ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಜಸ್ಟ್‌ ಪಾರಾದ ನಟ-ನಟಿಯ ಪೋಸ್ಟ್‌ ವೈರಲ್‌..! ನೆಟ್ಟಿಗರಿಂದ ಆಕ್ರೋಶ..

Pahalgam Attack : ಪಹಲ್ಗಾಮ್‌ನಲ್ಲಿ ನಿನ್ನೆ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ... ಈ ಭಯೋತ್ಪಾದಕ ದಾಳಿಗೆ ಕೆಲವು ಗಂಟೆಗಳ ಮೊದಲು, ಟಿವಿ ಸೆಲೆಬ್ರಿಟಿ ದಂಪತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಕುರಿತು ಪೋಸ್ಟ್‌ ಹಾಕಿದ ಜೋಡಿಯ ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ.

Written by - Krishna N K | Last Updated : Apr 23, 2025, 02:24 PM IST
    • ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಕ್ರೂರವಾಗಿ ಹಲ್ಲೆ
    • ಘಟನೆಯಲ್ಲಿ 30 ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯ
    • ಸೆಲೆಬ್ರಿಟಿ ದಂಪತಿ ದೀಪಿಕಾ ಕಾಕರ್ ಮತ್ತು ಶೋಯೆಬ್ ಇಬ್ರಾಹಿಂ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಜಸ್ಟ್‌ ಪಾರಾದ ನಟ-ನಟಿಯ ಪೋಸ್ಟ್‌ ವೈರಲ್‌..! ನೆಟ್ಟಿಗರಿಂದ ಆಕ್ರೋಶ..

Pahalgam Terror Attack : ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ.. ಘಟನೆಯಲ್ಲಿ 30 ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದೇಶದ ಜನರು ಈ ಭೀಕರ ಮಾರಣಹೋಮವನ್ನು ಖಂಡಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. 

Add Zee News as a Preferred Source

ನಿರ್ದಿಷ್ಟವಾಗಿ ಹಿಂದೂಗಳನ್ನು ಕೇಂದ್ರೀಕರಿಸಿ ನಡೆಸಲಾದ ಭಯೋತ್ಪಾದಕ ದಾಳಿ ಇದು ಎಂಬುದು ಸ್ಪಷ್ಟವಾಗಿದೆ. ಇನ್ನು, ಈ ಘಟನೆಗೆ ಕೆಲವು ಗಂಟೆಗಳ ಮೊದಲು, ಸೆಲೆಬ್ರಿಟಿ ದಂಪತಿಗಳು ಪಹಲ್ಗಾಮ್ ತೊರೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಇದನ್ನೂ ಓದಿ:"2025 ಅಂತ್ಯದೊಳಗೆ ಕೊನೆಗೊಳ್ಳಲಿದೆ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ಸಂಬಂಧ"?! ಇಂಡಸ್ಟ್ರಿಯನ್ನು ಶೇಕ್‌ ಮಡುತ್ತಿದೆ ಖ್ಯಾತ ಜ್ಯೋತಿಷಿಯ ಶಾಕಿಂಗ್‌ ಕಾಮೆಂಟ್ಸ್‌

ಟೆಲಿವಿಷನ್ ಸೆಲೆಬ್ರಿಟಿ ದಂಪತಿ ದೀಪಿಕಾ ಕಾಕರ್ ಮತ್ತು ಶೋಯೆಬ್ ಇಬ್ರಾಹಿಂ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಈ ಜೋಡಿ ಕಾಶ್ಮೀರ ಪ್ರವಾಸಕ್ಕೆ ಹೋಗಿತ್ತು.. ಭಯೋತ್ಪಾದಕ ದಾಳಿಯ ಸಮಯದಲ್ಲಿ ಅವರು ಅಲ್ಲೇ ಇದ್ದರು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Dipika (@ms.dipika)

ಘಟನೆಯ ನಂತರ, ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ನಾವಿಬ್ಬರೂ ಸುರಕ್ಷಿತರಾಗಿದ್ದೇವೆ.. ಅಭಿಮಾನಿಗಳು ಚಿಂತಿಸಬೇಡಿ" ಎಂದು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಾಶ್ಮೀರ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶೋಯೆಬ್ ಇಬ್ರಾಹಿಂ ಕಾಶ್ಮೀರದ ಸುಂದರ ಸ್ಥಳಗಳ ವ್ಲಾಗ್ ಸಹ ಮಾಡಿದ್ದಾರೆ, ಇದು ನೆಟ್ಟಿಗರು ಮತ್ತು ಅಭಿಮಾನಿಗಳನ್ನು ಕೆರಳಿಸುತ್ತಿದೆ. 

ಇದನ್ನೂ ಓದಿ:ಮದುವೆ ವದಂತಿ ಬೆನ್ನಲ್ಲೇ ಹೊರಬಿತ್ತು ನಟಿ ತ್ರಿಷಾ ಸೀಕ್ರೆಟ್‌ ರಿಲೇಷನ್‌ಶಿಫ್‌! ಸೌತ್‌ ಬ್ಯೂಟಿ ಲವ್‌ ಮ್ಯಾಟರ್‌ ಕೊನೆಗೂ ಲೀಕ್..

ನಮ್ಮ ಅನೇಕ ಜನರು ಅಲ್ಲಿ ಸತ್ತರೆ... ಕನಿಷ್ಠ ಅವರ ಬಗ್ಗೆ ಸಹಾನುಭೂತಿ ಅಥವಾ ಸಂತಾಪ ವ್ಯಕ್ತಪಡಿಸುವ ಒಂದೇ ಒಂದು ಪೋಸ್ಟ್ ಕೂಡ ಇಲ್ಲ... ಅಂತ ನೆಟಿಜನ್‌ಗಳು ಕೋಪಗೊಳ್ಳುತ್ತಿದ್ದಾರೆ. ಇದರಿಂದ ನೆಟ್ಟಿಗರು ಆಕ್ರೋಶಗೊಂಡು, ಸೆಲೆಬ್ರಿಟಿ ಜೋಡಿಗಳಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಯಾವ ಸಮಯದಲ್ಲಿ ಹೇಗೆ ವರ್ತಿಸಬೇಕು ಎಂಬುದರ ನಿಮಗೆ ಗೊತ್ತಿಲ್ಲ.. ಅಂತ ಬುದ್ದಿ ಹೇಳುತ್ತಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News