ಮದುವೆಯಾಗ್ತಾರೆ ಅಂದ್ರೆ ಲವ್‌ ಬ್ರೇಕಪ್‌ ಮಾಡಿಕೊಂಡ ಸಾರಾ- ಶುಭ್‌ಮನ್..!? ಅಸಲಿಗೆ ಇಬ್ಬರ ನಡುವೆ ಆಗಿದ್ದೇನು..?

Sara Tendulkar Shubhman gill : 'ಆ' ಒಂದು ವಿಷಯವೇ ಸಾರಾ ತೆಂಡೂಲ್ಕರ್ ಮತ್ತು ಶುಭ್‌ಮನ್ ಗಿಲ್ ಅವರ ಬ್ರೇಕಪ್‌ಗೆ ಕಾರಣವಾಯ್ತು.. ಅಯ್ಯೋ.. ಇಬ್ಬರು ಮದುವೆಯಾಗ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದ ಸಮಯದಲ್ಲಿ ಹೀಗಾಯ್ತಲ್ಲ.. ಇದು ನಿಜವೇ..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..

Written by - Krishna N K | Last Updated : Apr 20, 2025, 04:54 PM IST
    • ಸಾರಾ ತೆಂಡೂಲ್ಕರ್ ಮತ್ತು ಶುಭ್‌ಮನ್ ಗಿಲ್ ಅವರ ಬ್ರೇಕಪ್‌
    • ಖ್ಯಾತ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಪುತ್ರಿ ಸಾರಾ
    • ಸಾರಾ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ ಜೊತೆ ಡೇಟಿಂಗ್
ಮದುವೆಯಾಗ್ತಾರೆ ಅಂದ್ರೆ ಲವ್‌ ಬ್ರೇಕಪ್‌ ಮಾಡಿಕೊಂಡ ಸಾರಾ- ಶುಭ್‌ಮನ್..!? ಅಸಲಿಗೆ ಇಬ್ಬರ ನಡುವೆ ಆಗಿದ್ದೇನು..?

Sara Tendulkar Shubhman breakup : ಖ್ಯಾತ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಪುತ್ರಿ ಸಾರಾ ತೆಂಡೂಲ್ಕರ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸಾರಾ ನಟಿ ಅಲ್ಲದಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸುಂದರಿ ಪೋಸ್ಟ್‌ಗಳಿಂದ ಮಾತ್ರವಲ್ಲದೆ ತನ್ನ ಖಾಸಗಿ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. 

ವರದಿಗಳ ಪ್ರಕಾರ, ಸಾರಾ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು.. ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.. ಇದಲ್ಲದೆ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಚರ್ಚೆಗಳು ಸಹ ಜೋರಾಗಿದ್ದವು. ಆದರೆ ಈಗ ಇಬ್ಬರ ನಡುವಿನ ಸಂಬಂಧ ಮುರಿದುಹೋಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ.

ಇದನ್ನೂ ಓದಿ:'ನೀವ್ಯಾಕೆ ನನಗೆ ಪ್ರಶಸ್ತಿ ಕೊಡ್ತಿದ್ದೀರಿ?'- ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುತ್ತಿದ್ದಂತೆ ಧೋನಿ ವಿಚಿತ್ರವಾಗಿ ಹೀಗೆ ಹೇಳಿದ್ದೇಕೆ?

ಸಾರಾ ಇನ್ಸ್ಟಾಗ್ರಾಮ್ ನಲ್ಲಿ ಶುಭ್ಮನ್ ಗಿಲ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಸಾರಾ ಮಾತ್ರವಲ್ಲ, ಶುಭಮನ್ ಗಿಲ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಸಾರಾಳನ್ನು ಅನ್ ಫಾಲೋ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ ನಂತರ ಇಬ್ಬರ ನಡುವಿನ ಬ್ರೇಕಪ್ ಬಗ್ಗೆ ಮಾತುಕತೆಗಳು ತೀವ್ರಗೊಂಡಿವೆ. ಆದರೆ ಸಾರಾ ಮತ್ತು ಶುಭ್ಮನ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

ನಿಜ ಹೇಳಬೇಕೆಂದರೆ, ಕಳೆದ ಹಲವಾರು ವರ್ಷಗಳಿಂದ ಸಾರಾ ಮತ್ತು ಶುಭ್ಮನ್ ಸಂಬಂಧದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ 2020 ರಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕಾಮೆಂಟ್ ಸಾರಾ ಮತ್ತು ಶುಭಮನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿತು.

ಇದನ್ನೂ ಓದಿ:"ಕೊಹ್ಲಿ ಜೊತೆ ಮದುವೆಗೂ ಮುನ್ನವೇ ನಾನು ತಾಯ್ತನ ಅನುಭವಿಸಿದ್ದೆ; ಅದಕ್ಕೆ ಕಾರಣ ಆ ನಟನ ಒಡನಾಟ!"- ನಟಿ ಅನುಷ್ಕಾ ಶರ್ಮಾ ಹೇಳಿಕೆ

ಕೆಲವು ದಿನಗಳ ಹಿಂದೆ, ಶುಭಮನ್ ಗಿಲ್ ಅವರ ಹೆಸರು ನಟಿ ಸಾರಾ ಅಲಿ ಖಾನ್ ಅವರೊಂದಿಗೆ ತಳುಕು ಹಾಕಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ, ಇಬ್ಬರೂ ಬೇರ್ಪಟ್ಟ ನಂತರ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿಗಳೂ ಇದ್ದವು. ಆದರೆ ನಾವು ಎಂದಿಗೂ ಸಂಬಂಧದಲ್ಲಿಲ್ಲ ಎಂದು ಹಾಸ್ಯನಟ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಸಾರಾ ಸ್ಪಷ್ಟಪಡಿಸಿದ್ದರು. 

ಸಾರಾ ತೆಂಡೂಲ್ಕರ್ ಬಗ್ಗೆ ಹೇಳುವುದಾದರೆ ಸಾರಾ ಯಾವಾಗಲೂ ತನ್ನ ಫೋಟೋಶೂಟ್‌ಗಳು ಮತ್ತು ರಜೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಶುಭಮನ್ ಗಿಲ್ ಒಬ್ಬ ಜನಪ್ರಿಯ ಕ್ರಿಕೆಟಿಗ.. ತಮ್ಮ ಅತ್ಯುತ್ತಮ ಇನ್ನಿಂಗ್ಸ್‌ನಿಂದಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News