)
Sharukh Son Aryan khan case: ನಿನ್ನೆಯಿಂದ್ಲೂ ಕೂಡ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮಗ ಸುದ್ದಿಯಲ್ಲಿದ್ದಾನೆ. ಕಳೆದ 28ರಂದು ಶಾಂತಿನಗರದ ಪಬ್ ವೊಂದರಲ್ಲಿ ಬಾಲ್ಕನಿ ಮೇಲೆ ನಿಂತು ಮಧ್ಯದ ಬೆರಳು ತೋರಿಸಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮಾಹಿತಿ ಅನ್ವಯ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ. ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆ ಶುರುವಾಗಿದ್ದು ಆರ್ಯನ್ ಖಾನ್ ಯಾವ ಉದ್ದೇಶದಿಂದ ಆ ವರ್ತನೆ ತೋರಿದ್ದು, ಪುರುಷನಿಗಾ..? ಮಹಿಳೆಗಾ ಅನ್ನೋದ್ರ ಬಗ್ಗೆ ತನಿಖೆ ನಡೀತಿದೆ.
ನಿನ್ನೆ ರಾತ್ರಿ ಪಬ್ ನ ಮ್ಯಾನೇಜರ್ ಸೇರಿ ಒಟ್ಟು ಮೂರು ಜನರ ಹೇಳಿಕೆ ಪಡೆದಿರೋ ಪೊಲೀಸ್ರು ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕ್ತಿದ್ದಾರೆ. ಈ ವೇಳೆ ಶಾರುಖ್ ಮಗ ತನ್ನ ಬ್ಯಾಡ್ಸ್ ಆಫ್ ಬಾಲಿವುಡ್ ಸಿನಿಮಾದ ಸ್ಟೈಲ್ ನಲ್ಲಿ ಆ ರೀತಿ ತೋರಿಸಿದ್ದು ಅಂತಾ ಸಮರ್ಥನೆ ಮಾಡ್ಕೊಂಡಿದ್ದಾರಂತೆ.ಇನ್ನು ವಿಡಿಯೋದಲ್ಲಿ ಇರೋರ ಬಗ್ಗೆ ಕೂಡ ಮಾಹಿತಿ ಕಲೆ ಹಾಕಿ ತನಿಖೆ ಮುಂದುವರೆಸಿರುವ ಪೊಲೀಸ್ರು, ಪಬ್ ನ ಸಿಸಿಟಿವಿ ಚೆಕ್ ಮಾಡಿದ್ದಾರೆ.ಈ ವೇಳೆ ಪಬ್ ನಲ್ಲಿ ಕಾರ್ಯಕ್ರಮದ ದಿನ ಟೆಕ್ನಿಷಿಯನ್ ಆಗಿ ಕೆಲಸ ಮಾಡ್ತಿದ್ದ ಸಾತ್ವಿಕ್ ಎಂಬ ಯುವಕನಿಗೆ ಶಾರುಖ್ ಮಗ ಮಧ್ಯದ ಬೆರಳು ತೋರಿಸಿದ್ದು ಅನ್ನೋ ಮಾಹಿತಿ ಗೊತ್ತಾಗಿತ್ತು. ಈ ಬಗ್ಗೆ ಸಾತ್ವಿಕ್ ನನ್ನೂ ವಿಚಾರಣೆ ನಡೆಸಿದ್ದು ಆತ ದ್ವಂದ್ವ ಹೇಳಿಕೆ ನೀಡಿದ್ದಾನಂತೆ. ಇನ್ನು ತನಿಖೆ ವೇಳೆ ಅವತ್ತಿನ ದಿನ ಪಬ್ ನಲ್ಲಿ ಎರಡು ಗಲಾಟೆಗಳು ನಡೆದಿದ್ವಂತೆ. ಆ ಗಲಾಟೆಗಳ ಬಗ್ಗೆಯೂ ಪೊಲೀಸ್ರು ಮಾಹಿತಿ ಕಲೆ ಹಾಕ್ತಿದ್ದು ಅದಕ್ಕೂ ಶಾರುಖ್ ಮಗನ ವರ್ತನೆಗೂ ಲಿಂಕ್ ಇದ್ಯಾ ಅನ್ನೋ ಬಗ್ಗೆ ತೀವ್ರ ತನಿಖೆ ನಡೀತಿದೆ.
ಇನ್ನು ಆರ್ಯನ್ ಖಾನ್ ವಿಡಿಯೋ ಬಗ್ಗೆ ನಗರ ಪೊಲೀಸ್ ಆಯುಕ್ತರಾದ ಸಿಮಾಂತ್ ಕುಮಾರ್ ಸಿಂಗ್ ಹಾಗೂ ಡಿಜಿಐಜಿಪಿ ಡಾ. ಸಲೀಂರಿಗೂ ದೂರು ತಲುಪಿದೆ. ಜವಾಬ್ದಾರಿತವಾಗಿರೋದು ಬಿಟ್ಟು ಸಾರ್ವಜನಿಕವಾಗಿ ಈ ರೀತಿ ವರ್ತನೆ ತಪ್ಪು. ಇದ್ರಿಂದ ಮಹಿಳಿಯರಿಗೆ ಮುಜುಗರ ಉಂಟಾಗಿದೆ, ಪಕ್ಕದಲ್ಲಿ ಶಾಸಕ ಹ್ಯಾರಿಸ್ ಮಗ ನಲಪಾಡ್ ಹಾಗೂ ಸಚಿವ ಜಮೀರ್ ಮಗ ಜೈದ್ ಖಾನ್ ಕೂಡ ಇದ್ರು. ಆದ್ರೆ ಅವರು ನಗುನಗುತ್ತಲೇ ಇದ್ರು ಸದ್ಯ ಈ ಬಗ್ಗೆ ಪೊಲೀಸ್ರನ್ನ ಸರಿಯಾಗಿ ತನಿಖೆ ಮಾಡಲು ಸೂಚಿಸಿ ಅಂತಾ ಇಬ್ಬರು ದೂರು ನೀಡಿದ್ದಾರೆ. ಇ ಮೇಲ್ ಮೂಲಕ ತೇಜಸ್ ಗೌಡ ದೂರು ನೀಡಿದ್ರೆ, ವಕೀಲ ಹುಸೇನ್ ಎಂಬುವರು ನೇರವಾಗಿ ಕಮಿಷನರ್ ಕಚೇರಿಗೆ ಹೋಗಿ ಲಿಖಿತ ದೂರು ದಾಖಲಿಸಿದ್ದಾರೆ.
ಸದ್ಯಕ್ಕಂತೂ ಆರ್ಯನ್ ಖಾನ್ ವರ್ತನೆಯ ವಿಚಾರದ ಬಗ್ಗೆ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗ್ತಿದೆ. ಪಬ್ ಮಾಲೀಕರಿಗೂ ನೊಟೀಸ್ ಕೊಟ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಸಿಸಿಟಿವಿಯನ್ನ ಚೆಕ್ ಮಾಡಿದ್ದು ಗಲಾಟೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಒಂದು ವೇಳೆ ಅಲ್ಲಿ ಗಲಾಟೆ ರೀತಿ ಹಾಗೂ ಆರ್ಯನ್ ಖಾನ್ ಉದ್ದೇಶಪೂರ್ವಕವಾಗಿಯೇ ವರ್ತನೆ ಮಾಡಿದ್ದು ನಿಜ ಆಗಿದ್ರೆ ಆತನನ್ನ ಪೊಲೀಸ್ ಠಾಣೆಗೆ ಕರೆಸೋದಂತೂ ಸತ್ಯ.