)
Shah Rukh Khan Net Worth: ಹುರುನ್ ಇಂಡಿಯಾ ರಿಚ್ ಲಿಸ್ಟ್ 2025 ಬಿಡುಗಡೆ ಆಗಿದೆ. ಭಾರತದ ಅತ್ಯಂತ ಶ್ರೀಮಂತ ಐವರು ತಾರೆಯರ ಹೆಸರನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಶಾರುಖ್ ಖಾನ್ 12000 ಕೋಟಿ ದಾಟಿದೆ. ಭಾರತದ ಅತ್ಯಂತ ಸಿರಿವಂತ ನಟರ ಪಟ್ಟಿಯಲ್ಲಿ ಮತ್ತೆ ಶಾರುಖ್ ಮೊದಲ ಸ್ಥಾನದಲ್ಲಿದ್ದಾರೆ.
ಹುರುನ್ ಇಂಡಿಯಾ ರಿಚ್ ಲಿಸ್ಟ್ 2025 ರ ಪ್ರಕಾರ ಶಾರುಖ್ ಖಾನ್ ದೇಶದ ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಆಗಿದ್ದಾರೆ. ಅವರ ಸಂಪತ್ತು $1.4 ಬಿಲಿಯನ್ ಅಂದರೆ ಅಂದಾಜು ರೂ.12,490 ಕೋಟಿ ಎಂದು ಅಂದಾಜಿಸಲಾಗಿದೆ. ಅವರು ಟಾಪ್ 5 ಶ್ರೀಮಂತ ಬಾಲಿವುಡ್ ತಾರೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಜೂಹಿ ಚಾವ್ಲಾ ಎರಡನೇ ಸ್ಥಾನದಲ್ಲಿದ್ದಾರೆ. ಹುರುನ್ ಪಟ್ಟಿಯಲ್ಲಿ ಶಾರುಖ್ ಖಾನ್ ನಂತರ, ಅವರ ವ್ಯವಹಾರ ಪಾಲುದಾರರಾದ ಮತ್ತು ಸ್ನೇಹಿತೆ ಜೂಹಿ ಚಾವ್ಲಾ ಎರಡನೇ ಸ್ಥಾನದಲ್ಲಿದ್ದಾರೆ. ಜೂಹಿ ಮತ್ತು ಅವರ ಪತಿ ಜೈ ಮೆಹ್ತಾ ಅವರ ಕುಟುಂಬ ಒಟ್ಟು 7790 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು ದೇಶದ ಅತ್ಯಂತ ಶ್ರೀಮಂತ ನಟಿ ಆಗಿದ್ದಾರೆ.
ಹೃತಿಕ್ ರೋಷನ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2025 ರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಹೃತಿಕ್ ರೋಷನ್ ಮೂರನೇ ಅತ್ಯಂತ ಶ್ರೀಮಂತ ನಟನಾಗಿದ್ದಾರೆ. ಅವರ ಒಟ್ಟು ಸಂಪತ್ತು 2160 ಕೋಟಿ. ತಮ್ಮ ಬ್ರ್ಯಾಂಡ್ HRX ನ ಯಶಸ್ಸಿನಿಂದ ಈ ಸಂಪತ್ತನ್ನು ಗಳಿಸಿದ್ದಾರೆ. ಪತ್ನಿಗೆ ವಿಚ್ಛೇದನ ನೀಡಿದ ನಂತರ ಅವರು ಭಾರಿ ಜೀವನಾಂಶವನ್ನೂ ಪಾವತಿಸಿದ್ದಾರೆ.
ಧರ್ಮ ಪ್ರೊಡಕ್ಷನ್ಸ್ ಮತ್ತು ಧರ್ಮಟಿಕ್ ಎಂಟರ್ಟೈನ್ಮೆಂಟ್ನ ಅದ್ಭುತ ಪ್ರದರ್ಶನದೊಂದಿಗೆ ಕರಣ್ ಜೋಹರ್ ಮತ್ತು ಅವರ ಕುಟುಂಬವು ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2025 ರಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕರಣ್ ಅವರ ಒಟ್ಟು ಆಸ್ತಿ 1880 ಕೋಟಿ.
ಭಾರತೀಯ ಸ್ಟಾರ್ ನಟ ಅಮಿತಾಬ್ ಬಚ್ಚನ್ ಟಾಪ್ 5 ರಲ್ಲಿದ್ದಾರೆ. ಅವರ ಕುಟುಂಬದ ಒಟ್ಟು ಆಸ್ತಿ 1630 ಕೋಟಿ. ಇದರಲ್ಲಿ ಅಮಿತಾಬ್, ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಆಸ್ತಿಗಳು ಸೇರಿವೆ. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2025 ರಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ.