)
Chooli Shruti Haasan : ನಟಿ ಶ್ರುತಿ ಹಾಸನ್ ತನ್ನ ಸ್ನೇಹಿತರೊಂದಿಗೆ ಸಿನಿಮಾ ನೋಡಲು ಥಿಯೇಟರ್ಗೆ ಬಂದಿದ್ದರು. ಥಿಯೇಟರ್ಗೆ ಬಂದ ಸಂದರ್ಭ ಸೆಕ್ಯುರಿಟಿ ಗಾರ್ಡ್ ನಟಿಯನ್ನು ತಡೆದಿದ್ದಾರೆ. ಜನಸಂದಣಿಯಿಂದಾಗಿ, ಸೆಕ್ಯುರಿಟಿ ಗಾರ್ಡ್ ಶ್ರುತಿಯವರು ಬಂದ ಕಾರನ್ನು ನಿಲ್ಲಿಸಿದ್ದಾರೆ. ಇದಕ್ಕೆ ಶ್ರುತಿಯ ಪ್ರತಿಕ್ರಿಯೆ ತುಂಬಾ ಕಾಮಿಡಿಯಾಗಿತ್ತು.
ಹೌದು.. ಕೂಲಿ ಸಿನಿಮಾ ಬಿಡುಗಡೆಯಾದಾಗಿನಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ರಜನಿಕಾಂತ್, ಉಪೇಂದ್ರ, ನಾಗಾರ್ಜುನ, ಆಮೀರ್ ಖಾರ್ ಸೇರಿದಂತೆ ಹಲವಾರು ಸ್ಟಾರ್ ಹೀರೋಗಳು ಈ ಚಿತ್ರದಲ್ಲಿದ್ದಾರೆ. ಇನ್ನು ಇತ್ತೀಚಿಗೆ ತಮ್ಮದೇ ಸಿನಿಮಾ ನೋಡಲು ಥಿಯೇಟರ್ಗೆ ಹೋದ ನಟಿ ಶೃತಿಯನ್ನು ಸೆಕ್ಯೂರಿಟಿ ತಡೆದಿದ್ದಾರೆ.. ಈ ವೇಳೆ ತುಂಬಾ ತಮಾಷೆಯಾಗಿ ನಟಿ ಪ್ರತಿಕ್ರಿಯೆ ನಿಡಿದ್ದಾರೆ.
ಕಾರಿನಲ್ಲಿ ಬಂದ ಶೃತಿಯನ್ನು ತಡೆದ ಸಿಬ್ಬಂದಿ ನೋಡಿ.. "ಬ್ರೋ, ನಾನು ಈ ಸಿನಿಮಾದಲ್ಲಿದ್ದೇನೆ, ದಯವಿಟ್ಟು ನನಗೆ ಅವಕಾಶ ಕೊಡಿ ಅಣ್ಣಾ, ನಾನು ಈ ಸಿನಿಮಾದ ನಟಿ," ಅಂತ ಸೆಕ್ಯುರಿಟಿಗೆ ಶ್ರುತಿ ತುಂಬಾ ಕ್ಯೂಟ್ ಆಗಿ ಮನವಿ ಮಾಡಿದ್ದಾರೆ. ಆಗ ಜೊತೆಯಲ್ಲಿದ್ದ ಸ್ನೇಹಿತರು ಕೂಡ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
'ಕೂಲಿ' ಸಿನಿಮಾ ರಜನಿಕಾಂತ್ ಅವರ 175 ನೇ ಸಿನಿಮಾವಾಗಿದೆ. ಚಿತ್ರದಲ್ಲಿ ನಾಯಕಿ ನಟಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ನಾಗಾರ್ಜುನ ಅಕ್ಕಿನೇನಿ, ಉಪೇಂದ್ರ, ಸೌಬಿನ್ ಶಾಹಿರ್, ಅಮೀರ್ ಖಾನ್, ರಚಿತಾ ರಾಮ್, ಸತ್ಯರಾಜ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಅನಿರುದ್ಧ್ ಸಂಗೀತ ನೀಡಿದ್ದಾರೆ.