ನನಗೆ ಟ್ಯೂಮರ್‌ ಆಗಿತ್ತು, ಟಿಬಿ ಆಗಿತ್ತು, ಈಗ ಕ್ಯಾನ್ಸರ್‌ ಬಂದಿದೆ: ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!

serial actress suffering with cancer: ಖ್ಯಾತ ಸಿರೀಯಲ್‌ ನಟಿ ಕಮಲಶ್ರೀ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಅಭಿಮಾನಿಗಳಿಗೆ ಶಾಕ್‌ ನೀಡಿದೆ. 

Written by - Chetana Devarmani | Last Updated : Apr 14, 2025, 04:51 PM IST
  • ದುಬಾರಿ ಮಾತ್ರೆಗಳನ್ನು ಕೊಟ್ಟು ಕ್ಯಾನ್ಸರ್‌ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ
  • ಇದರಿಂದ ಈಗ 60% ಗುಣ ಆಗಿದೆ ಎಂದು ಕಿರುತೆರೆಯ ನಟಿ ಹೇಳಿದ್ದಾರೆ.
ನನಗೆ ಟ್ಯೂಮರ್‌ ಆಗಿತ್ತು, ಟಿಬಿ ಆಗಿತ್ತು, ಈಗ ಕ್ಯಾನ್ಸರ್‌ ಬಂದಿದೆ: ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!

serial actress kamalashree: ಗಟ್ಟಿಮೇಳ, ಬದುಕು, ಕಾವೇರಿ ಕನ್ನಡ ಮೀಡಿಯಂ, ಕನಕ, ಲಕ್ಷ್ಮೀ ಬಾರಮ್ಮ ಹೀಗೆ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ ಖ್ಯಾತ ಹಿರಿಯ ನಟಿ ಕಮಲಶ್ರೀ ಅವರಿಗೆ ಕ್ಯಾನ್ಸರ್‌ ಕಾಯಿಲೆ ಬಂದಿದೆ ಎಂಬ ವಿಚಾರ ಈಗ ಹೊರಬಿದ್ದಿದೆ. ʼಪಂಚಮಿ ಟಾಕ್ಸ್‌ ಯುಟ್ಯೂಬ್‌ʼ ಚಾನೆಲ್‌ ಜೊತೆಗೆ ಮಾತನಾಡಿದ ಕಿರುತೆರೆ ನಟಿ ಕಮಲಶ್ರೀ ತಮ್ಮ ಈ ಜೀವನದ ಕಷ್ಟದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. 

Add Zee News as a Preferred Source

ವಯಸ್ಸು 75 ದಾಟಿರೋದರಿಂದ ಕಮಲಶ್ರೀ ಅವರಿಗೆ ಈಗ ಸರ್ಜರಿ, ಕಿಮಿಯೋಥೆರಪಿ ಮಾಡೋಕೆ ಆಗೋದಿಲ್ಲ ಎಂದು ವೈದ್ಯರು ಹೇಳಿದ್ದಾರಂತೆ. ದುಬಾರಿ ಮಾತ್ರೆಗಳನ್ನು ಕೊಟ್ಟು ಕ್ಯಾನ್ಸರ್‌ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಈಗ 60% ಗುಣ ಆಗಿದೆ ಎಂದು ಕಿರುತೆರೆಯ ಹಿರಿಯ ನಟಿ ಕಮಲಶ್ರೀ ಹೇಳಿದ್ದಾರೆ. 

ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಮತ್ತೊಮ್ಮೆ ಜೀವ ಬೆದರಿಕೆ: ಬಾಯಿಜಾನ್‌ಗೆ ನಿಜಕ್ಕೂ ಇದೆಯಾ ಅಪಾಯ?

ʻಗಟ್ಟಿಮೇಳʼ ಸೀರಿಯಲ್ ಮುಗಿಯುವ ಹೊತ್ತಲ್ಲಿ ನನಗೆ ಕ್ಯಾನ್ಸರ್‌ ಇದೆ ಎಂಬುದು ಗೊತ್ತಾಯ್ತು. ನನ್ನಲ್ಲಿ ಕ್ಯಾನ್ಸರ್‌ ಕಾಯಿಲೆಗೆ ಚಿಕಿತ್ಸೆ ಪಡೆಯುವಷ್ಟು ದುಡ್ಡ ಇರಲಿಲ್ಲ. ನಟಿ ಗಿರಿಜಾ ಲೋಕೇಶ್‌ ಅವರ ಸಹಾಯದಿಂದ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರಂಭಿಸಿದೆ. ಆಮೇಲೆ ನಟಿ ಉಮಾಶ್ರೀ ಬಂದು ನನ್ನ ಕರೆದುಕೊಂಡು ಹೋಗಿ ಸ್ಕ್ಯಾನ್‌ ಮಾಡಿಸಿದರು. ಅವರೇ ಹಣ ಕೊಟ್ಟರು. ವೈದ್ಯರ ಬಳಿ ಮಾತನಾಡಿ ಬಡ ಕಲಾವಿದೆ ಜಾಸ್ತಿ ಹಣ ತಗೋಬೇಡಿ. ನಾನು ಹಣ ಕೊಡ್ತೀನಿ ಎಂದು ಹೇಳಿದರು. ಗಿರಿಜಾ ಲೋಕೇಶ್‌, ಉಮಾಶ್ರೀ ನನಗೆ ಹಣ ಹಾಕುತ್ತಾರೆ ಎಂದಿದ್ದಾರೆ. 

ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ, ಅನು ಪೂವಮ್ಮ, ಮೈಸೂರು ಮಾಲತಿ, ಪದ್ಮ, ವೀಣಾ ವೆಂಕಟೇಶ್‌ ಮುಂತಾದವರು ಹಣ ಸಹಾಯ ಮಾಡಿದ್ದಾರೆ. ನನ್ನ ಅಕ್ಕನ ಮಗಳು ಆಗಾಗ ಬರುತ್ತಾಳೆ. ಅವಳು ನನಗೆ ಸಹಾಯ ಮಾಡ್ತಿದ್ದಾಳೆ. ಈಗ ನನಗೆ ನಟಿಸಲು ಸಾಧ್ಯವಿಲ್ಲ. ತುಂಬ ಹೊತ್ತು ನಿಲ್ಲಲು ಆಗುವುದಿಲ್ಲ. ಶೂಟಿಂಗ್‌ ಅಂದ್ರೆ ಬೆಳಗ್ಗೆಯಿಂದ ಸಂಜೆವರೆಗೆ ಇರಬೇಕು. ಒಳ್ಳೆ ಹೆಸರು, ಕೆಲಸ ಸಿಗುವಾಗ ದೇವರು ನನಗೆ ಕಾಯಿಲೆ ಕೊಟ್ಟು ಮೂಲೆಯಲ್ಲಿ ಕೂರಿಸಿದ್ದಾರೆ ಎಂದು ನಟಿ ಕಮಲಶ್ರೀ ನೋವನ್ನು ಹೊರಹಾಕಿದ್ದಾರೆ. 

ಹಿಂದೆ ನನಗೆ ಟ್ಯೂಮರ್‌ ಆಗಿತ್ತು. ಆಮೇಲೆ ಟಿಬಿ ಸಹ ಆಗಿತ್ತು. ಈಗ ಕ್ಯಾನ್ಸರ್‌ ಬಂದಿದೆ. ಆದಷ್ಟು ಬೇಗ ಈ ಕಾಯಿಲೆಯಿಂದ ಗುಣವಾಗುತ್ತೇನೆ. ಮತ್ತೆ ನಟಿಸುತ್ತೇನೆ ಎನ್ನುವ ನಂಬಿಕೆ ಇದೆ. ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಕಾವೇರಿ ಅಜ್ಜಿ ಪಾತ್ರ ಮಾಡುತ್ತಿದ್ದೆ. ಆದರೆ ಆಗಲೇ ಕ್ಯಾನ್ಸರ್‌ ಇರುವ ಸಂಗತಿ ಗೊತ್ತಾಗಿದ್ದು. ನಟಿಸಲು ಆಗದೆ ಧಾರಾವಾಹಿ ಬಿಟ್ಟೆ. ನಾನು ಮಾಡುತ್ತಿದ್ದ ಪಾತ್ರವನ್ನು ಮೈಸೂರು ಮಾಲತಿ ಅವರು ಮಾಡುತ್ತಿದ್ದಾರೆ ಎಂದು ಕಮಲಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ಚಂದನ್‌ ಶೆಟ್ಟಿ ಜೊತೆ ಸದ್ದಿಲ್ಲದೇ ಎಂಗೇಜ್‌ ಆದ ಕನ್ನಡದ ಪ್ರಖ್ಯಾತ ಧಾರಾವಾಹಿ ನಟಿ: ಮುದ್ದಾದ ಜೋಡಿಯ ಫೋಟೋ ರಿವೀಲ್‌‌

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News