ವಿಶ್ವದ ಖ್ಯಾತ ಫುಟ್ಬಾಲ್ ಪ್ಲೇಯರ್ ಲಿಯೋನೆಲ್ ಮೆಸ್ಸಿ ಅವರು ಇಂದು ಬೆಳಗಿನ ಜಾವಾ 2:30ರ ಸುಮಾರಿಗೆ ಕೋಲ್ಕತ್ತಾದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ಸ್ವಾಗತಿಸಲು ಸಾಕಷ್ಟು ಅಭಿಮಾನಿಗಳು ವಿಮಾನ ನಿಲ್ದಾಣದಿಂದ ಲೇಕ್ ಟೌನ್‌ವರೆಗೆ ನಿಂತಿದ್ದರು. ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ನಿರ್ಮಿಸಲಾಗಿದ್ದ 70 ಅಡಿ ಎತ್ತರದ ತಮ್ಮದೇ ಪ್ರತಿಮೆಯನ್ನು ಅವರು ಅನಾವರಣಗೊಳಿಸಿದರು. ಇದೇ ಸಮಯದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಅಬ್‌ರಾಮ್ ಜೊತೆಯಲ್ಲಿದ್ದರು.
ಲೆಜೆಂಡರಿ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಹಾಗೂ ಶಾರುಖ್ ಖಾನ್ ಅವರ ಜೊತೆ ಕ್ಯೂಟ್ ಆಗಿ ಕಾನಿಸ್ತಿರೋ ಬಾಲಕನೊಬ್ಬ ಮಧ್ಯೆದಲ್ಲಿ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾನೆ. ಈ ಬಾಲಕ ಯಾರು ಎನ್ನುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಇಷ್ಟೇ ಅಲ್ಲ, ಶಾರುಖ್ ಖಾನ್ ಅವರು ಸಾಲ್ಟ್ ಲೇಕ್ ಸ್ಟೇಡಿಯಂಗೆ ಬರುವಾಗ ಈ ಬಾಲಕನನ್ನು ಪಕ್ಕದಲ್ಲಿ ಕೂರಿಸಿಕೊಂಡು ಬಂದಿದ್ದಾರೆ. ಇಬ್ಬರೂ ಲಿಯೋನೆಲ್ ಮೆಸ್ಸಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ. ಇಷ್ಟಕ್ಕೂ ಯಾರು ಈ ಅಬ್ಬರಾಮ್?.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಗೌರಿ ಖಾನ್ ಅವರನ್ನು 1991ರ ಅಕ್ಟೋಬರ್ 25 ರಂದು ಮದುವೆಯಾದರು. ಇಬ್ಬರು ಬೇರೆ ಬೇರೆ ಧರ್ಮದವರು ಆಗಿದ್ದರೂ ಹಿಂದೂ ಸಂಪ್ರದಾಯದಂತೆ ಮದುವೆಯಾದರು. ನಂತರ ದಂಪತಿ ಜೀವನದಲ್ಲಿ 1997ರಲ್ಲಿ ಆರ್ಯನ್ ಜನಿಸುತ್ತಾರೆ. ಇದಾದ ನಾಲ್ಕು ವರ್ಷಗಳ ನಂತರ 2000ರಲ್ಲಿ ಸುಹಾನಾ ಅವರು ಎರಡನೇ ಮಗಳಾಗಿ ಜನಿಸುತ್ತಾರೆ. ಈವರೆಗೂ ಶಾರುಖ್ ಖಾನ್ ದಂಪತಿಗೆ ಎರಡು ಮಕ್ಕಳು ಎಂದು ಎಲ್ಲರು ತಿಳಿದಿದ್ದಾರೆ.
ಇದನ್ನೂ ಓದಿ: ಲಿಯೋನೆಲ್ ಮೆಸ್ಸಿ ಜೊತೆ ಶಾರುಖ್ ಖಾನ್.. ಐಪಿಎಲ್‌ನ ಈ ಟೀಮ್ ಓನರ್ ಸಹ ಫುಟ್ಬಾಲ್ ಸ್ಟಾರ್‌ನ ಮೀಟ್ ಮಾಡಿದ್ರು..!
ಆದರೆ ಶಾರುಖ್ ಖಾನ್ ಮತ್ತು ಗೌತಿ ಖಾನ್ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಆರ್ಯನ್, ಸುಹಾನಾ ಬಳಿಕ 2013 ರಲ್ಲಿ ಅಬ್‌ರಾಮ್ ಜನಿಸಿದ್ದಾನೆ. ತುಂಬಾ ಕ್ಯೂಟ್ ಆಗಿರುವ ಅಬ್‌ರಾಮ್ ಶಾರುಖ್ ಖಾನ್ ಮತ್ತು ಗೌತಿ ಖಾನ್ ದಂಪತಿಯ ಮೂರನೇ ಮಗನಾಗಿದ್ದಾನೆ. ಬಾಡಿಗೆ ತಾಯಿಯ ಮೂಲಕ ಅಬ್‌ರಾಮ್‌ನನ್ನು ಪಡೆದುಕೊಂಡಿದ್ದಾರೆ. ಶಾರುಖ್ ಮನೆಯಲ್ಲಿ ಎಲ್ಲರಿಗಿಂತಲೂ ವಿಶೇಷ, ಹೆಚ್ಚು ಇಷ್ಟಪಡುವಂತವರು ಇದ್ದರೇ ಅದು ಅಬ್‌ರಾಮ್ ಆಗಿದ್ದಾರೆ. ಕಿರಿಯ ಮಗನಿಗೆ ಲೆಜೆಂಡರಿ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಎಂದರೆ ಅಚ್ಚಮೆಚ್ಚು. ಹೀಗಾಗಿಯೇ ಮಗನಿಗಾಗಿ ಶಾರುಖ್ ಖಾನ್ ಮೆಸ್ಸಿರನ್ನು ಭೇಟಿಯಾಗಲು ಬಂದಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್ ಕ್ಯಾನ್ಸಲ್.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?









