)
Shah Rukh Khan viral video : ಬಾಲಿವುಡ್ನ ಕಿಂಗ್ ಎಂದೇ ಶಾರುಖ್ ಖಾನ್ ಖ್ಯಾತರಾಗಿದ್ದಾರೆ. 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಜವಾನ್ ಚಿತ್ರಕ್ಕಾಗಿ ಶಾರುಖ್ ಖಾನ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈ ಸಮಾರಂಭಕ್ಕೆ ರಾಣಿ ಮುಖರ್ಜಿ ಸಹ ಆಗಮಿಸಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಶಾರುಖ್ ಕೈ ಮುಗಿದಿದ್ದಾರೆ. ಹೆಣ್ಣು ಮಕ್ಕಳಿಗೆ ಶಾರುಖ್ ಕೊಡುವ ಗೌರವ ಎಂಥದ್ದು ನೋಡಿ. ಶಾರುಖ್ ಅವರ ಈ ಫೋಟೋ ವೈರಲ್ ಆಗ್ತಿದೆ.
ಶಾರುಖ್ ಖಾನ್ ಏಳು ಸಾವಿರ ಕೋಟಿ ರೂಪಾಯಿ ಆಸ್ತಿಗೆ ಒಡೆಯ ಭಾರತದ ಅತ್ಯಂತ ಶ್ರೀಮಂತ ನಟ. ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿಯೂ ಶಾರುಖ್ ಖಾನ್ ಹೆಸರಿದೆ. ಅವರು ನೀಡಿದ ಹಿಟ್ ಚಿತ್ರಗಳ ಸಾಲು ತುಂಬಾನೇ ದೊಡ್ಡದಿದೆ. ‘ಪಠಾಣ್’ ಹಾಗೂ ‘ಜವಾನ್’ ಎರಡೂ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿವೆ. ಅದುಕೂಡ ಒಂದೇ ವರ್ಷ. ಈ ರೀತಿಯ ಅಪರೂಪದ ದಾಖಲೆ ಶಾರುಖ್ ಖಾನ್ ಹೆಸರಲ್ಲಿದೆ. ಆದರೆ ಅವರು ಎಂದಿಗೂ ಅಹಂನಲ್ಲಿ ಮೆರೆದಿಲ್ಲ. ಅವರ ವ್ಯಕ್ತಿತ್ವ ಅನೇಕರಿಗೆ ಸ್ಫೂರ್ತಿಯಾಗಿದೆ.
ರಾಣಿ ಮುಖರ್ಜಿಯನ್ನು ಕಂಡು ಶಾರುಖ್ ಕೈ ಮುಗಿದ ಬೆನ್ನಲ್ಲೇ ಅವರ ಹಳೆಯ ವಿಡಿಯೋ ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಅಮಿತಾಬ್ ಮತ್ತು ರಜನಿಕಾಂತ್ ಸಹ ಇದ್ದಾರೆ.
ಹಿರಿಯ ಕಲಾವಿದರನ್ನು ಕಂಡರೆ ಶಾರುಖ್ ಖಾನ್ ಅವರಿಗೆ ಅತೀವ ಗೌರವ. ಅದಕ್ಕೆ ಈ ವಿಡಿಯೋ ಸಾಕ್ಷಿ. ಈ ವಿಡಿಯೋದಲ್ಲಿ ರಜನಿಕಾಂತ್ ಮತ್ತು ರಜನಿಕಾಂತ್ ಪತ್ನಿಗೆ ಶಾರುಖ್ ಸಾಕಷ್ಟು ಗೌರವ ಕೊಡೋದನ್ನು ಕಾಣಬಹುದು. ಸಚಿನ್ ತೆಂಡೂಲ್ಕರ್ ಗೆ ಶೇಖ್ ಹ್ಯಾಂಡ್ ಮಾಡಿದರು.
ಶಾರುಖ್ ಎದುರು ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಬರುತ್ತಾರೆ. ಅವರನ್ನು ಕಂಡ ಕೂಡಲೇ ಕಾಲಿಗೆ ನಮಸ್ಕರಿಸುತ್ತಾರೆ. ಶಾರುಖ್ ಖಾನ್ ಅವರ ಈ ನಡವಳಿಕೆ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.
ಶಾರುಖ್ ಖಾನ್ 'ಕಿಂಗ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಅಭಯ್ ವರ್ಮಾ, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಜೈದೀಪ್ ಅಹ್ಲಾವತ್, ಅರ್ಷದ್ ವಾರ್ಸಿ ಮತ್ತು ಸೌರಭ್ ಶುಕ್ಲಾ ಸೇರಿದಂತೆ ಬಹುತಾರಾಗಣ ಹೊಂದಿಗಿದೆ. ಈ ಚಿತ್ರವು 2026 ರಲ್ಲಿ ಬಿಡುಗಡೆಯಾಗಲಿದೆ.