)
ಸ್ಯಾಂಡಲ್ವುಡ್ನ ಫೇಮಸ್ ನಟಿ ಸಂಗೀತಾ ಭಟ್ ಅವರ ಪತಿ ಕೂಡ ಕನ್ನಡ ಕಿರುತೆರೆಯ ಫೇಮಸ್ ಹೀರೋ. ಭಾಗ್ಯಲಕ್ಷ್ಮಿ ಧಾರಾವಾಹಿ ತಾಂಡವ್ ಉರ್ಫ್ ಸುದರ್ಶನ್ ಅವರೇ ನಟಿ ಸಂಗೀತಾ ಭಟ್ ಅವರ ಪತಿ. ಆದರೆ ಸಂಗೀತಾ ಭಟ್ ಅಣ್ಣ ಎಂದು ಕರೆದಿದ್ದ ಸುದರ್ಶನ್ ಅವರನ್ನೇ ಪ್ರೀತಿಸಿ ಮದುವೆ ಆಗಿದ್ದಾರೆ.
ಈ ಬಗ್ಗೆ ನಟಿ ಸಂಗೀತಾ ಭಟ್ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ್ದು, ಸುದರ್ಶನ್ ಅವರಿಗೆ ಮೊದಲು ನಾನು ಅಣ್ಣ ಎಂದು ಕರೆದಿದ್ದ ಎಂಬ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಪತ್ನಿ ಸಂಗೀತಾ ಆ ಘಟನೆಯನ್ನು ನೆನೆಪಿಸುತ್ತಿದ್ದಂತೆ ನಟ ಸುದರ್ಶನ್ ರಂಗಪ್ರಸಾದ್ ಅವರು " ಹೂ ಹೌದು ನನಗೆ ಇನ್ನೂ ನೆನಪಿದೆ. ಜಯನಗರ 4th ಬ್ಲಾಕ್ನಲ್ಲಿ ಇವಳು ನನಗೆ ಅಣ್ಣ ಅಂತಾ ಕರೆದಿದ್ದಳು" ಎಂದು ಹೇಳಿದ್ದಾರೆ.
"ನನಗೆ ಚಿಕ್ಕ ವಯಸ್ಸಿಂದಲೂ ಒಂದು ಅಭ್ಯಾಸ ಇದೆ. ಚಿಕ್ಕ ವಯಸ್ಸಲ್ಲೇ ಇಂಡಸ್ಟ್ರಿಗೆ ಬಂದೆ, ಹೀಗಾಗಿ ಆಗಿನಿಂದಲೂ ಎಲ್ಲರನ್ನೂ ಅಣ್ಣ ಅಕ್ಕ ಎಂದೇ ಮಾತನಾಡಿಸುವ ರೂಢಿ. ಹಾಗೆ ಇವರ ಜೊತೆನೂ ಕೆಲಸ ಮಾಡಿದಾಗ ಅಣ್ಣ ಅಂತ ನಿಮ್ಮ ಕರೆಯಲಾ. ನಿಮ್ಮನ್ನ ನೋಡಿದ್ರೆ ನನಗೆ ಹಾಗೆ ಅನಿಸ್ತಿದೆ ಅಂದಿದ್ದೆ" ಎಂದು ನಟಿ ಸಂಗೀತಾ ಭಟ್ ಹೇಳಿದ್ದಾರೆ.
" ಆದರೆ ನಾನು ಕಷ್ಟಪಟ್ಟು ಒಂದು ವಾರ ಇವಳಿಗೆ ಪ್ರಪೋಸ್ ಮಾಡಲಿಕ್ಕೆ ರೆಡಿಯಾಗಿದ್ದೆ. ಆದ್ರೆ ಇವಳು ಕ್ಲೈಮಾಕ್ಸ್ನಲ್ಲಿ ನನಗೆ ಅಣ್ಣಾ ಅಂದಿಬಿಡದಾ" ಎಂದು ನಟ ಸುದರ್ಶನ್ ಹೇಳಿದ್ದಾರೆ.
ಬೆಂಗಳೂರು ಟ್ರಾಫಿಕ್ ನಡುವೆ ನಟಿ ಸಂಗೀತಾ ಭಟ್ ಮತ್ತು ನಟ ಸುದರ್ಶನ್ ರಂಗಪ್ರಸಾದ್ ಪ್ರೀತಿ ಹುಟ್ಟಿತು. "ನಾನು ಮೊದಲು ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದೆ. ಹಾಯ್ ಎಕ್ಸ್ ಗರ್ಲ್ ಫ್ರೆಂಡ್ ಎಂದು ಮೆಸೇಜ್ ಮಾಡಿದೆ. ಆ ಚಿತ್ರದಲ್ಲಿ ಸಂಗೀತಾ ಪಾತ್ರ ಅದೇ ರೀತಿ ಇತ್ತು. ಅದಕ್ಕೆ ಹಾಗೆ ಕಳಿಸಿದ್ದೆ. ಅಲ್ಲಿಂದ ಮಾತುಕಥೆ ಶುರುವಾಯ್ತು" ಎಂದು ಸುದರ್ಶನ್ ಮಾತನಾಡಿದ್ದಾರೆ.
"ಸಿನಿಮಾ ಸೆಟ್ಗೆ ಹೋಗುವಾಗ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ವಿ. ಆಗ ನಮಗೆ ಮಾತನಾಡಲು ಸಮಯ ಸಿಗುತ್ತಿತ್ತು. ಅಲ್ಲಿಂದ ನಮ್ಮಿಬ್ಬರ ಪ್ರೀತಿ ಶುರುವಾಯ್ತು. ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ನಾವಿಬ್ಬರು ಪ್ರೀತಿ ಇದೆ ಎಂದು ಹೇಳಿಕೊಂಡು ಒಪ್ಪಿಕೊಂಡಡೆವು. ಇವತ್ತಿಗೂ ನಮಗೆ ಆ ಜಾಗ ತುಂಬಾ ಸ್ಪೆಷಲ್" ಎಂದು ಸಂಗೀತಾ ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.