Actress Life story: ಕೆಲವು ನಟಿಯರು ವೃತ್ತಿಜೀವನ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕೆಲವು ನಿರ್ಧಾರಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂಥ ನಟಿಯರಲ್ಲೇ ಒಬ್ಬರು ಈ ಸ್ಟಾರ್ ಹೀರೋಯಿನ್.

Actress Anuradha Life Stroy : ಇಂದು ಪತಿಯನ್ನೇ ಕೊಂದು ಬದಕುತ್ತಿರುವ ಮಹಿಳೆಯರ ನಡುವೆ ಗಂಡನಿಗಾಗಿ ಮಹಾತ್ಯಾಗ ಮಾಡಿದ ಈ ನಟಿ ಮಾದರಿಯಾಗಿದ್ದಾರೆ. ಪತಿಯೇ ಪರ ದೈವ ಎಂಬ ಮಾತಿಗೆ ಇವರೇ ಸಾಕ್ಷಿಯಾಗಿದ್ದಾರೆ. ನಟಿ ಅನುರಾಧಾ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಸದ್ಯ ಪೋಷಕ ನಟಿಯಾಗಿ ಮಿಂಚುತ್ತಿದ್ದಾರೆ.
ನಟಿ ಅನುರಾಧಾ ನರ್ತಕಿ ಕೂಡ ಹೌದು. 13 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅನುರಾಧಾ ತಮ್ಮ ನಟನಾ ಕಲೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ನಟರಿಗಿಂತ ಎತ್ತರವಾಗಿ ಬೆಳೆದರು. ನಟಿ ಅನುರಾಧಾ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ನಟನೆಯಿಂದ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದರು.
1976 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ತುಳವರ್ಷಂ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದರು.1978 ರಲ್ಲಿ ಮಲಯಾಳಂ ಚಿತ್ರ ಇನಿಯಾವಲ್ ಉರಂಗಟ್ಟುಮ್ ನಲ್ಲಿ ಅನುರಾಧಾ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇವರು ನಾಯಕಿ ಆಗಿ ನಟಿಸಿದ ಈ ಮೊದಲ ಚಿತ್ರವೇ ಹಿಟ್ ಆಗಿತ್ತು.
ಆ ಬಳಿಕ ಅನುರಾಧಾ ಹಿಂತಿರುಗಿ ನೋಡಲೇ ಇಲ್ಲ. ಸಾಲು ಸಾಲು ಸಿನಿಮಾ ಅವಕಾಶಗಳು ಬರಲು ಪ್ರಾರಂಭಿಸಿದವು. ತಮಿಳಿನಲ್ಲಿ ಪೊನ್ನು ಊರುಕ್ಕು ಪುಡುಸು, ಸಿವಪ್ಪು ಮಲ್ಲಿ, ಸತ್ಯ ಸುಂದರಂ, ನಾನ್ ಸಿಗಪ್ಪು ಮನಿತನ್, ರಾಮನ್ ಶ್ರೀರಾಮನ್, ಸವಿ, ವಿದುತುಲೈ, ವಿನ್ನರ್ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದರು.
ನಟಿ ಅನುರಾಧಾ ಕನ್ನಡದಲ್ಲಿ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಚಂಡ ಕುಳ್ಳ, ಲಕ್ಷ್ಮೀ ಕಟಾಕ್ಷ, ಗಂಡುಗಲಿ ರಾಮ, ಸಿಂಹದ ಘರ್ಜನೆ, ಮೂರುವರೆ ವಜ್ರಗಳು, ಬಡ್ಡಿ ಬಂಗಾರಮ್ಮ, ನಾನು ನನ್ನ ಹೆಂಡತಿ, ಜೀವನ ಚಕ್ರ, ಕುಂಕುಮ ತಂದ ಸೌಭಾಗ್ಯ, ಮಾರಿ ಕಣ್ಣು ಹೋರಿ ಮೇಲೆ ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿ ಸ್ಯಾಂಡಲ್ವುಡ್ನಲ್ಲಿಯೂ ಮಿಂಚಿದ್ದಾರೆ.
ಆ ಕಾಲದಲ್ಲಿ ನಿರ್ದೇಶಕರು ನಟಿ ಅನುರಾಧಾ ಕಾಲ್ ಶೀಟ್ ಗಾಗಿ ಹುಡುಕಿಕೊಂಡು ಬರುತ್ತಿದ್ದರು. ಅಉರಾಧಾ ಒಂದು ಅಪಿಯರೆನ್ಸ್ ಸಾಕಿತ್ತು. ಆ ಚಿತ್ರ ಹಿಟ್ ಆಗುತ್ತಿತ್ತು. ಸಿನಿರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ನಟಿ ಅನುರಾಧಾ 1987 ರಲ್ಲಿ ನರ್ತಕ ಸತೀಶ್ಕುಮಾರ್ ಅವರನ್ನು ಪ್ರೀತಿಸಿ ಮದುವೆ ಆದರು. ಆಗ ನಟಿ ಅನುರಾಧಾ ಅವರಿಗೆ ಕೇವಲ 20 ವರ್ಷ ವಯಸ್ಸು. 21 ನೇ ವಯಸ್ಸಿನಲ್ಲಿ ಮಗಳು ಜನಿಸಿದಳು. 23 ನೇ ವಯಸ್ಸಿನಲ್ಲಿ ಗಂಡು ಮಗು ಹುಟ್ಟಿತು.
ಅನುರಾಧಾ ಅವರ ಸುಂದರ ಸಂಸಾರದಲ್ಲಿ ಅದೊಂದು ದಿನ ಬಿರುಗಾಳಿ ಬಂದಿತು, ಅವರ ಪತಿ ಸತೀಶ್ ಕುಮಾರ್ 1996 ರಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಸ್ತೆ ಅಪಘಾತಕ್ಕೀಡಾದರು. ತಲೆಗೆ ಗಾಯವಾಗಿ 17 ದಿನಗಳ ಕಾಲ ಕೋಮಾದಲ್ಲಿದ್ದರು. ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚಗಳು ಮತ್ತು ಪತಿಯ ಆರೋಗ್ಯ ಸ್ಥಿತಿಯಿಂದ ಅನುರಾಧಾ ಬದುಕು ಬವಣೆಯಾಯಿತು.
ಈ ಎಲ್ಲ ಸಂಕಷ್ಟಗಳ ನಡುವೆ ಅನುರಾಧಾ ಅವರ ತಾಯಿಯೂ ಸಹ ನಿಧನರಾದರು. ಹಾಸಿಗೆ ಹಿಡಿದಿದ್ದ ತನ್ನ ಗಂಡನಿಗೆ ಊಟ ಮತ್ತು ಸ್ನಾನ ಮಾಡಿಸುವುದು ಸೇರಿದಂತೆ 11 ವರ್ಷ ಕಾಲ ಒಬ್ಬಂಟಿಯಾಗಿ ಮಗುವಿನಂತೆ ಜೋಪಾನ ಮಾಡಿದರು. ಗಂಡನ ಆರೈಕೆಗಾಗಿ ಪತಿಯನ್ನು ಉಳಿಕೊಳ್ಳಲು ನಟಿ ಅನುರಾಧಾ ತನ್ನ ಎಲ್ಲ ಆಸ್ತಿಗಳನ್ನು ಮಾರಿದರು.
ತಿಂಗಳಿಗೆ 45 ಸಾವಿರ ವೈದ್ಯಕೀಯ ಚಿಕಿತ್ಸೆ ಹಣ ಬೇಕಿತ್ತು. ಅದಕ್ಕಾಗಿ ಅನುರಾಧಾ ಆಸ್ತಿಯನ್ನುಮಾರಿದರು. ಇಂಥ ಸಂಕಷ್ಟದಲ್ಲೂ ಪತಿಯಿಂದ ದೂರ ಹೋಗದೇ ಅನುರಾಧಾ ಮಕ್ಕಳನ್ನು ಬೆಳೆಸಿದ್ದಾರೆ. ತನ್ನ ವೃತ್ತಿಜೀವನವನ್ನು ನೋಡಿಕೊಂಡಿದ್ದಾರೆ.
80 ರ ದಶಕದಲ್ಲಿ ಜನಪ್ರಿಯ ಐಟಂ ಡ್ಯಾನ್ಸರ್ ಆಗಿದ್ದ ನಟಿ ಅನುರಾಧಾ ಇಂದಿಗೂ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಪೋಷಕಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.