)
Shraddha Kapoor : ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಶ್ರದ್ಧಾ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ. ನಟಿ ತಮ್ಮ ವೈಯಕ್ತಿಕ ಜೀವನದ ವಿಷಯದಲ್ಲೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ, ತಮ್ಮ ಗೆಳೆಯ ರಾಹುಲ್ ಮೋದಿ ಜೊತೆಗಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಒಟ್ಟಿಗೆ ಸಿನಿಮಾ ಡೇಟ್ಗೆ ಹೋಗಿದ್ದರು. ಅಲ್ಲಿಂದ ಹೊರಬರುವಾಗ, ಶ್ರದ್ಧಾ ಮೊದಲು ತನ್ನ ಗೆಳೆಯ ರಾಹುಲ್ನ ಕೆನ್ನೆಯನ್ನು ಪ್ರೀತಿಯಿಂದ ಮುಟ್ಟಿದ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ನಂತರ ಇಬ್ಬರೂ ಕಾರಿನ ಬಳಿ ಬರುತ್ತಾರೆ, ಅಲ್ಲಿ ರಾಹುಲ್ ಶ್ರದ್ಧಾಳ ಕುತ್ತಿಗೆಯನ್ನು ಹಿಡಿದು ಕಾರಿನಲ್ಲಿ ಕುಳಿತುಕೊಳ್ಳಲು ಪ್ರೀತಿಯಿಂದ ಕೇಳುತ್ತಾನೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದೆ.
ಪ್ರಸ್ತುತ, ರಾಹುಲ್ ಮತ್ತು ಶ್ರದ್ಧಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಕೆಲವು ಬಳಕೆದಾರರು ರಾಹುಲ್ ಅವರನ್ನು ಟೀಕಿಸಿದ್ದಾರೆ. ಅವರು ಶ್ರದ್ಧಾ ಅವರನ್ನು ಕಾರಿನಲ್ಲಿ ಕೂರಿಸಿದ ರೀತಿ ಸರಿಯಿಲ್ಲ ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು, ಅವರ ಅವರ ಪರವಾಗಿ ಕಾಮೆಂಟ್ ಹಾಕಿದ್ದು, ಪ್ರೀತಿಯಿಂದ ಹಾಗೆ ಮಾಡಿದ್ದಾರೆ ಅಂತ ಸಮರ್ಥಿಸಿಕೊಂಡಿದ್ದಾರೆ.
ಕೆಲಸದ ಬಗ್ಗೆ ಹೇಳುವುದಾದರೆ, ಶ್ರದ್ಧಾ ಕಪೂರ್ ಕೊನೆಯ ಬಾರಿಗೆ 'ಸ್ತ್ರೀ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ವಿಶ್ವಾದ್ಯಂತ 857 ಕೋಟಿ ರೂ. ಗಳಿಸಿ ಬ್ಲಾಕ್ಬಸ್ಟರ್ ಆಯಿತು. ಇದರ ನಂತರ, ಅವರು ನಿಖಿಲ್ ದ್ವಿವೇದಿ ಅವರ 'ನಾಗಿನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.