ಮದುವೆಯಾದ ಕೇವಲ 4 ವರ್ಷಕ್ಕೆ ವಿಚ್ಛೇದನ: ಈ ಸೀರಿಯಲ್ ನಟಿಗೆ ತಲೆನೋವಾಗಿ ಪರಿಣಮಿಸಿದ ʼಪ್ರೀತಿʼ!!

ಒಂದು ಕಾಲದಲ್ಲಿ ಟಿವಿ ಲೋಕದಲ್ಲಿ ಪ್ರಸಿದ್ಧ ದಂಪತಿಗಳಾಗಿದ್ದ ರಾಜೀವ್ ಸೇನ್ ಮತ್ತು ಚಾರು ಅಸೋಪಾರ ಜೀವನದಲ್ಲಿ ಕಳೆದ 3 ವರ್ಷಗಳಿಂದ ಬಿರುಗಾಳಿ ಎದ್ದಿದೆ. ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಜಗಳವಾಡುತ್ತಾ ಬೀದಿರಂಪ ಮಾಡುತ್ತಿದ್ದಾರೆ. 

Written by - Puttaraj K Alur | Last Updated : Jun 12, 2025, 01:14 PM IST
  • ಒಂದು ಕಾಲದಲ್ಲಿ ಜನಪ್ರಿಯ ದಂಪತಿಗಳೆಂದು ಖ್ಯಾತಿ ಗಳಿಸಿದ್ದ ಸೀರಿಯಲ್‌ ಜೋಡಿ
  • ಚಾರು ಅಸೋಪಾ ಮತ್ತು ರಾಜೀವ್ ಸೇನ್ ಜೀವನದಲ್ಲಿ ಮತ್ತೆ ಬಿರುಗಾಳಿ
  • ಕೇವಲ ನಾಲ್ಕು ವರ್ಷದಲ್ಲಿಯೇ ಈ ಜೋಡಿಯ ʼಪ್ರೀತಿʼ ಮಾಯವಾಗಿದೆ
ಮದುವೆಯಾದ ಕೇವಲ 4 ವರ್ಷಕ್ಕೆ ವಿಚ್ಛೇದನ: ಈ ಸೀರಿಯಲ್ ನಟಿಗೆ ತಲೆನೋವಾಗಿ ಪರಿಣಮಿಸಿದ ʼಪ್ರೀತಿʼ!!

ಸಿನಿಮಾ ಲೋಕದಲ್ಲಿ ಪ್ರೀತಿ, ಅಭಿವ್ಯಕ್ತಿ ಮತ್ತು ಸಂಘರ್ಷದ ಕಥೆಗಳು ಹೊಸದೇನಲ್ಲ. ಯಾರು ಯಾರ ಮೇಲೆ ಯಾವಾಗ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಯಾರ ಪ್ರೀತಿ ದ್ವೇಷಕ್ಕೆ ತಿರುಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಟಿವಿ ಲೋಕದಲ್ಲಿ ಅಂತಹ ಒಂದು ಜೋಡಿಯ ಇಂಟರೆಸ್ಟಿಂಗ್‌ ಸ್ಟೋರಿಯನ್ನ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಈ ಜೋಡಿ ಪರಸ್ಪರ ಪ್ರೀತಿಸಿ ಬಹಳ ಆಡಂಬರದಿಂದಲೇ ವಿವಾಹವಾದರು. ಇದಲ್ಲದೆ ವಿದೇಶಕ್ಕೆ ತೆರಳಿ ಗ್ರ್ಯಾಂಡ್‌ ಆಗಿ ಹನಿಮೂನ್‌ ಕೂಡ ಆಚರಿಸಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ದಂಪತಿ ಸಾಕಷ್ಟು ಪ್ರೀತಿಯನ್ನು ವ್ಯಕ್ತಪಡಿಸಿತ್ತು. ಆದರೆ ಈ ಜೋಡಿಯ ಪ್ರೀತಿಯಲ್ಲಿ ಕೆಲವೇ ವರ್ಷಗಳಲ್ಲಿ ಬಿರುಗಾಳಿ ಎದ್ದಿತ್ತು. 

Add Zee News as a Preferred Source

ಮದುವೆಯಾದ ಕೇವಲ 4 ವರ್ಷಗಳಿಗೆ ಈ ಜೋಡಿ ವಿಚ್ಛೇದನ ಪಡೆದುಕೊಂಡು ದೂರವಾಯಿಯಿತು. ಇದೀಗ ಕಳೆದ 3 ವರ್ಷಗಳಿಂದ ಇಬ್ಬರ ನಡುವೆ ಸಾಕಷ್ಟು ಅವಮಾನ ಸೃಷ್ಟಿಯಾಗಿದೆ. ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.  ಪರಿಸ್ಥಿತಿ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ ನ್ಯಾಯಾಲಯದ ಮೆಟ್ಟಿಲಿನವರೆಗೂ ಹೋಗಿದೆ. ಈ ಜೋಡಿ ಬೇರೆ ಯಾರೂ ಅಲ್ಲ, ಟಿವಿ ಲೋಕದಲ್ಲಿ ಒಂದು ಕಾಲದಲ್ಲಿ ಜನಪ್ರಿಯ ದಂಪತಿಗಳೆಂದು ಖ್ಯಾತಿ ಗಳಿಸಿದ್ದ ಚಾರು ಅಸೋಪಾ ಮತ್ತು ರಾಜೀವ್ ಸೇನ್.

ಇದನ್ನೂ ಓದಿ: ನೆಚ್ಚಿನ ನಟನ ಪರಿಸ್ಥಿತಿ ಕಂಡು ಕಣ್ಣೀರಾದ ಅಭಿಮಾನಿಗಳು... ಸಲ್ಮಾನ್‌ ಖಾನ್‌ ಸ್ಥಿತಿ ನೋಡಿ ಕಣ್ಣೀರಿಟ್ಟ ಫ್ಯಾನ್ಸ್‌?!  

ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು!!

ರಾಜೀವ್ ಸೇನ್ ಮತ್ತು ಚಾರು ಅಸೋಪಾ ಸ್ನೇಹಿತರ ಮೂಲಕ ಭೇಟಿಯಾದರು. ಮೊದಲ ಭೇಟಿಯಲ್ಲೇ ಅವರು ಸ್ನೇಹಿತರಾಗುವ ಮೂಲಕ ಆತ್ಮೀಯವಾಗಿ ಮಾತನಾಡಲು ಶುರು ಮಾಡಿದರು. ಇದು ಸ್ವಲ್ಪ ಸಮಯ ನಡೆಯಿತು. ಈ ಜೋಡಿಯ ಸ್ನೇಹ ಗಾಢವಾಯಿತು, ನಂತರ ಸ್ನೇಹ ಪ್ರೀತಿಯಾಗಿ ಬದಲಾಯಿತು. ಇದಾದ ನಂತರ ಇಬ್ಬರೂ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದರು. ನಂತರ ಇಬ್ಬರೂ 2019ರಲ್ಲಿ ವಿವಾಹವಾದರು. ಇವರ ವಿವಾಹ ಅದ್ದೂರಿಯಾಗಿಯೇ ನಡೆಯಿತು. ಇಬ್ಬರ ಕುಟುಂಬಸ್ಥರು ಸಾಕಷ್ಟು ಸದ್ದು ಮಾಡಿದವು. ರಾಜೀವ್ ಸೇನ್ ಅವರ ಸಹೋದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಕೂಡ ತಮ್ಮ ನೃತ್ಯದಿಂದ ಮದುವೆಗೆ ಕಳೆ ನೀಡಿದ್ದರು. ಮದುವೆಯಲ್ಲಿ ಭಾಗಿಯಾಗಿದ್ದ ಇಬ್ಬರ ಕುಟುಂಬಗಳು ಬಹಳಷ್ಟು ಆನಂದಿಸಿದರು. 

ಇದನ್ನೂ ಓದಿ: ಚಿತ್ರರಂಗಕ್ಕೆ ಬಿಗ್‌ಶಾಕ್..‌ ಮತ್ತೊಬ್ಬ ಸ್ಟಾರ್‌ ನಟಿಗೆ 4 ನೇ ಹಂತದ ಕ್ಯಾನ್ಸರ್!‌ ಬೆಚ್ಚಿಬಿದ್ದ ಅಭಿಮಾನಿಗಳು..

ಕೇವಲ 4 ವರ್ಷಗಳಲ್ಲೇ ಪ್ರೀತಿ ಮಾಯ!

ಈ ಜೋಡಿಯ ಮದುವೆ ಕೇವಲ 4 ವರ್ಷಗಳ ಕಾಲ ನಡೆಯಿತು. ಆರಂಬದಲ್ಲಿ ಎಲ್ಲವೂ ಚೆನ್ನಾಗಿದ್ದ ಈ ದಂಪತಿಯ ಜೀವನದಲ್ಲಿ ಬಿರುಗಾಳಿ ಸೃಷ್ಟಿಯಾಯಿತು. ಬಳಿಕ ಇಬ್ಬರೂ 2023 ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ರಾಜೀವ್ ಮತ್ತು ಚಾರು ನಡುವೆ ಮಾತಿನ ಸಮರ ಭುಗಿಲೆದ್ದಿತು. ಇಬ್ಬರೂ ಪರಸ್ಪರ ಸಾಕಷ್ಟು ಆರೋಪ-ಪ್ರತ್ಯಾರೋಪ ನಡೆಸಿದರು. ಕಳೆದ 3 ವರ್ಷಗಳಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದಲ್ಲದೆ ರಾಜೀವ್ ಅವರು ಚಾರು ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆಕೆ ಅರ್ಥಹೀನ ಮಹಿಳೆ ಎಂದು ಜರಿದಿದ್ದರು. ಇದೀಗ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಈ ಮಾತಿನ ಸಮರವು ಕಾನೂನು ಹೋರಾಟವಾಗಿ ಬದಲಾಗುವ ಸಾಧ್ಯತೆ ಇದೆ. ಚಾರು ಅವರ ಹಿಂದಿನ ಬ್ಲಾಗ್‌ನಿಂದ ರಾಜೀವ್ ಕೋಪಗೊಂಡಿದ್ದು, ಕಾನೂನು ಸಮರ ಸಾರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಚೆನ್ನಾಗಿಯೇ ಇದ್ದ ಈ ದಂಪತಿಯ ಬಾಳಲ್ಲಿ ಯಾರು ಹುಳಿ ಹಿಂಡಿದರು? ಯಾವ ಕಾರಣಕ್ಕೆ ಈ ಜೋಡಿ ವಿಚ್ಛೇದನದ ಮೂಲಕ ದೂರವಾಯಿತು ಅನ್ನೋ ಪ್ರಶ್ನೆ ಇಬ್ಬರ ಅಭಿಮಾನಿಗಳಲ್ಲಿಯೂ ಮೂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News