VIDEO: ಶಾರುಖ್ ಮಗಳ ಚೊಚ್ಚಲ ಚಿತ್ರ ಬಿಡುಗಡೆ

'ದಿ ಗ್ರೇ ಪಾರ್ಟ್ ಆಫ್ ಬ್ಲೂ' (The Grey Part of Blue) ಕಿರುಚಿತ್ರ ಬಿಡುಗಡೆಯಾಗಿದೆ. ಇದರೊಂದಿಗೆ ಶಾರುಖ್ ಅವರ ಲಾಡೋ ಸುಹಾನಾ ಖಾನ್(Suhana Khan) ನಟನಾ ಜಗತ್ತಿನಲ್ಲಿ ಪ್ರವೇಶಿಸಿದ್ದಾರೆ ...  

Last Updated : Nov 18, 2019, 05:19 PM IST
VIDEO: ಶಾರುಖ್ ಮಗಳ ಚೊಚ್ಚಲ ಚಿತ್ರ ಬಿಡುಗಡೆ title=

ನವದೆಹಲಿ: ಕಳೆದ ಕೆಲವು ದಿನಗಳಿಂದ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರ ನಟನೆಯ ಚೊಚ್ಚಲ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೀಗ ಸುಹಾನಾ ಖಾನ್ ಅಭಿನಯದ ಕಿರುಚಿತ್ರ 'ದಿ ಗ್ರೇ ಪಾರ್ಟ್ ಆಫ್ ಬ್ಲೂ'(The Grey Part of Blue) ಬಿಡುಗಡೆಯಾಗಿದೆ. ಇದರೊಂದಿಗೆ ಶಾರುಖ್ ಅವರ ಲಾಡೋ ಸುಹಾನಾ ಖಾನ್(Suhana Khan) ನಟನಾ ಜಗತ್ತಿನಲ್ಲಿ ಪದಾರ್ಪಣೆ ಮಾಡಿದ್ದಾರೆ.

ಈ ಹತ್ತು ನಿಮಿಷಗಳ ಕಿರುಚಿತ್ರದಲ್ಲಿ ಸುಹಾನಾ ನಟನೆಯನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲ, ನಟನೆಯ ಜೊತೆಗೆ, ಕ್ಯಾಮೆರಾ ಮುಂದೆ ಸುಹಾನಾ ಬಹಳ ತಮ್ಮ ಅಭಿನಯದ  ನೈಪುಣ್ಯತೆ ತೋರಿರುವುದು ವಿಶೇಷ. ಈ ಚಿತ್ರವು ಯುವ ದಂಪತಿಗಳನ್ನು ಆಧರಿಸಿದೆ. ಇದು ಅವರ ಸಂಬಂಧವನ್ನು ನಿಕಟವಾಗಿ ತೋರಿಸಲು ಪ್ರಯತ್ನಿಸುತ್ತದೆ. ಈ ಕಿರು ಚಿತ್ರವನ್ನು ವೀಕ್ಷಿಸಿ.... 

ಚಿತ್ರ ಇಂಗ್ಲಿಷ್ ಭಾಷೆಯಲ್ಲಿದೆ, 'ದಿ ಗ್ರೇ ಪಾರ್ಟ್ ಆಫ್ ಬ್ಲೂ' ಕಿರುಚಿತ್ರವನ್ನು ಥಿಯೋಡರ್ ಗಿಮೆನೊ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುಹಾನಾ ಎದುರು ರಾಬಿನ್ ಗೊನೆಲ್ಲಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿನಯ ಜಗತ್ತಿನಲ್ಲಿಯೇ ಸುಹಾನಾ ತಮ್ಮ ವೃತ್ತಿಜೀವನವನ್ನು ಮುಂದುವರೆಸಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದ್ದರಿಂದ ಅವರು ತಮ್ಮ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಲು ಈ ದಿನಗಳಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಹೊಂದುವ ನಿರೀಕ್ಷೆಯಿದೆ.

Trending News