ಸಚಿನ್ ತೆಂಡೂಲ್ಕರ್ ಪುತ್ರಿಗೆ ಈತನೇ ಬೆಸ್ಟ್ ಫ್ರೆಂಡ್: ಸಾರಾ 'ಅವನೇ ನನ್ನ ಪಾಲಿಗೆ ಎಲ್ಲಾ'… ಎಂದಿದ್ದು ಯಾರಿಗೆ ಗೊತ್ತಾ...?

Sara Tendulkar: ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಈಗ ಯಾವ ಸೆಲಬ್ರಿಟಿಗಳಿಗೂ ಕಮ್ಮಿ ಇಲ್ಲ. ಹಾಗಾಗಿಯೇ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಡಕ್ಟುಗಳಿಗೆ ಮಾಡೆಲ್ ಆಗಿದ್ದಾರೆ. ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದಲ್ಲಿ ದುಡಿಯುತ್ತಿದ್ದಾರೆ. 

Written by - Yashaswini V | Last Updated : Jan 21, 2025, 10:28 AM IST
  • ಸಾರಾ ಯಾವ ಸೆಲಬ್ರಿಟಿಗಳಿಗೂ ಕಮ್ಮಿ ಇಲ್ಲ. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಡಕ್ಟುಗಳಿಗೆ ಮಾಡೆಲ್.
  • ಸಾರಾ ಕ್ರಿಕೆಟಿಗ ಶುಭಮನ್ ಗಿಲ್ ಗರ್ಲ್ ಫ್ರೆಂಡ್ ಅಂತಾ ಗುಲ್ ಎದ್ದಿದೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂಬ ಗಾಸಿಪ್ ಕೂಡ ಇದೆ.
  • ಮೈಚಳಿ ಬಿಟ್ಟು ಮಾಡೆಲಿಂಗ್ ಮಾಡಿದ್ಮೇಲೆ ಸಾರಾ ಸರ್ರನೆ ಬಾಲಿವುಡ್ ಕಡೆ ಜಾರದೆ ಇರ್ತಾರಾ ಅಂತಾ ಇನ್ನೊಂದು ಗಾಸಿಪ್.
ಸಚಿನ್ ತೆಂಡೂಲ್ಕರ್ ಪುತ್ರಿಗೆ ಈತನೇ  ಬೆಸ್ಟ್ ಫ್ರೆಂಡ್: ಸಾರಾ 'ಅವನೇ  ನನ್ನ ಪಾಲಿಗೆ ಎಲ್ಲಾ'… ಎಂದಿದ್ದು ಯಾರಿಗೆ ಗೊತ್ತಾ...?

Sara Tendulkar News: ಖ್ಯಾತ ಕ್ರಿಕೆಟ್ ಆಟಗಾರ, ಕ್ರಿಕೆಟ್ ದೇವರು, ರನ್ ಮಿಷನ್ ಸಚಿನ್ ತೆಂಡೂಲ್ಕರ್ ಮಕ್ಕಳಾದ ಸಾರಾ ಮತ್ತು ಅರ್ಜುನ್ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಅವರಿಬ್ಬರ ಸಂಬಂಧ ಎಂಥ ಸುಮಧುರವಾದದ್ದು? ಎಂಥ ಅಪರೂಪದ್ದು ಎನ್ನುವುದು ಗೊತ್ತಿಲ್ಲ. ಇಬ್ಬರೂ ಬೇರೆ ಬೇರೆ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರೂ ಸದಾ ಒಬ್ಬರನ್ನೊಬ್ಬರು ಬಿಟ್ಟುಕೊಡಲೊಲ್ಲರು. ಸ್ಟಾರ್ ಮಕ್ಕಳಾದ್ರೂ ಸ್ವತಃ ಸ್ಟಾರ್ ಗಳಾದ್ರೂ ಒಬ್ಬರಿಗೊಬ್ಬರು ಬೆಸ್ಟ್ ಫ್ರೆಂಡ್ಸ್ ಗಳು.

Add Zee News as a Preferred Source

ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಈಗ ಯಾವ ಸೆಲಬ್ರಿಟಿಗಳಿಗೂ ಕಮ್ಮಿ ಇಲ್ಲ. ಹಾಗಾಗಿಯೇ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಡಕ್ಟುಗಳಿಗೆ ಮಾಡೆಲ್ ಆಗಿದ್ದಾರೆ. ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದಲ್ಲಿ ದುಡಿಯುತ್ತಿದ್ದಾರೆ. ಇದೆಲ್ಲದರ ಜೊತೆಗೆ ಸಾರಾ ಕ್ರಿಕೆಟಿಗ ಶುಭಮನ್ ಗಿಲ್ ನ ಗರ್ಲ್ ಫ್ರೆಂಡ್ ಅಂತಾ ಗುಲ್ ಎದ್ದಿದೆ. ಇದನ್ನು ಸಾರಾ ಸಾರಾಸಗಟಾಗಿ ತಿರಸ್ಕರಿಸಿಲ್ಲದಿರುವುದರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಅಪಡೇಟ್ ಗಾಸಿಪ್ ಕೂಡ ಸುಳಿದಾಡುತ್ತಿದೆ. 

ಇದನ್ನೂ ಓದಿ- ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ ಸಾರಾ ಮೇಲಿನ ಬಟ್ಟೆ: ಸಚಿನ್ ಪುತ್ರಿಗೂ ಬಂತಾ ಬಾಲಿವುಡ್‌ ಬೆಡಗಿಯರ ಚಾಳಿ..

ಹೇಳಿ ಕೇಳಿ ಸಾರಾ ಕ್ಯೂಟ್ ಹುಡುಗಿ, ಹಾಟ್ ಆಗಿ ಡ್ರೆಸ್ ಹಾಕೊಂಡು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ರೆ ಹವಾ ಹೇಳ್ದೆ ಇರುತ್ತಾ? ಬೋಲ್ಡ್ ಡ್ರೆಸ್ ಗಳಲ್ಲಿ ಕಾಣಿಸಿಕೊಂಡರೆ ಪಡ್ಡೆ ಹುಡುಗರು ಸುರಸುಂದರಿ ಸಾರಾ ಬ್ಯೂಟಿಗೆ ಬೋಲ್ಡ್ ಆಗದೆ ಇರುತ್ತಾರಾ?  ಇಷ್ಟೆಲ್ಲಾ ಆದ್ಮೇಲೆ, ಮೈಚಳಿ ಬಿಟ್ಟು ಮಾಡೆಲಿಂಗ್ ಮಾಡಿದ್ಮೇಲೆ ಸಾರಾ ಸರ್ರನೆ ಬಾಲಿವುಡ್ ಕಡೆ ಜಾರದೆ ಇರ್ತಾರಾ ಅಂತಾ ಇನ್ನೊಂದು ಗಾಸಿಪ್… ಇದ್ಯಾವುದರ ಬಗ್ಗೆಯೂ ಸಾರಾ ಮಾತಾಡಿಲ್ಲ, ಆದರೆ ತಮ್ಮ ಅರ್ಜುನ್ ಬಗ್ಗೆ ಮಾತಾನಾಡುವುದನ್ನು ಮರೆತಿಲ್ಲ. 

ಇದನ್ನೂ ಓದಿ- ಮಗಳ ಕುರಿತು ಗುಡ್‌ ನ್ಯೂಸ್‌ ಹಂಚಿಕೊಂಡ ಸಚಿನ್‌ ತೆಂಡೂಲ್ಕರ್‌.. ಸುದ್ದಿ ಕೇಳಿ ಅಭಿಮಾನಿಗಳು ಫುಲ್‌ ಖುಷ್‌..?!

ತಮ್ಮ ಅರ್ಜುನ್ ನನ್ನ ಪಾಲಿಗೆ ಎಲ್ಲಾ… ಆತನಿಗೆ ನನ್ನೆಲ್ಲಾ ಗುಟ್ಟುಗಳು ಗೊತ್ತು. ಎಲ್ಲೇ ಹೋಗಲಿ, ಎಷ್ಟೇ ದಿನವಾಗಲಿ ಎಲ್ಲವನ್ನೂ ಅವನೊಂದಿಗೆ ಹಂಚಿಕೊಳ್ಳುವೆ. ಅವನೂ ಅಷ್ಟೇ. ಎಲ್ಲವನ್ನೂ ನನ್ನೊಂದಿಗೆ ಹೇಳಿಕೊಳ್ಳುತ್ತಾನೆ. ನಾವಿಬ್ಬರು ಬೆಸ್ಟ್ ಬ್ರದರ್ ಸಿಸ್ಟರ್… ಹಾಗೆಯೇ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್… ಅವನು ಮನೆಯಲ್ಲಿ ಇಲ್ಲ ಅಂದ್ರೆ ನನಗೆ ಏನೋ ಕಳೆದುಕೊಂಡಂತಾಗುತ್ತದೆ ಎಂದು ತಮ್ಮ ಸುಮಧುರ ಸಂಬಂಧದ ಬಗ್ಗೆ ಸಾರಾ ಸವಿವರವಾಗಿ ಮಾತಾನಾಡಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News