Richest actors in the world: ಹಾಲಿವುಡ್ ಮತ್ತು ಬಾಲಿವುಡ್ ಎರಡರಲ್ಲೂ ಸಿನಿಮಾ ತಾರೆಯರು ಬಹಳ ಹಿಂದಿನಿಂದಲೂ ಖ್ಯಾತಿಯನ್ನು ಮಾತ್ರವಲ್ಲದೆ ಅಪಾರ ಸಂಪತ್ತನ್ನು ಸಹ ಗಳಿಸಿದ್ದಾರೆ. ಅನೇಕ ನಟರು ವರ್ಷಗಳಲ್ಲಿ ಸಿನಿಮಾಗಳ ಮೂಲಕ ಬಹು ಮಿಲಿಯನ್ ಡಾಲರ್ ಸಾಮ್ರಾಜ್ಯ ಕಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಾಪ್-ರೇಟಿಂಗ್ ನಟರು ತಮ್ಮ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಕೆಲವರು ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಕೇವಲ ಸಂಭಾವನೆ ಮಾತ್ರವಲ್ಲದೆ ವಿವಿಧ ವ್ಯವಹಾರಗಳಂದಲೂ ಇವರು ಹಣ ಸಂಪಾದಿಸುತ್ತಾರೆ.
ಎಸ್ಕ್ವೈರ್ ಇತ್ತೀಚೆಗೆ ವಿಶ್ವದ ಟಾಪ್ 10 ಶ್ರೀಮಂತ ನಟರ ಪಟ್ಟಿಯನ್ನು ಪ್ರಕಟಿಸಿದೆ. ಸ್ಮಾರ್ಟ್ ವ್ಯಾಪಾರ ಹೂಡಿಕೆಗಳು, ಹೊಸ ಉದ್ಯಮಗಳನ್ನು ಪ್ರಾರಂಭಿಸುವುದು ಮತ್ತು ಹೆಚ್ಚಿನ ಆದಾಯ ಬರುವ ಜಾಹೀರಾತುಗಳಲ್ಲಿ ನಟಿಸುವುದರ ಪರಿಣಾಮ ಸಾವಿರಾರು ಕೋಟಿ ಆಸ್ತಿ ಸಂಪಾದಿಸಿದ್ದಾರೆ.
ಎಸ್ಕ್ವೈರ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಹೆಸರುಗಳಲ್ಲಿ, ಒಬ್ಬರು ವಿಶೇಷವಾಗಿ ಎದ್ದು ಕಾಣುತ್ತಾರೆ. ಇದು ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್. ಜಾಗತಿಕ ಶ್ರೇಯಾಂಕದಲ್ಲಿ ಶಾರುಖ್ ಖಾನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿಶ್ವದ ಕೆಲವು ಶ್ರೀಮಂತ ನಟರಲ್ಲಿ ಶಾರುಖ್ ಖಾನ್ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಶಾರುಖ್ ಖಾನ್ ತಮ್ಮ ಬ್ಲಾಕ್‌ಬಸ್ಟರ್ ಚಲನಚಿತ್ರಗಳು, ವ್ಯವಹಾರ, ಉದ್ಯಮಗಳು ಮತ್ತು ಅಂತರರಾಷ್ಟ್ರೀಯ ಆಕರ್ಷಣೆಯಿಂದ ಆಸ್ತಿಯ ವಿಚಾರದಲ್ಲಿ ಅನೇಕ ಹಾಲಿವುಡ್ ನಟರನ್ನು ಮೀರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವದ ಟಾಪ್ 10 ಶ್ರೀಮಂತ ನಟರ ಪಟ್ಟಿಯಲ್ಲಿ, ಶಾರುಖ್ ಖಾನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಅಂದಾಜು $876.5 ಮಿಲಿಯನ್ ಅಂದರೆ 7400 ಕೋಟಿಗೂ ಹೆಚ್ಚು ಆಸ್ತಿಗೆ ಒಡೆಯರಾಗಿದ್ದಾರೆ.
ಶಾರುಖ್ ಖಾನ್ ಭಾರತದಲ್ಲಿ ಜನಪ್ರಿಯರಲ್ಲದೇ, ಪಾಶ್ಚಿಮಾತ್ಯ ಚಿತ್ರರಂಗದಲ್ಲಿ ಬಾಲಿವುಡ್‌ನ ಕಿಂಗ್ ಎಂದೂ ಪರಿಗಣಿಸಲ್ಪಟ್ಟಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ಸಿನಿರಂಗದಲ್ಲಿರುವ ಶಾರುಖ್ ಖಾನ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. 2023 ರಲ್ಲಿ ಜವಾನ್ ಮತ್ತು ಪಠಾಣ್ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 2000 ಕೋಟಿಗೂ ಹೆಚ್ಚು ಗಳಿಕೆ ಮಾಡಿದರು.
ಇದನ್ನೂ ಓದಿ: ಪ್ರಖ್ಯಾತ ಕ್ರಿಕೆಟಿಗನನ್ನು ಮದುವೆಯಾಗಲು ಬಯಸಿದ್ದ ಸ್ಟಾರ್ ನಟಿ! ಆತ ಸಲಿಂಗಕಾಮಿ ಎಂದು ತಿಳಿದಾಗ ಮಾಡಿದ್ದೇನು ಗೊತ್ತೇ?
ತಮ್ಮ ನಟನಾ ವೃತ್ತಿಜೀವನದ ಹೊರತಾಗಿ, ಶಾರುಖ್ ಖಾನ್ ಐಪಿಎಲ್ ಕ್ರಿಕೆಟ್ ತಂಡವನ್ನು ಸಹ ಹೊಂದಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ. ಕೆಲವು ದೊಡ್ಡ ಜಾಹೀರಾತು ಒಪ್ಪಂದಗಳ ಭಾಗವಾಗಿದ್ದಾರೆ.
ವಿಶ್ವದ ಟಾಪ್ 10 ಶ್ರೀಮಂತ ನಟರ ಪಟ್ಟಿಯಲ್ಲಿ ಜೆರ್ರಿ ಸೀನ್‌ಫೆಲ್ಡ್ ವಿಶ್ವದ ಅತ್ಯಂತ ಶ್ರೀಮಂತ ನಟನಾಗಿದ್ದು ಅಗ್ರಸ್ಥಾನದಲ್ಲಿದ್ದಾರೆ. ಈ ಅಮೇರಿಕನ್ ಹಾಸ್ಯನಟ ಮತ್ತು ಟಿವಿ ತಾರೆ ಸುಮಾರು 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಅಮೇರಿಕನ್ ಚಲನಚಿತ್ರೋದ್ಯಮದ ಪ್ರಸಿದ್ಧ ಹಾಸ್ಯನಟ, ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರ ಟೈಲರ್ ಪೆರ್ರಿ ಎರಡನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟು ಸಂಪತ್ತು 1 ಬಿಲಿಯನ್ ಡಾಲರ್‌ಗಳಷ್ಟಿದೆ. ದಿ ರಾಕ್ ಎಂದೇ ಪ್ರಸಿದ್ಧರಾದ ಡ್ವೇನ್ ಜಾನ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ 4ನೇ ಸ್ಥಾನದಲ್ಲಿದ್ದಾರೆ.
ದಿ ರಾಕ್ ನಿವ್ವಳ ಮೌಲ್ಯ ($890 ಮಿಲಿಯನ್). ಟಾಮ್ ಕ್ರೂಸ್ ಅವರ ಹೆಸರು ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಟಾಮ್ ಕ್ರೂಸ್ ನಿವ್ವಳ ಮೌಲ್ಯ ($800 ಮಿಲಿಯನ್) ಹೊಂದಿದ್ದಾರೆ.
ಇದನ್ನೂ ಓದಿ: ಶಾಲಾ ಪಠ್ಯಕ್ರಮದಲ್ಲಿ ದಕ್ಷಿಣ ಭಾರತದ ಇತಿಹಾಸ ಕಡೆಗಣನೆ-ನಟ ಆರ್ ಮಾಧವನ್ ಅಸಮಾಧಾನ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









