Singer Suchitra viral : ಖ್ಯಾತ ಗಾಯಕಿಯೊಬ್ಬರು ವಕೀಲರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನು ಮನ ಬಂದಂತೆ ಹೊಡೆದರು, ಮನೆಯಿಂದ ಹಣವನ್ನು ಕಸಿದುಕೊಂಡು ಹೊರ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಇದೀಗ ಈ ಕುರಿತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Singer Suchitra: ಗಾಯಕಿ ಮತ್ತು ಮಾಜಿ ರೇಡಿಯೋ ಜಾಕಿ ಸುಚಿತ್ರಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಚಿತ್ರಾ ಅವರು ತಮ್ಮ ಭಾವಿ ಪತಿ ಮತ್ತು ಚೆನ್ನೈ ಹೈಕೋರ್ಟ್ ವಕೀಲ ಶುಣ್ಮುಗರಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶುಣ್ಮುಗರಾಜ್ ತಮ್ಮನ್ನು ಹೊಡೆದಿದ್ದಲ್ಲದೆ, ಮನೆ ಮತ್ತು ಹಣವನ್ನು ಸಹ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ..
ಈ ಕುರಿತು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಸುಚಿತ್ರಾ, ತಮ್ಮ ಭಾವಿ ಪತಿ ತಮ್ಮನ್ನು ಶೂಗಳಿಂದ ಹೊಡೆಯುತ್ತಿದ್ದ ಎಂದು ಹೇಳಿಕೊಂಡಿದ್ದಾರೆ. ಇನ್ನು ಸುಚಿತ್ರಾ ಮತ್ತು ಶುಣ್ಮುಗರಾಜ್ ಕಳೆದ ಐದು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ವಿಡಿಯೋ ಪೋಸ್ಟ್ ಮಾಡಿದ ಸುಚಿತ್ರಾ ಕೋಪದಿಂದ, 'ಶುಣ್ಮುಗರಾಜ್ ನನ್ನ ಸಂಪಾದನೆಯನ್ನು ದೋಚಿಕೊಂಡಿದ್ದಾನೆ... ನಾನು ಹಾಡುಗಳನ್ನು ಹಾಡುವ ಮೂಲಕ ಬಹಳ ಶ್ರಮವಹಿಸಿ ಗಳಿಸಿದ್ದೆ. ಹಾಡುಗಳನ್ನು ಹಾಡುವುದು ಅಷ್ಟು ಕಷ್ಟಕರವಾಗಿರಲಿಲ್ಲ, ಆದರೆ ವೃತ್ತಿಪರ ಮನೋಭಾವವನ್ನು ಕಾಪಾಡಿಕೊಳ್ಳುವುದು, ಕಿರುಕುಳವನ್ನು ಎದರಿಸಿ, ಸುರಕ್ಷಿತವಾಗಿರುವುದು ತುಂಬಾ ಕಷ್ಟಕರವಾಗಿತ್ತು.' ಎಂದು ಹೇಳಿದ್ದಾರೆ.
ಸುಚಿತ್ರಾ ಈಗ ತಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಶುಣ್ಮುಗರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ತನ್ನ ಹಕ್ಕುಗಳನ್ನು ಮರಳಿ ಪಡೆಯಲು ಪ್ರತಿಯೊಂದು ಡಿಜಿಟಲ್ ಸಾಧನವನ್ನು ಬಳಸುವುದಾಗಿ ಅವರು ಎಚ್ಚರಿಸಿದ್ದಾರೆ. ಈಗ ತನ್ನ ಹಣವನ್ನು ಮರಳಿ ಪಡೆಯುವವರೆಗೆ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ..