ವಿಕೆಟ್‌ ಕೀಪರ್‌ ಕೈ ಹಿಡಿದ ಸ್ಯಾಂಡಲ್‌ವುಡ್‌ ಹೀರೋಯಿನ್‌! ಅದ್ದೂರಿ ಮದುವೆಗೆ ಸ್ಟಾರ್‌ ಕ್ರಿಕೆಟ್‌ ಆಟಗಾರರು ಸಾಕ್ಷಿ

Actress Archana Kottige Marriage: ಕನ್ನಡದ ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟರ್‌ ಶರತ್‌ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಇತ್ತೀಚೆಗಷ್ಟೇ ಅದ್ದೂರಿಯಾಗಿ ಈ ಜೋಡಿಯ ಮದುವೆ ನೆರವೇರಿದ್ದು, ಇದಕ್ಕೆ ಸಂಬಂಧ ಪಟ್ಟ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

Written by - Zee Kannada News Desk | Last Updated : Apr 23, 2025, 03:57 PM IST
  • ಸ್ಯಾಂಡಲ್‌ವುಡ್‌ ನಟಿ ಅರ್ಚನಾ ಕೊಟ್ಟಿಗೆ, ಕರ್ನಾಟಕ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಶರತ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
  • ಈ ಜೋಡಿ ಡೇಟಿಂಗ್‌ ಮಾಡುತ್ತಿದ್ದಾರೆ, ಶೀಘ್ರವೇ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.
  • ‘ಅರಣ್ಯಕಾಂಡ’ ಎಂಬ ಸಿನಿಮಾದ ಮೂಲಕ 2018ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅರ್ಚನಾ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಿಕೆಟ್‌ ಕೀಪರ್‌ ಕೈ ಹಿಡಿದ ಸ್ಯಾಂಡಲ್‌ವುಡ್‌ ಹೀರೋಯಿನ್‌! ಅದ್ದೂರಿ ಮದುವೆಗೆ ಸ್ಟಾರ್‌ ಕ್ರಿಕೆಟ್‌ ಆಟಗಾರರು ಸಾಕ್ಷಿ

Actress Archana Kottige Marriage: ಸ್ಯಾಂಡಲ್‌ವುಡ್‌ ನಟಿ ಅರ್ಚನಾ ಕೊಟ್ಟಿಗೆ, ಕರ್ನಾಟಕ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಶರತ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಅದ್ದೂರಿ ಮದುವೆ ಇತ್ತೀಚೆಗಷ್ಟೇ ನಡೆದು ಮುಗಿದಿದ್ದು, ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ಆಗಮಿಸಿ, ಈ ನವ ವಿವಾಹಿತ ಜೋಡಿಗೆ ಶುಭಾಶಯ ಕೋರಿದ್ದಾರೆ. ಏಪ್ರಿಲ್‌ 204 ರಂದು ಆರ್‌ಸಿಬಿ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಸದ್ಯ ಪಂದ್ಯಕ್ಕಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಆರ್‌ಸಿಬಿ ತಂಡದ ಆಟಗಾರ ದೆವ್‌ದತ್‌ ಪಡಿಕಲ್‌ ಕೂಡ ಈ ಮದುವೆ ಸಮಾರಂಭದಲ್ಲಿ ಹಾಜರ್‌ ಇದ್ದರು. 

Add Zee News as a Preferred Source

ಈ ಜೋಡಿ ಡೇಟಿಂಗ್‌ ಮಾಡುತ್ತಿದ್ದಾರೆ, ಶೀಘ್ರವೇ ಮದುವೆ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮೆನಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ, ಇದೀಗ ಹಸೆಮಣೆ ಏರುವ ಮೂಲಕ ಹೊಸ ಜೀವನ ಆರಂಭಿಸಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳಂತೂ ಫುಲ್‌ ಖುಷ್‌ ಆಗಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಕರ್ನಾಟಕ ತಂಡದ ಹಲವು ಆಟಗಾರರು ಸಹ ಭಾಗಿಯಾಗಿದ್ದು, ಇದಕ್ಕೆ ಸಂಬಂಧ ಪಟ್ಟ ಫೋಟೋಗಳು ಹಾಗೂ ವಿಡಿಯೋಗಳು ಇದೀಗ ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: ʻಹೊಸ ಜೀವನ ಶುರು ಮಾಡಲಿದ್ದೇನೆʼ : ಚಂದನ್‌ ಶೆಟ್ಟಿ

‘ಅರಣ್ಯಕಾಂಡ’ ಎಂಬ ಸಿನಿಮಾದ ಮೂಲಕ 2018ರಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅರ್ಚನಾ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಡಿಯರ್ ಸತ್ಯ’,  ‘ಫಾರೆಸ್ಟ್’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’,‘ತ್ರಿಬಲ್ ರೈಡಿಂಗ್’ ಸೇರಿ ಹಲವಾರು ಚಿತ್ರಗಳಲ್ಲಿ ಅರ್ಚನಾ ಬಣ್ಣ ಹಚ್ಚಿದ್ದಾರೆ. ತಮ್ಮ ನಟನೆಯ ಮೂಲಕ ಅಷ್ಟೇ ಅಲ್ಲದೆ, ತಮ್ಮ ಸೌಂದರ್ಯದ ಮೂಲಕ ಕೂಡ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಅರ್ಚನಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿಯೂ ಸಹ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ.

ಇನ್ನೂ, ಶರತ್‌ ಅವರು ಕರ್ನಾಟಕ ತಂಡದ ಮುಖ್ಯ ವಿಕೆಟ್‌ ಕೀಪರ್‌ ಆಗಿರುವ ಅವರು 2024ರ ಐಪಿಎಲ್‌ ನಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಪರ ಆಡಿದ್ದರು, ಆದರೆ ಈ ಸೀಸನ್‌ನಲ್ಲಿ ಅವರು ಯಾವುದೇ ತಂಡದ ಪರ ಆಡುತ್ತಿಲ್ಲ. 

ಮುಂಚಿನಿಂದಲೇ ಒಳ್ಳೆ ಸ್ನೇಹಿತರಾಗಿದ್ದ ಶರತ್‌ ಹಾಗೂ ಅರ್ಚನಾ ಒಂದೇ ಕಾಲೇಜಿನಲ್ಲಿ ಅಧ್ಯಯನ ಮಾಡಿದವರು. ಕಾಲೇಜಿನ ಸಮಯದಲ್ಲಿ ಶುರುವಾಗಿದ್ದ ಇವರ ಗೆಳೆತನ ನಂತರ ಪ್ರೀತಿಗೆ ತಿರುಗಿತ್ತು. ಇದೀಗ ಹಲವು ವರ್ಷಗಳು ಪರಸ್ಪರ ಪ್ರೀತಿಸಿದ ನಂತರ, ಈ ಜೋಡಿ ಮದುವೆಯಾಗಿದ್ದಾರೆ, ಇದರಿಂದ ಅಭಿಮಾನಿಗಳು ಸದ್ಯ ಫುಲ್‌ ಖುಷ್‌ ಆಗಿದ್ದು, ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: ಮಾಧ್ಯಮ ಹಾಗೂ ಪ್ರೇಕ್ಷಕರು ತೋರಿದ ಒಲವು ಅದುವೆ "ಯುದ್ದ ಕಾಂಡ"ದ ಗೆಲುವು ಅಜೇಯ್ ರಾವ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News