)
Nayanathara: ಲೇಡಿ ಸೂಪರ್ಸ್ಟಾರ್ ಎಂದು ಕರೆಸಿಕೊಳ್ಳುವ ನಯನತಾರಾ ತಮಿಳಿನಲ್ಲಿ ಅಯ್ಯಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.. ಇವರು ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜವಾನ್ ಚಿತ್ರದ ಮೂಲಕ ಬಾಲಿವುಡ್ಗೂ ಪಾದಾರ್ಪಣೆ ಮಾಡಿದರು. ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಕೂಡ ಒಬ್ಬರು.
ರಜನಿ, ವಿಜಯ್, ಅಜಿತ್, ಸೂರ್ಯ, ವಿಕ್ರಮ್, ಧನುಷ್, ಜಯಂ ರವಿ ಶಿವಕಾರ್ತಿಕೇಯನ್ ಮುಂತಾದ ತಮಿಳು ಚಿತ್ರರಂಗದ ಪ್ರಮುಖ ನಟರೊಂದಿಗೆ ನಯನತಾರಾ ನಟಿಸಿದ್ದಾರೆ. ಅದೇ ರೀತಿ ನಯನತಾರಾ ಬೇರೆ ಭಾಷೆಯ ಟಾಪ್ ಸ್ಟಾರ್ ಗಳ ಜೊತೆ ಜೋಡಿಯಾಗಿದ್ದಾರೆ. ಈ ನಡುವೆ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದರು. ದಂಪತಿಗೆ 2 ಅವಳಿ ಮಕ್ಕಳಿದ್ದಾರೆ. ಸದ್ಯ ನಯನತಾರಾ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ನಯನತಾರಾ ಕೇರಳದವರು ಎಂಬುದು ಎಲ್ಲರಿಗೂ ಗೊತ್ತು. ನಯನತಾರಾ ಅವರ ಹುಟ್ಟು ಹೆಸರು ಡಯಾನಾ. ತಂದೆಯ ಹೆಸರು ಕುರಿಯನ್.. ತಾಯಿಯ ಹೆಸರು ಓಮನ್ ಕುರಿಯನ್, ಸಹೋದರನ ಹೆಸರು ಲೆನೋ. ನಯನ ಅವರ ತಾಯಿ ಮತ್ತು ತಂದೆಯ ಚಿತ್ರಗಳು ಈಗಾಗಲೇ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಅವರ ಸಹೋದರನ ಚಿತ್ರವನ್ನು ಇದುವರೆಗೆ ಕಾಣಿಸಿಕೊಂಡಿರಲಿಲ್ಲ.
ಇದೀಗ ನಯನತಾರಾ ಸಹೋದರನ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.. ನಯನ, ವಿಘ್ನೇಶ್ ಶಿವನ್ ಮತ್ತು ಲೆನೋ ಒಟ್ಟಿಗೆ ಇರುವ ಫೋಟೋ ವೈರಲ್ ಆಗುತ್ತಿದೆ. ನಯನ್ - ವಿಘ್ನೇಶ್ ಶಿವರಿಬ್ಬರ ಭುಜಗಳನ್ನು ತಬ್ಬಿಕೊಂಡು ಲೆನೋ ಪೋಸ್ ಕೊಟ್ಟಿದ್ದಾರೆ. ಸದ್ಯ ಲೆನೋ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.