)
Sandalwood actor Kiccha Sudeep: ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿರುಗೇಟು ನೀಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. 'ಮಾರ್ಕ್' ಸಿನಿಮಾ ಪ್ರೀ-ರಿಲೀಸ್ ಈವೆಂಟ್ನಲ್ಲಿ ತಮ್ಮನ್ನ ಉದ್ದೇಶಿಸಿಯೇ ಸುದೀಪ್ ಹೇಳಿಕೆ ನೀಡಿದ್ದಾರೆಂದು ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಗರಂ ಆಗಿದ್ದರು. ಇದೇ ವಿಚಾರವಾಗಿ ವಿಜಯಲಕ್ಷ್ಮೀ ಕೂಡ ಕೌಂಟರ್ ನೀಡಿದ್ದು, ಫ್ಯಾನ್ಸ್ ವಾರ್ಗೆ ಕಾರಣವಾಗಿದೆ. ಈ ಸಂಬಂಧ ಸ್ವತಃ ಕಿಚ್ಚ ಸುದೀಪ್ ಅವರೇ ಜೀ ಕನ್ನಡ ನ್ಯೂಸ್ಗೆ exclusive ರಿಯಾಕ್ಷನ್ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಹೇಳಿಕೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ನೀಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸುದೀಪ್ ಅವರು ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ್ದರು. ಇದು ದರ್ಶನ್ ಅಭಿಮಾನಿಗಳಿಗೇ ಹೇಳಿದ ಮಾತು ಅಂತಾ ಭಾವಿಸಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದ್ದರು. ಇದಕ್ಕೆ ವಿಜಯಲಕ್ಷ್ಮಿ ಕೂಡ ತಿರುಗೇಟು ನೀಡಿದ್ದರು. ವಿಜಯಲಕ್ಷ್ಮಿ ಹೇಳಿಕೆ ಬೆನ್ನಲ್ಲೇ ಸುದೀಪ್ ಹಾಗೂ ವಿಜಯಲಕ್ಷ್ಮಿ ಅವರು ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಕುಳಿತಿರೋ ಫೋಟೋನ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಕೃತಜ್ಞತೆ ಮುಖ್ಯ ಎಂಬರ್ಥದಲ್ಲಿ ಪೋಸ್ಟ್ಗಳನ್ನ ಹಾಕಲಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜೀ ಕನ್ನಡ ನ್ಯೂಸ್ ಕಿಚ್ಚ ಸುದೀಪ್ ಅವರನ್ನ ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್, ʼಹುಬ್ಬಳ್ಳಿಯಲ್ಲಿ ನಾನು ಪೈರಸಿ ಮಾಡುವವರ ವಿರುದ್ಧ ಯುದ್ಧ ಸಾರುತ್ತೀನಿ ಅಂತಾ ಹೇಳಿದ್ದೇನೆ. ನಾನ್ಯಾಕೆ ದರ್ಶನ್ಗೆ ಟಾಂಗ್ ಕೊಡಲಿ. ವಿಜಯಲಕ್ಷ್ಮಿ ಅವರು ಹೇಳಿಕೆ ನೀಡೋದಾದರೆ ನನ್ನ ಹೆಸರು ಬಳಸಿ ಹೇಳಲಿ. ನನಗೆ ಅವರು ಹೇಳಿದ ಹಾಗೇ ಇಲ್ಲ. ನನ್ನ ಹೆಸರು ಹೇಳಿದರೆ ನಾನೇ ಉತ್ತರ ಕೊಡ್ತೀನಿ ಅಂತಾ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನ್ನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ ಮಾತುಗಳು ಇದೀಗ ಇಡೀ ಸ್ಯಾಂಡಲ್ವುಡ್ಗೆ ಕಿಚ್ಚುಹಚ್ಚಿದೆ. ಸುದೀಪ್ ಆಡಿದ ಒಂದೇ ಒಂದು ಮಾತು ಸ್ಯಾಂಡಲ್ವುಡ್ನಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರೋಕ್ಷವಾಗಿ ಫ್ಯಾನ್ಸ್ವಾರ್ ಮಾತಿನ ಯುದ್ಧಭೂಮಿಯಾಗಿ ಬದಲಾಗಿದೆ. ʻಯುದ್ಧಕ್ಕೆ ಸಿದ್ಧ.. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧʼ ಎಂದಿದ್ದು, ಫ್ಯಾನ್ಸ್ ಫೈಟ್ನಲ್ಲಿ ಕಿಚ್ಚನ ಕಿಚ್ಚು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಚಿತ್ರರಂಗದಲ್ಲಿ ಫ್ಯಾನ್ ವಾರ್ ಜೋರಾಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದು ಅನ್ನೋ ಚರ್ಚೆ ಕೂಡ ಶುರುವಾಗಿದೆ. ಈ ಫ್ಯಾನ್ಸ್ ವಾರ್ ಎಲ್ಲಿ ಹೋಗಿ ಮುಟ್ಟುತ್ತೆ ಅನ್ನೋದನ್ನ ಕಾದು ನೋಡಬೇಕಿದೆ...