ರಸ್ತೆ ಅಪಘಾತದಲ್ಲಿ ಬಾಲಿವುಡ್ ಹಿನ್ನಲೆ ಗಾಯಕ ನಿತೀನ್ 'ಬಲಿ'

 ಬಾಲಿವುಡ್ ನ ಜನಪ್ರಿಯ ಗಾಯಕ ನಿತಿನ್ ಬಲಿ ಅವರು ಮಂಗಳವಾರದಂದು  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಅವರಿಗೆ 47 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. 

Last Updated : Oct 9, 2018, 07:41 PM IST
ರಸ್ತೆ ಅಪಘಾತದಲ್ಲಿ ಬಾಲಿವುಡ್ ಹಿನ್ನಲೆ ಗಾಯಕ ನಿತೀನ್ 'ಬಲಿ' title=

ನವದೆಹಲಿ: ಬಾಲಿವುಡ್ ನ ಜನಪ್ರಿಯ ಗಾಯಕ ನಿತಿನ್ ಬಲಿ ಅವರು ಮಂಗಳವಾರದಂದು  ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಅವರಿಗೆ 47 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. 

ಗಾಯಕ ನಿತಿನ್ ಬಲಿ ಕಾರಿನಲ್ಲಿ ತಮ್ಮ ಮನೆಗೆ ಹೋಗುತ್ತಿದ್ದಾಗ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

"ನೀಲೆ ನೀಲೆ ಅಂಬರ್ ಪರ್, "ಚುಕರ್ ಮೇರೆ ಮ್ಯಾನ್ ಕೊ, "ಏಕ್ ಅಜನ್ಬೀ ಹಸೀನಾ ಸೆ" ಮತ್ತು "ಪಲ್ ಪಲ್ ದಿಲ್ ಕೆ ಪಾಸ್" ನಂತಹ ಹಾಡುಗಳ ನಂತಹ ರೀಮಿಕ್ಸ್ ಹಾಡುಗಳನ್ನು ಹಾಡಿದ್ದ ನೀತಿನ್ 1998 ರಲ್ಲಿ ಅವರ ಮೊದಲ ಆಲ್ಬಮ್ ನಾ ಜಾನೆ ಸಾಕಷ್ಟು ಹೆಸರನ್ನು ಗಳಿಸಿತ್ತು .

ನೀತಿನ ಬಲಿ ಅವರು ಕಿರುತೆರೆ ನಟಿ ರೋಮಾ ಬಾಲಿಯನ್ನು ವಿವಾಹವಾಗಿದ್ದರು. ಇವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ.

Trending News