Shreyas Iyer: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಐಪಿಎಲ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ. ಪಂಜಾಬ್ ಕಿಂಗ್ಸ್ ಅವರನ್ನು 26.75 ಕೋಟಿ ರೂ.ಗೆ ತಮ್ಮ ತಂಡಕ್ಕಾಗಿ ಒಪ್ಪಂದ ಮಾಡಿಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡ ವರೆಗೂ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಈ ಮಧ್ಯೆ, ಶ್ರೇಯಸ್ ಅಯ್ಯರ್ ಒಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಕಣ್ಣೀರು ಹಾಕಿದ್ದೆ ಎಂದು ಅಯ್ಯರ್ ಹೇಳಿದ್ದಾರೆ, ಯೂಟ್ಯೂಬ್ ಚಾನೆಲ್‌ನ ಒಂದು ಸಂದರ್ಶನಕ್ಕಾಗಿ ನಟಿ ಸಾಹಿಬಾ ಬಾಲಿ ಕೇಳಿದ ಪ್ರಶ್ನೆಗೆ ಶ್ರೇಯಸ್ ಅಯ್ಯರ್ ಚಾಂಪಿಯನ್ಸ್ ಟ್ರೋಫಿ ಸಮಸಯದಲ್ಲಿ ತಾವು ಕಣ್ಣೀರಾಕಿದ್ದ ಕಥೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ipl ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ನಾಯಕ !22 ನೇ ವಯಸ್ಸಿನಲ್ಲಿ ನಾಯಕತ್ವದ ಜವಾಬ್ದಾರಿ ಹೊತ್ತ ಆಟಗಾರ !RCBಯ ದಿಗ್ಗಜ್ಜ ಈತ
'ನಾನು ಕೊನೆಯ ಬಾರಿಗೆ ಅತ್ತಿದ್ದು ಚಾಂಪಿಯನ್ಸ್ ಟ್ರೋಫಿ ತರಬೇತಿ ಶಿಬಿರದ ಸಮಯದಲ್ಲಿ.' ನೆಟ್ಸ್‌ನಲ್ಲಿ ನಾನು ಬಯಸಿದಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಆಗ ನನಗೆ ನನ್ನ ಮೇಲೆ ತುಂಬಾ ಕೋಪ ಬಂದು ಕಣ್ಣೀರು ಸುರಿಸಿದ್ದೆ. ನನಗೆ ಆಘಾತವಾಯಿತು, ಆದರೆ ನಾನು ಎಂದಿಗೂ ಅಷ್ಟು ಸುಲಭವಾಗಿ ಅಳುವುದಿಲ್ಲ. 'ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದೆ' ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.ಆದರೆ ದುಬೈನ ಪಿಚ್ ವಿಭಿನ್ನವಾಗಿತ್ತು ಮತ್ತು ಮೊದಲ ದಿನದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿತ್ತು. ಮೊದಲ ದಿನದ ಅಭ್ಯಾಸ ಮುಗಿದಾಗ, ನಾನು ಇನ್ನಷ್ಟು ಅಭ್ಯಾಸ ಮಾಡಲು ಬಯಸಿದ್ದೆ. ಆಗ ನನಗೆ ಅವಕಾಶ ಸಿಗಲಿಲ್ಲ ಇದರ ಕಾರಣದಿಂದ ನನಗೆ ಸಾಕಷ್ಟು ಕೋಪ ಬಂದಿತ್ತು.
ಶ್ರೇಯಸ್ ಅಯ್ಯರ್ ಅಭ್ಯಾಸದ ಸಮಯದಲ್ಲಿ ಅಳುತ್ತಿದ್ದರು ಎಂಬುದು ನಿಜವಾದರೂ, ಪಂದ್ಯಾವಳಿಯ ಸಮಯದಲ್ಲಿ ಅವರು ಎದುರಾಳಿ ಬೌಲರ್‌ಗಳ ಕಣ್ಣಲ್ಲಿ ನೀರು ತರಿಸಿದ್ದರು, ಅಯ್ಯರ್ ತಮ್ಮ ಆಕ್ರಮಣಕಾರಿ ಇನ್ನಿಂಗ್ಸ್‌ನಿಂದ ಐದು ಪಂದ್ಯಗಳಲ್ಲಿ 243 ರನ್ ಗಳಿಸಿದರು. ಅವರು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಅರ್ಧಶತಕಗಳನ್ನು ಗಳಿಸಿದರು. ಅಂತಿಮ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ 48 ರನ್ ಗಳಿಸಿದರು. ಅಯ್ಯರ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ. ಈಗ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರಶಸ್ತಿಯ ಕಡೆಗೆ ಕೊಂಡುಯ್ಯುವುದು ಅವರ ಸದ್ಯದ ಅವರ ಕನಸಾಗಿದೆ.
ಇದನ್ನೂ ಓದಿ: ಮದುವೆಗೂ ಮುನ್ನ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! ಏನದು ಗೊತ್ತಾ?
Sarpanch Saab's passion for the game... ???
Watch the full heartfelt conversation between Shreyas Iyer and Sahiba Bali on our YT channel and Punjab Kings App. ? pic.twitter.com/t1PBDtCY6M
— Punjab Kings (@PunjabKingsIPL) April 7, 2025
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









