ನಾನು ನಾಲ್ಕನೇ ವಯಸ್ಸಿನಲ್ಲಿ ಇರುವಾಗಲೇ.... : ಬಾಲ್ಯದಲ್ಲಿ ಕಾಡಿದ ಆ ನೋವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ರಮ್ಯಾ

Actress Ramya : ನಟಿ ರಮ್ಯಾ ತಮ್ಮ ಬಾಲ್ಯ ಮತ್ತು ತಂದೆಯ ಕುರಿತು ಪಾಡಕಾಸ್ಟ್‌ ಒಂದರಲ್ಲಿ ಮಾತನಾಡಿದ್ದಾರೆ. 

Written by - Chetana Devarmani | Last Updated : Jun 15, 2025, 03:45 PM IST
  • ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ
  • ʻನನ್ನ ಬಾಲ್ಯ ಬೇರೆಯವರಿಗಿಂತ ವಿಭಿನ್ನವಾಗಿತ್ತುʼ
  • ಬಾಲ್ಯ ಮತ್ತು ತಂದೆಯ ರಮ್ಯಾ ಮಾತು
ನಾನು ನಾಲ್ಕನೇ ವಯಸ್ಸಿನಲ್ಲಿ ಇರುವಾಗಲೇ.... : ಬಾಲ್ಯದಲ್ಲಿ ಕಾಡಿದ ಆ ನೋವಿನ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ರಮ್ಯಾ

Actress Ramya Father : ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತಮ್ಮ ಬಾಲ್ಯದ ಕುರಿತು ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.  ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಆಗಿರುವ ರಮ್ಯಾ ಪಾಡಕಾಸ್ಟ್‌ ಒಂದರಲ್ಲಿ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ. ರಮ್ಯಾ  ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಆಡಿದ ಮಾತನ್ನು ರಮ್ಯಾ ಸಮರ್ಥಿಸಿಕೊಂಡಿದ್ದರು. 

Add Zee News as a Preferred Source

ನಟಿ ಶುಭ್ರ ಅಯ್ಯಪ್ಪ ಅವರ ಪಾಡಕಾಸ್ಟ್‌ನಲ್ಲಿ ನಟಿ ರಮ್ಯಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನಟಿ ರಮ್ಯಾ ಅವರ ಈ ಇದೀಗ ವೈರಲ್​ ಆಗಿದೆ. ಬಾಲ್ಯದಲ್ಲಿ ನಟಿ ರಮ್ಯಾ ಅವರಿಗೆ ಕಾಡಿದ ಒಂದು ನೋವಿನ ಬಗ್ಗೆಯೂ ಹೇಳಿಕೊಂಡಿದ್ದಾರೆ. 

ನನ್ನ ಬಾಲ್ಯ ಬೇರೆಯವರಿಗಿಂತ ವಿಭಿನ್ನವಾಗಿತ್ತು. ನಾನು ನಾಲ್ಕನೇ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನ ಕಳೆದುಕೊಂಡೆ. ನನಗೆ ಸರ್‌ ನೇಮ್‌ ಇರಲಿಲ್ಲ. ದಿವ್ಯಾ ಸ್ಪಂದನ ಎಂದು ಹೆಸರು ಇಟ್ಟಿದ್ದರು. ಇದೇ ಕಾರಣಕ್ಕೆ ನಾನು ಸ್ಪಂದನ ಅನ್ನೋದನ್ನೇ ಫ್ಯಾಮಿಲಿ ಹೆಸರು ಅಥವಾ ಸರ್‌ನೇಮ್‌ ಎಂದು ಹೇಳುತ್ತಿದ್ದೆ ಎಂದು ಬೇಸರದಿಂದ ರಮ್ಯಾ ಹೇಳಿದ್ದಾರೆ. 

ಇದನ್ನೂ ಓದಿ: ಫ್ಯಾನ್ಸ್‌ ಎದುರಲ್ಲೇ ಉದುರಿ ಬಿತ್ತು ಬಾಲಯ್ಯನ ಮೀಸೆ..‌ ವಿಡಿಯೋ ವೈರಲ್

ನಾಯಕಿಯನ್ನು ತುಂಬಾ ವೀಕ್‌ ಆಗಿ ತೋರಿಸುತ್ತಾರೆ. ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾ ಬರುತ್ತಿಲ್ಲ. ಹೆಣ್ಣುಮಕ್ಕಳು ಸ್ಟ್ರಾಂಗ್​ ಅನೋದನ್ನು ತೋರಿಸುತ್ತಿಲ್ಲ. ಬರೀ ಅವರು ವೀಕ್​ ಎನ್ನುವುದನ್ನೇ ಹೈಲೈಟ್ ಮಾಡುತ್ತಾರೆ. ಇದು ನನಗೆ ತುಂಬಾ ಕಿರಿಕಿರಿ ಆಗುತ್ತೆ ಎಂದು ರಮ್ಯಾ ಹೇಳಿದ್ದಾರೆ.

 

 

ರಮ್ಯಾ ಮದುವೆ ವಿಚಾರ : 

ರಮ್ಯಾ ಇದೇ ಪಾಡಕಾಸ್ಟ್‌ನಲ್ಲಿ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದಾರೆ. ನನಗೆ ಗೊತ್ತಿಲ್ಲದೇ ಸಾಕಷ್ಟು ಬಾರಿ ಮದುವೆ, ಮಕ್ಕಳೂ ಎಲ್ಲಾ ಆಗಿ ಬಿಟ್ಟಿದೆ. ವಿದೇಶಗಳಲ್ಲಿಯೂ ನನ್ನ ಮಕ್ಕಳು ಇದ್ದಾರೆ. ತಾವೇ ಕಲ್ಪನೆ ಮಾಡಿಕೊಂಡು ನನಗೆ ಎಷ್ಟೋ ಮದುವೆ ಮಾಡಿಸಿದ್ದಾರೆ. ಇಂಥ ಹಲವು ಗಾಸಿಪ್‌ಗಳನ್ನು ಕೆಟ್ಟದಾಗಿ ಹುಟ್ಟುಹಾಕಿದ್ದಾರೆ. ಇದೆಲ್ಲ ವಿಚಿತ್ರ ಎಂದೆನಿಸುತ್ತೆ ಎಂದು ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ. 

ಇದನ್ನೂ ಓದಿ: ಶ್ರೀಮಂತ ನಟನ 2ನೇ ಪತ್ನಿಯಾದ 44 ವರ್ಷದ ಸ್ಟಾರ್‌ ನಟಿ! 800 ಕೋಟಿಯ ಅರಮನೆಯಲ್ಲಿ ವಾಸ.. ಸಾವಿರಾರು ಕೋಟಿ ಸಾಮ್ರಾಜ್ಯಕ್ಕೆ ಒಡತಿ ಸಿನಿಪ್ರಿಯರ ಹೃದಯ ಕದ್ದ ಚೆಲುವೆ !

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News