೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸಲು ಮನವಿ ಮಾಡಿದ್ದರು. ದರ್ಶನ್ ಪರ ವಕೀಲರ ಅರ್ಜಿಗೆ ಅಧಿಕಾರಿಗಳ ಮೂಲಕ ಪರಿಶೀಲನೆಗೆ ನಿರ್ದೇಶನ ನೀಡಲಾಗಿತ್ತು. ಇದರ ಬೆನ್ನಲ್ಲೇ ಇಂದು ಜೈಲಿಗೆ ತೆರಳಿ ಖುದ್ದಾಗಿ ಪರಿಶೀಲನೆ ನಡೆಸಲಾಗಿತ್ತು.
ಇದನ್ನೂ ಓದಿ:ಖಾಸಗಿ ವಿಡಿಯೋ ಹಂಚಿಕೊಂಡ ಶಾರುಖ್ ಖಾನ್.. ಸೀಕ್ರೆಟ್ ಕೋಡ್‌ಗಾಗಿ ಅಭಿಮಾನಿಗಳ ಹುಡುಕಾಟ
ಜೈಲಿನ ಮ್ಯಾನ್ಯುಯಲ್ ಪಾಲೋ ಮಾಡಲಾಗಿದೆಯೆ.? ಉಲ್ಲಂಘನೆ ಮಾಡಿ ಸವಲತ್ತುಗಳನ್ನ ನಿರಾಕರಿಸಲಾಗಿದೆಯೇ ಅಂತಾ ಪರಿಶೀಲನೆ ಬಳಿಕ 18ರೊಳಗೆ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಬೇಕಿದೆ. ಹೀಗಾಗಿ ಕೋರ್ಟ್‌ಗೆ ವರದಿ ಸಲ್ಲಿಸಲು ಕಾನೂನು ಪ್ರಾಧಿಕಾರದ ಅಧಿಕಾರಿಗಳು ಸಜ್ಜಾಗಿದ್ದಾರೆ.









