Tejaswini Gowda Divorce Rumors: ತೇಜಸ್ವಿನಿ ಗೌಡ ಈ ಹೆಸರು ಕಿರುತೆರೆಯಲ್ಲಿ ಸಖತ್ ಫೇಮಸ್. ನಟಿ ತೇಜಸ್ವಿನಿ ಗೌಡ ಕನ್ನಡ ಮಾತ್ರವಲ್ಲ ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿಯೂ ನಟಿಸಿ ಛಾಪು ಮೂಡಿಸಿದ್ದಾರೆ. ತಮಿಳು ಧಾರಾವಾಹಿ 'ವಿದ್ಯಾ ನಂ. 1' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ತೇಜಸ್ವಿನಿ ಗೌಡ, ನಂತರ ತೆತೆಲುಗು ಕೊಯಿಲಮ್ಮ ಧಾರಾವಾಹಿಯಲ್ಲಿ ಚಿನ್ನಿ ಪಾತ್ರದ ಮೂಲಕ ತೇಜಸ್ವಿನಿ ಫೇಮಸ್ ಆದರು. ಈ ಧಾರಾವಾಹಿಯಲ್ಲಿನ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು.
ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮಾತ್ರವಲ್ಲದೆ, ಕನ್ನಡದಲ್ಲೂ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕನ್ನಡ ಧಾರಾವಾಹಿ 'ಬಿಳಿ ಹೆಂಡ್ತಿ'ಯಲ್ಲಿ ರಮ್ಯಾ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಕನ್ನಡ ಪ್ರೇಕ್ಷಕರನ್ನು ಮೆಚ್ಚಿಸಿದರು. ಮತ್ತೊಮ್ಮೆ ತಮಿಳಿನಲ್ಲಿ ಸುಂದರಿ ನೀಮ್ ಸುಂದನ್ ನಾನುಮ್ ಮೂಲಕ ಕ್ರೇಜ್ ಹೆಚ್ಚಿಸಿಕೊಂಡರು.
ಮೂರು ಭಾಷೆಗಳಲ್ಲಿ ನಟಿಸಿದರೂ, ತೇಜಸ್ವಿನಿ ಗೌಡ ತೆಲುಗು ಕಿರುತೆರೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು. ಕೊಯಿಲಮ್ಮ ಧಾರಾವಾಹಿಯ ನಂತರ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ತೇಜಸ್ವಿನಿ ಗೌಡ ಅವರು ಡಿಸೆಂಬರ್ 11, 2022 ರಂದು ಬಿಗ್ ಬಾಸ್ ತೆಲುಗು ಸೀಸನ್ 7 ರ ರನ್ನರ್ ಅಪ್ ಅಮರದೀಪ್ ಚೌಧರಿ ಅವರನ್ನು ವಿವಾಹವಾದರು. ಇಬ್ಬರೂ ಪ್ರಸ್ತುತ ಒಟ್ಟಾಗಿ ಸುಂದರ ದಾಂಪತ್ಯ ಕಟ್ಟಿಕೊಂಡಿದ್ದಾರೆ.
ಆದರೆ ಇತ್ತಿಚೆಗೆ ತೇಜಸ್ವಿನಿ ಗೌಡ ಮತ್ತು ಅಮರ್ ದೀಪ್ ಸಂಬಂಧದಲ್ಲಿ ಬಿರುಕು ಮೂಡಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈ ವದಂತಿಗಳಿಗೆ ತೇಜಸ್ವಿನಿ ಗೌಡ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ನಿರಂಜನ್ ಸುಧೀಂದ್ರ ʼಸ್ಪಾರ್ಕ್ʼಗೆ ನೆನಪಿರಲಿ ಪ್ರೇಮ್ ಎಂಟ್ರಿ
'ಕಿಸ್ಸಿಕ್ ಟಾಕ್ಸ್' ಎಂಬ ಟಾಕ್ ಶೋನಲ್ಲಿ ಭಾಗವಹಿಸಿದ್ದ ತೇಜಸ್ವಿನಿ ಗೌಡ, ತಮ್ಮ ವೈಯಕ್ತಿಕ ಜೀವನ ಮತ್ತು ಡಿವೋರ್ಸ್ ಬಗ್ಗೆ ಮಾತನಾಡಿದರು. ಗಂಡ ಹೆಂಡತಿ ನಡುವೆ ನಿತ್ಯ ಸಣ್ಣಪುಟ್ಟ ಜಗಳಗಳು ನಡೆಯುತ್ತಲೇ ಇರುತ್ತವೆ. ಆ ಕಾರಣಕ್ಕಾಗಿ ಯಾರೂ ವಿಚ್ಛೇದನ ಪಡೆಯುವುದಿಲ್ಲ ಎಂದು ತೇಜಸ್ವಿನಿ ಗೌಡ ಸ್ಪಷ್ಟಪಡಿಸಿದರು.
ನಾನು ಅಮರ್ ದೀಪ್ ಅವರನ್ನು ಪ್ರೀತಿಸುವಷ್ಟೇ ಅವರು ನನ್ನನ್ನು ಪ್ರೀತಿಸುತ್ತಾರೆ. ನಾವಿಬ್ಬರೂ ಒಟ್ಟಿಗೆ ಸಂತೋಷವಾಗಿದ್ದೇವೆ. ಶೀಘ್ರದಲ್ಲೇ ಪೋಷಕರಾಗಲಿದ್ದೇವೆ. ಇಂತಹ ವದಂತಿಗಳನ್ನು ನಂಬಬೇಡಿ ಎಂದು ತೇಜಸ್ವಿನಿ ಗೌಡ ಹೇಳಿದರು.
ತೇಜಸ್ವಿನಿ ಗೌಡ ಮತ್ತು ಅಮರದೀಪ್ ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಅಭಿಮಾನಿಗಳ ಬೆಂಬಲದೊಂದಿಗೆ ಮುಂದುವರಿಯುತ್ತಿದ್ದಾರೆ. ಅವರಿಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ನೃತ್ಯಗಾರರಾಗಿ ಮಿಂಚುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಮತ್ತೊಂದೆಡೆ, ಅಮರ್ ದೀಪ್ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆ. ಅಮರ್ ದೀಪ್ ಪ್ರಸ್ತುತ ಸುರೇಖಾ ವಾಣಿ ಅವರ ಪುತ್ರಿ ಸುಪ್ರಿತಾ ಅವರೊಂದಿಗೆ ಒಂದು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಐಶ್ವರ್ಯಾ ರೈ ಮಗಳ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..! ಹೇಗಿದೆ ಆರಾಧ್ಯ ಭವಿಷ್ಯ?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









