ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್‌ ಆದ ಶಿವಣ್ಣ! ಹೇಗಿದೆ ಗೊತ್ತಾ ʼಫೈರ್‌ ಫ್ಲೈʼ ಟ್ರೇಲರ್?

ʼಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಕಥೆ ಕೇಳಿದೆ, ವಿಭಿನ್ನವಾಗಿತ್ತು. ಕೇಳಿದ ತಕ್ಷಣ ಹೃದಯಕ್ಕೆ ಸೇರಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಬರೀ ಫೈಟ್‌, ಡ್ಯುಯೇಟ್‌ ಸಾಂಗ್‌ ಮಾಡಬಹುದು. ಆದರೆ ʼಫೈರ್‌ ಫ್ಲೈʼ ವ್ಯಾಲ್ಯೂ ಸಬ್ಜೆಕ್ಟ್ ಇರುವ ಚಿತ್ರʼವೆಂದು ನಟ ಶಿವರಾಜಕುಮಾರ್‌ ಹೇಳಿದರು.

Written by - Puttaraj K Alur | Last Updated : Apr 14, 2025, 10:21 PM IST
  • ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಟ್ರೇಲರ್ ರಿಲೀಸ್
  • ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್‌ ಆದ ಶಿವಣ್ಣ
  • ಅಣ್ಣಾವ್ರ ಜನ್ಮದಿನ ಅಂದ್ರೆ ಇದೇ ತಿಂಗಳ 24ಕ್ಕೆ ಸಿನಿಮಾ ತೆರೆಗೆ
ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್‌ ಆದ ಶಿವಣ್ಣ! ಹೇಗಿದೆ ಗೊತ್ತಾ ʼಫೈರ್‌ ಫ್ಲೈʼ ಟ್ರೇಲರ್?

Firefly Official Trailer: ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಸಿನಿಮಾ ಟೀಸರ್‌ ಹಾಗೂ ಹಾಡುಗಳ ಮೂಲಕ ಈಗಾಗಲೇ ಇಂಡಸ್ಟ್ರೀಯಲ್ಲಿ ಬಜ್‌ ಕ್ರಿಯೇಟ್‌ ಮಾಡಿದೆ. ಅಣ್ಣಾವ್ರ ಜನ್ಮದಿನ ಅಂದ್ರೆ ಇದೇ ತಿಂಗಳ 24ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರ ಭಾಗವಾಗಿ ಭಾನುವಾರ ಶಿವಣ್ಣನ ನಿವಾಸದಲ್ಲಿ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ʼಫೈರ್‌ ಫ್ಲೈʼನ ಇಡೀ ತಂಡ ಹಾಗೂ ಶಿವಣ್ಣ ದಂಪತಿ ಭಾಗಿಯಾಗಿ ಹೊಸ ಪ್ರತಿಭೆಗಳ ಕನಸಿಗೆ ಬೆನ್ನು ತಟ್ಟಿದ್ದರು.

Add Zee News as a Preferred Source

ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿ ಶಿವಣ್ಣ, ʼಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಕಥೆ ಕೇಳಿದೆ, ವಿಭಿನ್ನವಾಗಿತ್ತು. ಕೇಳಿದ ತಕ್ಷಣ ಹೃದಯಕ್ಕೆ ಸೇರಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಬರೀ ಫೈಟ್‌, ಡ್ಯುಯೇಟ್‌ ಸಾಂಗ್‌ ಮಾಡಬಹುದು. ಆದರೆ ʼಫೈರ್‌ ಫ್ಲೈʼ ವ್ಯಾಲ್ಯೂ ಸಬ್ಜೆಕ್ಟ್ ಇರುವ ಚಿತ್ರ. ವಂಶಿ ಒಳ್ಳೆ ಕಥೆ ಮಾಡಿದ್ದಾರೆ. ಒಳ್ಳೆ ತಂಡ ಚಿತ್ರಕ್ಕೆ ಕೆಲಸ ಮಾಡಿದೆ. ಚರಣ್ ರಾಜ್‌ ಸಂಗೀತ ಬಗ್ಗೆ ಮಾತನಾಡುವಂತಿಲ್ಲ. ನಮ್ಮ ಕನ್ನಡದಲ್ಲಿಯೂ ಹೊಸ ತಂಡ ಬರಬೇಕು, ಹೊಸ ಅಲೆ ಬರಬೇಕು ಎಂಬ ಉದ್ದೇಶವೇ ನನ್ನ ಆಸೆ. ಅವರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಕರೆದುಕೊಂಡು ಹೋಗಬೇಕು. ಸಿನಿಮಾ ಹೇಗೆ ಹೋಗುತ್ತದೆ, ಬಿಡುತ್ತದೆ ಅದು ಎರಡನೇಯದ್ದು. ಆದರೆ ನಮ್ಮ ಪ್ರಯತ್ನ ಇರಬೇಕು. ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಹೊಸ ಹುಡುಗರು ನಮ್ಮನ್ನು ಇನ್ನಷ್ಟು ಯಂಗ್‌ ಆಗಿ ತೋರಿಸಿದ್ದಾರೆʼ ಎಂದು ಖುಷಿ ಹಂಚಿಕೊಂಡರು.

ಇದನ್ನೂ ಓದಿ: ಶಿವಕಾರ್ತಿಕೇಯನ್-ಎ ಆರ್ ಮುರುಗದಾಸ್ ಜೋಡಿಯ ಮದರಾಸಿ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್‌

ಗೀತಾ ಶಿವರಾಜ್‌ ಕುಮಾರ್‌ ಮಾತನಾಡಿ, ʼಹೊಸ ತಂಡ ಹೊಸ ಪ್ರಯತ್ನ ಮಾಡಿದೆ. ಎಲ್ಲರೂ ಇದಕ್ಕೆ ಪ್ರೋತ್ಸಾಹ ಕೊಡಬೇಕು. ಈ ಚಿತ್ರವನ್ನು ಕುಮಾರ್‌ ಅವರು ಡಿಸ್ಟ್ರೀಬ್ಯೂಟ್‌ ಮಾಡುತ್ತಿದ್ದಾರೆ. ಅದಕ್ಕೆ ಅವರಿಗೆ ತುಂಬಾ ಧನ್ಯವಾದ. ವಂಶಿ ಹೇಳಿದ ಕಥೆ ಕೇಳಿ ನಿವೇದಿತಾ ಮತ್ತು ಅವರ ತಂದೆಗೆ ಇಷ್ಟವಾಯ್ತು. ಅದು ಈಗ ಇಲ್ಲಿವರೆಗೂ ಬಂದು ನಿಂತಿದೆʼ ಎಂದರು. 

ನಿರ್ಮಾಪಕಿ ನಿವೇದಿತಾ ಶಿವರಾಜಕುಮಾರ್‌ ಮಾತನಾಡಿ, ʼಇದು ನನ್ನ ಮೊದಲ ಸಿನಿಮಾ. ತಾತನ ಹುಟ್ಟುಹಬ್ಬದ ದಿನ ಬರುತ್ತಿರುವುದು ಬಹಳ ಖುಷಿ ಇದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲವೆಂದು ಎಲ್ಲರೂ ಕೇಳುತ್ತಾರೆ. ನಾವು ಒಳ್ಳೆ ಸಿನಿಮಾ ಕೊಟ್ಟರೆ ಖಂಡಿತ ಬರುತ್ತಾರೆ. ಏಪ್ರಿಲ್ 24ರಂದು ನಮ್ಮ ಸಿನಿಮಾ ರಿಲೀಸ್‌ ಆಗುತ್ತಿದೆ. ಎಲ್ಲರೂ ಥಿಯೇಟರ್‌ನಲ್ಲಿಯೇ ʼಫೈರ್‌ ಫ್ಲೈʼ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: 23ನೇ ವಯಸ್ಸಿಗೆ ʼಅದನ್ನʼ ಮಾಡಿ, ಮದುವೆಗೂ ಮುನ್ನವೇ ತಾಯಿಯಾದೆ! ಖ್ಯಾತ ನಟಿಯ ಓಪನ್‌ ಕಾಮೆಂಟ್..

ತಾರಾಬಳಗದ ಮೂಲಕ ಗಮನ ಸೆಳೆದಿರುವ ʼಫೈರ್‌ ಫ್ಲೈʼ ಸಿನಿಮಾದಲ್ಲಿ  ವಂಶಿ ನಟಿಸಿ, ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಪ್ರಯತ್ನ. ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ. ಜಯ್ ರಾಮ್ ಚಿತ್ರದ ಸಹ-ನಿರ್ದೇಶಕ. ಅಭಿಲಾಷ್ ಕಳತ್ತಿ ಅವರ ಕ್ಯಾಮೆರಾ ವರ್ಕ್, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಚಿತ್ರಕ್ಕಿದೆ.

ಒಂದೊಳ್ಳೆ ಕಾಡುವ ಕಥೆಯೊಂದಿಗೆ ʼಫೈರ್‌ ಫ್ಲೈʼ ಸಿನಿಮಾ ಇದೇ ಏಪ್ರಿಲ್‌ 24ಕ್ಕೆ ತೆರೆಗೆ ಬರ್ತಿದೆ. ವಿಶೇಷ ಎಂದರೆ ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಆದರೆ, ಕಿಂಗ್ಸ್ ಅನ್ನೋದು ಇಲ್ಲಿ ಶಿವಣ್ಣನಿಗೆ ಸೂಟೇಬಲ್ ಆಗಿದೆ. ಶಿವಣ್ಣ ಕಿಂಗ್ ಅಲ್ವೇ? ಅದಕ್ಕೇನೆ ಈ ಹೆಸರು ಇಟ್ಟಂತಿದೆ. ಆದರೆ ಶಿವಣ್ಣ ಇಂತಹ ರೋಲ್ ಯಾಕೆ ಮಾಡಿದ್ರು ಅನ್ನೋದನ್ನು ನೀವು ಥಿಯೇಟರ್‌ನಲ್ಲಿಯೇ ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News