close

News WrapGet Handpicked Stories from our editors directly to your mailbox

ಬಾಲಿವುಡ್ ನಲ್ಲಿ 27 ವರ್ಷ ಪೂರೈಸಿದ ಶಾರುಖ್ ಖಾನ್

ಬಾಲಿವುಡ್‌ನಲ್ಲಿ ಶಾರುಖ್ ಖಾನ್ 27 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಶಾರುಖ್ ಖಾನ್ ಅವರು ಮೊದಲ ಬಾರಿಗೆ 1992 ರ ದಿವಾನ  ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. 

Updated: Jun 26, 2019 , 08:45 PM IST
ಬಾಲಿವುಡ್ ನಲ್ಲಿ 27 ವರ್ಷ ಪೂರೈಸಿದ ಶಾರುಖ್ ಖಾನ್

ನವದೆಹಲಿ: ಬಾಲಿವುಡ್‌ನಲ್ಲಿ ಶಾರುಖ್ ಖಾನ್ 27 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಶಾರುಖ್ ಖಾನ್ ಅವರು ಮೊದಲ ಬಾರಿಗೆ 1992 ರ ದಿವಾನ  ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. 

"ನಾನು ಭಾರತೀಯ ಸಿನೆಮಾದಲ್ಲಿ 27 ವರ್ಷಗಳ  ಕಳೆದದ್ದಕ್ಕಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ, ಇದು ಭೂಮಿಯ ಮೇಲಿನ ನನ್ನ ಜೀವನದ ಅರ್ಧದಷ್ಟು ಸಮಯವಾಗಿದೆ. ನಾನು 20 ವರ್ಷಗಳಿಂದ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ಕೆಲವು ಬಾರಿ ನಾನು ಯಶಸ್ವಿಯಾಗಿದ್ದೇನೆ ಮತ್ತು ಅನೇಕ ಬಾರಿ ನಾನು ವಿಫಲವಾಗಿದ್ದೇನೆ' ಎಂದು ಶಾರುಖ್ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

'ದಿವಾನಾ' ಚಿತ್ರದಲ್ಲಿ ಮೋಟಾರ್ ಸೈಕಲ್‌ ಮೂಲಕ 'ಕೊಯಿ ನಾ ಕೊಯಿ ಚಾಹಿಯೆ' ಹಾಡಿನ ಮೂಲಕ ಬಂದು ನಿಮ್ಮ ಹೃದಯದಲ್ಲಿ ಸವಾರಿ ಮಾಡಿದ್ದೇನೆ. ಇಷ್ಟು ವರ್ಷಗಳ ಕಾಲ ನನ್ನೊಂದಿಗೆ ಸಹಕರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಬರಿ ಅನುಮತಿಸುವುದಲ್ಲದೆ, ನಿಮ್ಮ ಹೃದಯದಲ್ಲಿ ಹಲವಾರು ವರ್ಷಗಳ ಕಾಲ ಇರುವಂತೆ ಮಾಡಿದ್ದೀರಿ, ಇದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಎಂದು ಶಾರುಖ್ ಖಾನ್ ಹೇಳಿದ್ದಾರೆ.

"27 ವರ್ಷಗಳ ಹಿಂದೆ 'ದಿವಾನಾ'ದಲ್ಲಿ ನಾನು ಮಾಡಿದ ಸಾಹಸಗಳನ್ನು ಪ್ರಯತ್ನಿಸಲು ಮೋಟಾರ್ಸೈಕಲ್ ಕಂಪನಿಯೊಂದರ ಸ್ನೇಹಿತರು, ನನಗೆ ಎರಡು ಮೋಟರ್ ಸೈಕಲ್‌ಗಳನ್ನು ಕಳುಹಿಸಿರುವುದು ಕಾಕತಾಳೀಯ. ಈಗ ಅದನ್ನು ಮತ್ತೆ ಪ್ರಯತ್ನಲೆತ್ತಿಸುವೆ, ಆದರೆ ಈ ಬಾರಿ ಅದಕ್ಕೆ ವ್ಯತ್ಯಾಸವಿದೆ. ಈ ಬಾರಿ ಖಂಡಿತವಾಗಿಯೂ ನಾನು ಹೆಲ್ಮೆಟ್ ಧರಿಸಿ ಮಾಡುವೆ. ಬೈಕು ಸವಾರಿ ಮಾಡುವಾಗ ಯಾವಾಗಲೂ ಹೆಲ್ಮೆಟ್ ಧರಿಸಿ "ಎಂದು ಅವರು ಹೇಳಿದರು.