Ashok Hegde: ಕನ್ನಡದ ಖ್ಯಾತ ಕಿರುತೆರೆ ನಟ ತಮ್ಮ ಬದುಕಿನ ನೋವಿನ ಅಧ್ಯಾಯವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ, ತಮಗೆ ಮಕ್ಕಳಿಲ್ಲದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

Ashok Hegde: ನುಗವ ಮೊಗದ ಹಿಂದೆ ನೂರೆಂಟು ನೋವು ಇರುತ್ತದೆ, ಎಷ್ಟೇ ನೋವಿದ್ದರೂ ನಕ್ಕು, ನಗಿಸುತ್ತಾ ಮುಂದೆ ಸಾಗುವುದೇ ಜೀವನ. ಬಣ್ಣದ ಲೋಕದ ತಾರೆಗಳು ಅದೆಷ್ಟೇ ಕಷ್ಟ ಇದ್ದರೂ ಸಹ, ತಮ್ಮ ನೋವನ್ನು ಬಚ್ಚಿಟ್ಟು, ಅಭಿಮಾನಿಗಳನ್ನು ರಂಜಿಸುತ್ತಾರೆ. ಅಂತವರದಲ್ಲಿ ಖ್ಯಾತ ಕಿರುತೆರೆ ನಟ ಅಶೋಕ್ ಹೆಗ್ಡೆ ಕೂಡ ಒಬ್ಬರು.
ಹೌದು, ಕಿರುತೆರೆ ನಟ ಅಶೋಕ್ ಹೆಗ್ಡೆ ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಹೆಸರು ಮಾಡಿದ್ದಾರೆ, ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವ ಅವರು, ಈವರೆಗೂ ತಮ್ಮ ಖಾಸಗಿ ಜೀವನದ ಕುರಿತು ಎಲ್ಲಿಯೂ ಸಹ ಹೇಳಿಕೊಂಡಿಲ್ಲ. ಆದರೆ, ಪ್ರತಿಯೊಬ್ಬ ತಾರೆಯ ವೈಯಕ್ತಿಕ ಜೀವನದ ಕುರಿತು ತಿಳಿಸುಕೊಳ್ಳುವ ಉತ್ಸಾಹ ಅಭಿಮಾನಿಗಳಲ್ಲಿ ಇರುತ್ತದೆ. ಇದೀಗ ಅಶೋಕ್ ಹೆಗ್ಡೆ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಈವರೆಗೂ ಹಂಚಿಕೊಂಡಿರದ ಹಲವಾರು ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡು, ಕಣ್ಣೀರು ಹಾಕಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಶೋಕ್ "ಗರ್ಭಿಣಿಯಾಗಿದ್ದಾಗ ನನ್ನ ಪತ್ನಿಗೆ ಶುಗರ್ ಇತ್ತು, ನಂತರ ನನಗೆ ಇಬ್ಬರು ಮಕ್ಕಳು ಸಹ ಆದರೂ, ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ ಅವಳಿಗೆ ಶುಗರ್ ಇದ್ದ ಕಾರಣ, ನನ್ನ ಮಕ್ಕಳಿಗೂ ಕೂಡ ಶುಗರ್ ಬಂತು, ಈ ಕಾಯಿಲೆಗೆ ನನ್ನ ಎರಡು ಮಕ್ಕಳು ತುತ್ತಾಗಿ ಹೋದವು. ಇದೇ ಹರಿಶ್ಚಂದ್ರ ಘಾಟ್ನಲ್ಲಿ ನನ್ನ ಮಕ್ಕಳು ಮಲಗಿಕೊಂಡಿವೆ. ಮತ್ತೆ ಒಂದು ಮಗು ಆಗಿತ್ತು, ಅದು ಕೂಡ ಹಾಗೇ ಸತ್ತು ಹೋಯ್ತು. ಇದಾದ ಮೇಲೆ ನಾನು ನನ್ನ ಪತ್ನಿ ಮಕ್ಕಳು ಮಾಡಿಕೊಳ್ಳೋದೆ ಬೇಡ ಎಂದು ನಿರ್ಧಾರ ಮಾಡಿದ್ದೇವೆ"
"ನಾನಾದೂ ಶೂಟಿಂಗ್ ಅದು ಇದು ಅಂತಾ ಹೊರಗೆ ಓಡಾಡುತ್ತೇನೆ, ಆದರೆ ನನ್ನ ಪತ್ನಿ ಮನೆಯಲ್ಲೆ ಇರುತ್ತಾಳೆ, ಮತ್ತೆ ಮಗು ಆದರೆ ಅದು ಸಹ ಹೀಗೆ ಆಗುತ್ತಾ, ಮತ್ತೆ ಮಗು ಹುಟ್ಟಿದರೆ ಅದು ಸಹ ಮೊದಲ ಮಕ್ಕಳಂತೆಯೇ ಸತ್ತು ಹೋಗುತ್ತಾ ಎಂದು ಯೋಚನೆ ಮಾಡುತ್ತಾ ಮಾಡುತ್ತಾ ಮಾನಸಿಕಳಾಗುತ್ತಿದ್ದಾಳೆ. ನನಗೆ ಅವಳೇ ಮಗು, ಅವಳಿಗೆ ನಾನೇ ಮಗು, ಅದರಿಂದಾಗಿಯೇ ಇಬ್ಬರೂ ಕೂತು ಮಕ್ಕಳೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇವೆ" ಎಂದಿದ್ದಾರೆ.
"ಅವಳನ್ನು ನಾನು ಪ್ರೀತಿಸಿದಾಗ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡು ಪ್ರೀತಿಸಿಲ್ಲ, ಅವಳಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ನನಗೆ ಅವಳ ಮೇಲೆ ಪ್ರೀತಿ ಕಡಿಮೆಯಾಗಿಲ್ಲ, ನಮ್ಮಿಬ್ಬರ ಸಂಬಂಧ ಬಹಳ ಗಟ್ಟಿಯಾಗಿದೆ, ಆದರೆ ಮಗು ಇಲ್ಲ ಎನ್ನುವ ಕೊರಗು ನನ್ನ ಪತ್ನಿಯನ್ನು ಸದಾ ಕಾಡುತ್ತದೆ, ಏಕೆಂದರೆ ಇಷ್ಟು ವಯಸ್ಸಾದರೂ ಮಕ್ಕಳಾಗಿಲ್ಲ ಎಂದರೆ ಸಮಾಜದಲ್ಲಿ ಇರುವವರಿಗೆ, ನಾವು ಉತ್ತರಿಸಲು ಸಾಧ್ಯವಾಗುವುದಿಲ್ಲ. ಗಂಡು ಮಕ್ಕಳಾದರೂ ನಿರ್ಲಕ್ಷಿಸಿ ಮುಂದಕ್ಕೆ ಹೋಗಬಹುದು. ಆದರೆ, ಹೆಣ್ಣು ಮಕ್ಕಳಿಗೆ ಅದು ಸಾಧ್ಯ ಇಲ್ಲ".
"ನಾನು ಮದುವೆಯಾದ ಹೊಸದರಲ್ಲಿ ನಿರ್ದೇಶನ ಕೂಡ ಮಾಡುತ್ತಿದೆ, ಈ ಸಂದರ್ಭದಲ್ಲಿ ನನ್ನ ಹೆಂಡತಿ ಗರ್ಭಿಣಿಯಾಗಿದ್ದಳು, ಆಗ ತುತ್ತು ಅನ್ನಕ್ಕೂ ಹಣವಿಲ್ಲದ ಪರಿಸ್ಥಿತಿ ಇತ್ತು, ಆಗ ಗರ್ಭಿಣಿಯಾಗಿದ್ದ ನನ್ನ ಪತ್ನಿಯನ್ನು ನೋಡಿದ ವೈದ್ಯರು ಕೂಡ ಮಗುವನ್ನು ಅಬಾರ್ಷನ್ ಮಾಡಿಸಿ, ಎಂದಿದ್ದರು. ಆದ ಕಾರಣಕ್ಕಾಗಿ ಮೊದಲ ಮಗುವನ್ನು ತೆಗೆಸುವಂತಾಯಿತು, ಇದೇ ಕಾರಣದಿಂದಲೋ ಏನೋ ನಂತರ ಹುಟ್ಟಿದ ಎರಡು ಮಕ್ಕಳು ಕೂಡ ಬದುಕುಳಿಯಲಿಲ್ಲ, ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ ಮೇಲೆ ನನ್ನ ಪತ್ನಿ ಇವನ ಬಳಿ ಏನೂ ಇಲ್ಲ, ಇವನು ಏನು ಸಾಧನೆ ಮಾಡಲಿಲ್ಲ, ದೊಡ್ಡ ಹೀರೋ ಆಗಲಿಲ್ಲ ಎಂದು ಬಿಟ್ಟು ಹೋಗಲಿಲ್ಲ, ಹೊರತಾಗಿ ನನ್ನ ಕಷ್ಟದ ಸಮಯದಲ್ಲಿಯೂ ನನ್ನ ಜೊತೆಯಲ್ಲಿಯೇ ಇದ್ದು, ನನಗೆ ಧೈರ್ಯ ತುಂಬಿದ್ದಳು". ಎಂದು ನೋವಿನ ದಿನಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ