Actress Nayanthara Real Life Net Worth: ಭಾರತೀಯ ಸಿನಿಮಾ ಜಗತ್ತಿನ ಖ್ಯಾತ ನಟಿ ನಯನತಾರ ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಲೇಡಿ ಸೂಪರ್‌ಸ್ಟಾರ್' ಎಂತಲೇ ಖ್ಯಾತಿ ಪಡೆದವರು. ನಟಿ ನಯನತಾರ ಕೇವಲ ಬ್ಯೂಟಿ, ನಟನೆಯಿಂದ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿನಿಂದಾಗ್ಯೂ ಕೂಡ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಂದು (ನ.18) ನಯನತಾರ ತಮ್ಮ 41ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅವರ ಲವ್ ಲೈಫ್, ಸಿನಿ ಪಯಣ, ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿಯೋಣ...
ಬೆಂಗಳೂರಿನಲ್ಲಿ ಜನನ:
ನಯನತಾರಾ ನವೆಂಬರ್ 18, 1984 ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿದರು. ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ನಯನತಾರ ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್. ಆರಂಭಿಕ ದಿನಗಳಲ್ಲಿ ಮಾಡೆಲ್ ಮತ್ತು ಆಂಕರ್ ಆಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ನಯನತಾರ, ತಮ್ಮ 19ನೇ ವಯಸ್ಸಿನಲ್ಲಿ ಮಲಯಾಳಂ ಚಿತ್ರದ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದರು.
2003ರಲ್ಲಿ ಬಿಡುಗಡೆಯಾದ ಮನಸ್ಸಿನಕ್ಕರೆ(Manassinakkare) ನಯನತಾರ ನಟನೆಯ ಮೊದಲ ಚಿತ್ರ. ಆದಾಗ್ಯೂ, ನಯನತಾರ ಗೆ ಖ್ಯಾತಿ ನೀಡಿದ್ದು 2005ರಲ್ಲಿ ಬಿಡುಗಡೆಯಾದ "ಚಂದ್ರಮುಖಿ", ಇದರಲ್ಲಿ ಅವರು ಮೆಗಾಸ್ಟಾರ್ ರಜನಿಕಾಂತ್ ಜೊತೆಗೆ ಕಾಣಿಸಿಕೊಂಡರು. ನಯನತಾರ ತಮ್ಮ ವೃತ್ತಿಜೀವನದುದ್ದಕ್ಕೂ, ಅವರು "ಅರಾಮ್," "ಶ್ರೀರಾಮ ರಾಜ್ಯಂ," "ನಾನೂಮ್ ರೌಡಿ ಧಾನ್," "ರಾಜಾ ರಾಣಿ," "ಮಾಯಾ," "ಬಿಲ್ಲಾ," "ವಿಶ್ವಾಸಂ," ಮತ್ತು "ಜವಾನ್" ಸೇರಿದಂತೆ ಹಲವಾರು ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಲವ್ ಅಫೇರ್:
ವಿವಾಹಕ್ಕೂ ಮೊದಲೇ ಹಲವರೊಂದಿಗೆ ನಯನತಾರ ಹೆಸರು ತಳುಕು ಹಾಕಿಕೊಂಡಿತ್ತು. ಮೊದಲಿಗೆ ಟಾಲಿವುಡ್ ಹೀರೋ 'ಸಿಂಬು' ಜೊತೆ ಕೇಳಿಬಂದಿದ್ದ ನಯನತಾರ ಬಳಿಕ ಡ್ಯಾನ್ಸರ್, ಕೋರಿಯೋಗ್ರಾಫರ್ ಪ್ರಭುದೇವ ಅವರೊಂದಿಗೂ ಕೇಳಿಬಂದಿತ್ತು.
ಇಂಡಿಯನ್ ಮೈಕಲ್-ಜಾಕ್ಸನ್'ಗಾಗಿ ಮತಾಂತರ:
ತಮ್ಮ ನಟನಾ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಖ್ಯಾತ ನಟ, ನಿರ್ದೇಶಕ ಮತ್ತು ನೃತ್ಯ ಸಂಯೋಜಕ ಭಾರತದ ಮೈಕಲ್ ಜಾಕ್ಸನ್ ಎಂತಲೇ ಖ್ಯಾತಿ ಪಡೆದಿರುವ ಪ್ರಭುದೇವ ಅವರೊಂದಿಗೆ ಡೇಟಿಂಗ್ ನಲ್ಲಿದ್ದ ನಯನತಾರ ಅವರಿಗಾಗಿ ತಮ್ಮ ಮೂಲ ಧರ್ಮವನ್ನು ಬಿಟ್ಟು ಹಿಂದೂ ಧರ್ಮಕ್ಕೂ ಮತಾಂತರಗೊಂಡರು ಎನ್ನಲಾಗುತ್ತದೆ.
ಸಿಎಂ ಪುತ್ರನೊಂದಿಗೂ ಕೇಳಿಬಂದಿತ್ತು ಲೇಡಿ ಸೂಪರ್‌ಸ್ಟಾರ್ ಹೆಸರು:
ಪ್ರಭುದೇವ ಜೊತೆಗಿನ ಸಂಬಂಧ ಮುರಿದುಬಿದ್ದ ಬಳಿಕ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಪುತ್ರ ಕಾಲಿವುಡ್ ನಟ ಉದಯನಿಧಿ ಸ್ಟಾಲಿನ್ ಜೊತೆಗೂ ನಯನತಾರ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಗುಮಾನಿಯೂ ಹಬ್ಬಿತ್ತು.
ಮದುವೆ:
ನಯನತಾರಾ 2022ರಲ್ಲಿ ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಈ ದಂಪತಿಗೆ ಅವಳಿ ಮಕ್ಕಳಿದ್ದಾರೆ.
ಅತ್ಯಂತ ಶ್ರೀಮಂತ ನಟಿ:
ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಜನಪ್ರಿಯ ನಟಿ ನಯನತಾರ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ.
ಐಶಾರಾಮಿ ಜೀವನ:
ಕೋಟಿಗಟ್ಟಲೆ ಆಸ್ತಿ ಒಡತಿ ಆಗಿರುವ ನಯನತಾರಾ, ಅವರು ತಮ್ಮ ಕುಟುಂಬದೊಂದಿಗೆ ಚೆನ್ನೈನಲ್ಲಿ ₹100 ಕೋಟಿ ಮೌಲ್ಯದ 4 BHK ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ. ಐಷಾರಾಮಿ ಜೀವನವನ್ನು ನಡೆಸುತ್ತಿರುವ ನಯನತಾರಾ ಅವರ ಬಳಿ BMW ಸರಣಿ 7, ಟೊಯೋಟಾ ಇನ್ನೋವಾ ಕ್ರಿಸ್ಟಾ, BMW 5 ಸರಣಿ, ಮರ್ಸಿಡಿಸ್ GLS 350 D, ಮತ್ತು ಮರ್ಸಿಡಿಸ್ ಮೇಬ್ಯಾಕ್‌ನಂತಹ ಐಶಾರಾಮಿ ಕಾರುಗಳು ಕೂಡ ಇವೆ.
ನಯನತಾರ ನಿವ್ವಳ ಮೌಲ್ಯ ಎಷ್ಟು ಗೊತ್ತಾ?
ನಟಿ ನಯನತಾರ ಅವರ ಒಟ್ಟು ನಿವ್ವಳ ಮೌಲ್ಯ ₹200 ಕೋಟಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ- ರಜನಿಕಾಂತ್ ಜೊತೆ ನಟಿಸಿ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಬಹಿರಂಗ ಹೇಳಿಕೆ ನೀಡಿದ ಸ್ಟಾರ್ ನಟಿ!
ಇದನ್ನೂ ಓದಿ- ನನಗೂ ಆ ಕೆಟ್ಟ ಅನುಭವ ಆಗಿದೆ.. : ನಯನತಾರಾ ಶಾಕಿಂಗ್ ಹೇಳಿಕೆ









