Soundarya Tragic Death: ನಟಿ ಸೌಂದರ್ಯ ಸಾವು ಸ್ಯಾಂಡಲ್‌ವುಡ್‌ನಲ್ಲಿ ಈಗಲೂ ಚರ್ಚೆಯಲ್ಲಿರುವ ದುರಂತವಾಗಿದೆ. ಸೌಂದರ್ಯ ಸಾವಿನ ಬಗ್ಗೆ ಅವರ ಅತ್ತಿಗೆ ನಿರ್ಮಲಾ ಒಂದಷ್ಟು ಮಾಹಿತಯನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಸಾವಿಗೆ ಆ ಸಿನಿಮಾ ಕಾರಣವೇ..? ಆ ಫ್ಲೈ ಓವರ್ ಮೇಲೆ ಸೌಂದರ್ಯ ಆತ್ಮ ಓಡಾಡುವುದು ನಿಜವೇ..? ಸೌಂದರ್ಯ ಸತ್ತಿದ್ದು ಈ ಕಾರಣಕ್ಕೇ? ಎಂಬ ಅನೇಕ ಮಾಹಿತಿ ಗಳನ್ನು ಹಂಚಿಕೊಂಡಿದ್ದಾರೆ.
ಸೌಂದರ್ಯ 'ಗಂಧರ್ವ' ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಸೌಂದರ್ಯ ಅಭಿನಯಿಸಿದ್ದಾರೆ. ಆ ಕಾಲದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ಸೌಂದರ್ಯ ಆಗಿ ಮಿಂಚಿದ್ದರು. 12 ವರ್ಷ ಕಲಾವಿದೆಯಾಗಿ ಮಿಂಚಿದ ಸೌಂದರ್ಯ 85ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್.. ಅಮಿತಾಬ್ ಬಚ್ಚನ್.. ಚಿರಂಜೀವಿ.. ವಿಕ್ಟರಿ ವೆಂಕಟೇಶ್.. ನಾಗಾರ್ಜುನ.. ಮೋಹನ್ ಬಾಬು.. ಹೀಗೆ ಅನೇಕ ದೊಡ್ಡ ದೊಡ್ಡ ಸ್ಟಾರ್‌ಗಳ ತೆರೆ ಹಂಚಿಕೊಂಡಿದ್ದಾರೆ.
ಸೌಂದರ್ಯ ಹಲವು ಪ್ರಶಸ್ತಿಗಳು ಕೂಡ ಸಿಕ್ಕಿದ್ದವು. ಎರಡು ಬಾರಿ ತೆಲುಗು ಚಿತ್ರರಂಗದ ಪ್ರತಿಷ್ಠಿತ ನಂದಿ ಅವಾರ್ಡ್ ದೊರೆತಿದ. ಆರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದರು. ಕರ್ನಾಟಕ ಸರ್ಕಾರ ನೀಡುವ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು.
ಇದನ್ನೂ ಓದಿ: ಕಿಯಾರಾ ಅಡ್ವಾಣಿ ಬಿಕಿನಿ ಬಗ್ಗೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್.. ಅಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿದೆ?
ಸೌಂದರ್ಯ 2004ರ ಏಪ್ರಿಲ್ 17ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಸೌಂದರ್ಯ ಅಗಲಿ 21 ವರ್ಷವಾದರೂ ಸೌಂದರ್ಯ ಸಾವಿನ ಚರ್ಚೆ ನಡೆಯುತ್ತಲೇ ಇದೆ. ಫಿಲ್ಮಿಬೀಟ್ ಕನ್ನಡಕ್ಕೆ ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಅಮರನಾಥ್ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಅವರು ಹಲವು ಅಂಶಗಳ್ನು ರಿವೀಲ್ ಮಾಡಿದ್ದಾರೆ.
ಸತ್ತಂತೆ ಬದುಕೋದು, ಸತ್ತ ಮೇಲೆ ಬದುಕೋದು ಹೀಗೆ ಎರಡು ತರ ಬದುಕನ್ನು ನಾವು ಬದುಕುತ್ತೇವೆ. ಆದರೆ ಕೆಲವರು ಸತ್ತಂತೆ ಬದುಕಿದರೆ ಇನ್ನು ಕೆಲವರು ಸತ್ತ ಮೇಲೆ ಬದುಕುತ್ತಾರೆ ಅದು ಸೌಮ್ಯ ಎಂದು ಹೇಳಿದ್ದಾರೆ. ಇಲ್ಲಿ ಸೌಮ್ಯ ಎಂದರೆ ಸೌಂದರ್ಯ. ಸೌಮ್ಯ ಎಂಬುದು ಸೌಂದರ್ಯ ಇನ್ನೊಂದು ಹೆಸರು.
ಸೌಂದರ್ಯ ಅಗಲಿ 21 ವರ್ಷವಾದರೂ ಫ್ಯಾನ್ಸ್ ಈಗಲೂ ಫೋನ್ ಮಾಡ್ತಾರೆ. ಇಷ್ಟು ದೊಡ್ಡ ಹೆಸರು ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಹೀಗಾಗಿ ನನಗೆ ಯಾವತ್ತು ಅಮರ್ ಆಗಲಿ ಸೌಮ್ಯ ಆಗಲಿ ಇಲ್ಲ ಎಂದು ಅನಿಸಿಲ್ಲ. ಅಮರ್ ಮತ್ತು ಸೌಮ್ಯ ಜೊತೆಯಲ್ಲಿಯೇ ನಾವೆಲ್ಲ ಇದ್ದೇವೆ. ಅವರಿಬ್ಬರು ಯಾವಾಗಲೂ ಅಮರ ನಿರ್ಮಲಾ ಹೇಳಿದ್ದಾರೆ.
ನನಗೆ ಸೌಂದರ್ಯ ಚಿಕ್ಕ ವಯಸ್ಸಿಂದ ಗೊತ್ತು. ಜೊತೆಯಲ್ಲಿಯೇ ಬೆಳೆದವರು. ಸೌಮ್ಯ ಸಂಬಂಧಿ ಪದ್ಮಾ ನನ್ನ ಕ್ಲಾಸ್‌ಮೇಟ್. ನಾನು ಅವರ ಮನೆಗೆ ಹೋಗುತ್ತಿದ್ದೆ. ಅವಳು ನಮ್ಮ ಮನೆಗೆ ಬರುತ್ತಿದ್ದಳು. ಅದೇ ಮನೆಗೆ ಸೊಸೆಯಾಗಿ ಹೋಗ್ತೇನೆ ಎನ್ನುವ ಕಲ್ಪನೆ ನನಗೆ ಇರಲಿಲ್ಲ. ಮದುವೆಯಾಗಿ ಮನೆಗೆ ಬಂದ ಮೇಲೆ ನನಗೆ ಅಲ್ಲಿ ಯಾರೂ ಹೊಸಬರು ಎಂದು ಅನಿಸಿರಲಿಲ್ಲ. ನನಗೆ ನೆನಪಿರುವಂತೆ ಸೌಮ್ಯಳನ್ನು ಹಂಸಲೇಖಾ ಸರ್ ಚಿತ್ರರಂಗಕ್ಕೆ ಪರಿಚಯಿಸಿದರು. ಸೌಮ್ಯ ಎಂಬ ಹೆಸರನ್ನು ಸೌಂದರ್ಯ ಅಂತ ಮರು ನಾಮಕರಣ ಮಾಡಿದರು. ಅವಳದ್ದು ಸಹಜ ಸೌಂದರ್ಯವಾಗಿತ್ತು ಎಂದಿದ್ದಾರೆ.
ಸೌಂದರ್ಯ ಶೂಟಿಂಗ್ ಬಿಟ್ಟರೆ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಬೇಕಾದಾಗ ಮಾತ್ರ ಮೇಕಪ್ ಮಾಡಿಕೊಳ್ತಿದ್ದಳು. ಅವಳಿಗೆ ಬಟ್ಟೆಗಳು ಅಂದರೆ ಪಂಚಪ್ರಾಣ. ವಾರ್ಡ್‌ರೋಬ್ ತುಂಬಾ ಬರೀ ಬಟ್ಟೆಗಳೇ ಇರುತ್ತಿದ್ದವು. ತುಂಬಾನೇ ಮುದ್ದಾಗಿ ಬೆಳೆದಿದ್ದ ಮಗು ಅದು. ಸೌಂದರ್ಯ ನಿಧನರಾದಾಗ ಹಲವರು ಹಲವು ರೀತಿಯಲ್ಲಿ ಮಾತುನಾಡಿದರು. ಸೌಂದರ್ಯ ಆಪ್ತಮಿತ್ರ ಚಿತ್ರ ಮಾಡಬಾರದಿತ್ತು ಎಂದು ಕೆಲವರು ಹೇಳಿದರು. ಸೌಂದರ್ಯ ಸಾವಿಗೆ ನಾಗವಲ್ಲಿಯೇ ಕಾರಣ ಎಂದು ವದಂತಿ ಹರಡಿದರು. ಇನ್ನು ಕೆಲವರು ಫ್ಲೈ ಓವರ್ ಮೇಲೆ ಸೌಂದರ್ಯ ಆತ್ಮ ಇದೆ ಎಂದು ಸುಳ್ಳು ಹೇಳಿದರು.
ಆಪ್ತಮಿತ್ರ ಶೂಟಿಂಗ್ ಸಮಯದಲ್ಲಿ ಸೌಂದರ್ಯಗೆ ಯಾವುದೇ ಅಹಿತಕರ ಅನುಭವ ಆಗಿರಲಿಲ್ಲ. ನನಗೆ ಇವತ್ತು ಕೂಡ ಚೆನ್ನಾಗಿ ನೆನಪಿದೆ ಆ ಚಿತ್ರದ ಚಿತ್ರೀಕರಣ ಇಲ್ಲೇ ಪ್ಯಾಲೇಸ್‌ನಲ್ಲಿ ನಡೆಯುತ್ತಿತ್ತು ನಾನು ಸುಮಾರು ಸಲ ಹೋಗಿದ್ದೆ ಎಂದಿದ್ದಾರೆ.
ರಾ ರಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ಕೂಡ ನಾನು ಅಲ್ಲಿಯೇ ಇದ್ದೆ. ಯಾವತ್ತು ಯಾವ ಕೆಟ್ಟ ಘಟನೆ ಕೂಡ ಆಗಿಲ್ಲ. ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯ ಅಭಿನಯಿಸಿದ್ದು, ಆ ನಂತರ ದುರಂತ ಅಂತ್ಯ ಕಂಡಿದ್ದು ಎಲ್ಲವೂ ಕೇವಲ ಕಾಕತಾಳೀಯ. ಆಪ್ತಮಿತ್ರದ ಮೂಲ ಚಿತ್ರ ಮಣಿಚಿತ್ತಿರತ್ತಾಳ್ ನಲ್ಲಿ ಅಭಿನಯಿಸಿದ್ದ ಶೋಭನಾ ಇನ್ನು ಇದ್ದಾರೆ. ಅದೆಲ್ಲ ಸುಳ್ಳು. ಫ್ಲೈ ಓವರ್ ಮೇಲೆ ಆತ್ಮ ಇದೆ ಎಂಬ ಸುದ್ದಿಯೆಲ್ಲ ಸುಳ್ಳು ಎಂದು ನಿರ್ಮಲಾ ಅಮರ್‌ನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದಿಂದ ನಟಿ ದೀಪಿಕಾ ಪಡುಕೋಣೆ ಔಟ್..!!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









