)
South Actress Ramya Krishnan: ಪ್ರಸ್ತುತ, ನಟ-ನಟಿಯರ ಥ್ರೋಬ್ಯಾಕ್ ಫೋಟೋಗಳು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಟ್ರೆಂಡ್ ಆಗಿವೆ. ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಹಾಗಾದ್ರೆ ಮೇಲಿನ ಫೋಟೋದಲ್ಲಿರುವ ನಾಟ್ಯ ಮಯೂರಿ ನಿಮಗೆ ನೆನಪಿದ್ದಾರೆಯೇ?
ಅವರು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ನಟ ರವಿಚಂದ್ರನ್, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ಮೋಹನ್ ಲಾಲ್ ಮುಂತಾದ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ. ಪ್ರಭಾಸ್ ಮತ್ತು ಎನ್ಟಿಆರ್ನಂತಹ ಸ್ಟಾರ್ಗಳ ಸಿನಿಮಾಗಳಲ್ಲಿ ಸ್ಪೇಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ.. ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಹಿರಿಯ ನಾಯಕಿ ಬೇರಾರೂ ಅಲ್ಲ ರಮ್ಯಾ ಕೃಷ್ಣನ್.. ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯಾಗಿ ಗಮನ ಸೆಳೆದ ದಕ್ಷಿಣ ಭಾರತದ ನಟಿ ತಮ್ಮ 13 ನೇ ವಯಸ್ಸಿನಲ್ಲಿ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ವೆಲ್ಲೈ ಮನಸು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು.
1990 ರಿಂದ 2000 ರವರೆಗೆ.. ಈ ಹತ್ತು ವರ್ಷಗಳ ಗ್ಯಾಪ್ನಲ್ಲಿ ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅತ್ಯುತ್ತಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ರಾಜಮೌಳಿ ಅವರ ಬಾಹುಬಲಿ ಚಿತ್ರವು ಶಿವಗಾಮಿ ಪಾತ್ರದಿಂದ ಯಾರೂ ನಿರೀಕ್ಷಿಸದ ರೀತಿಯಲ್ಲಿ ರಮ್ಯಾ ಅವರು ಪ್ರಸಿದ್ಧಿ ಪಡೆದರು..
12 ಜೂನ್ 2003 ರಂದು ರಮ್ಯಾ ಕೃಷ್ಣ ತೆಲುಗು ನಿರ್ದೇಶಕ ಕೃಷ್ಣ ವಂಶಿ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ. ತಮಿಳುನಾಡಿನವರಾದ ರಮ್ಯಾ ಮದುವೆಯ ನಂತರ ಹೈದರಾಬಾದ್ನಲ್ಲಿ ನೆಲೆಸಿದ್ದರು. ನಟಿ ಬಾಹುಬಲಿ ಸಿನಿಮಾದಿಂದ ಅತ್ಯುತ್ತಮ ನಟಿಯಾಗಿ ನಂದಿ ಪ್ರಶಸ್ತಿ, ಫಿಲ್ಮ್ಫೇರ್, ಸೈಮಾ, IIFA ಪ್ರಶಸ್ತಿಗಳನ್ನು ಪಡೆದರು. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ.