ಅಗಲಿ 20 ವರ್ಷಗಳಾದ್ರೂ ಅಭಿಮಾನಿಗಳ ಮನದಲ್ಲಿ ಜೀವಂತ.. ಪ್ರಖ್ಯಾತ ನಟಿ ಸೌಂದರ್ಯ ಮದುವೆಯ ಅಪರೂಪದ ವಿಡಿಯೋ ವೈರಲ್!!‌

Soundarya Marriage Video: ಸತ್ತು 20 ವರ್ಷಗಳಾದರೂ ಸೌಂದರ್ಯಾ ತಮ್ಮ ಅಭಿಮಾನಿಗಳಲ್ಲಿ ಇನ್ನೂ ಸ್ಥಾನ ಪಡೆದಿದ್ದಾರೆ. ಅವರ ಅಭಿಮಾನಿಗಳು ಅವರ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ

Written by - Savita M B | Last Updated : Dec 14, 2024, 09:35 PM IST
  • 90ರ ದಶಕದಲ್ಲಿ ಸೌಂದರ್ಯ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ನಾಯಕಿಯಾಗಿ ಮುಂಚೂಣಿಯಲ್ಲಿದ್ದರು
  • ಸೌಂದರ್ಯ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟಿಯಾದರು.
ಅಗಲಿ 20 ವರ್ಷಗಳಾದ್ರೂ ಅಭಿಮಾನಿಗಳ ಮನದಲ್ಲಿ ಜೀವಂತ.. ಪ್ರಖ್ಯಾತ ನಟಿ ಸೌಂದರ್ಯ ಮದುವೆಯ ಅಪರೂಪದ ವಿಡಿಯೋ ವೈರಲ್!!‌  title=

Actress Soundarya: 90ರ ದಶಕದಲ್ಲಿ ಸೌಂದರ್ಯ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ನಾಯಕಿಯಾಗಿ ಮುಂಚೂಣಿಯಲ್ಲಿದ್ದರು. ಕರ್ನಾಟಕದವರಾದ ಸೌಂದರ್ಯ 1992 ರಲ್ಲಿ ಕನ್ನಡ ಚಲನಚಿತ್ರ ಗಂಧರ್ವ ಮೂಲಕ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು. ಇದರ ಬೆನ್ನಲ್ಲೇ ಅವರಿಗೆ ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಅವಕಾಶಗಳು ಹರಿದು ಬರತೊಡಗಿದವು. ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಸೌಂದರ್ಯಾ ಟಾಪ್ ನಟಿಯಾಗಿ ಹೊರಹೊಮ್ಮಿದರು. ತೆರೆಗೆ ಬಂದ ಅಲ್ಪಾವಧಿಯಲ್ಲೇ ತೆಲುಗಿನಲ್ಲಿ ಪ್ರಮುಖ ನಟರೊಂದಿಗೆ ಜೋಡಿಯಾದರು. ತೆಲುಗಿನಲ್ಲಿ ಸಾವಿತ್ರಿಯ ನಂತರ ಸೌಂದರ್ಯ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ನಟಿಯಾದರು. 

1993 ರಲ್ಲಿ ಬಿಡುಗಡೆಯಾದ ಚಿತ್ರದ ಮೂಲಕ ಸೌಂದರ್ಯಾ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಹಲವಾರು ಚಿತ್ರಗಳಲ್ಲಿ ನಟಿಸಿ ಎಲ್ಲರ ಮನಗೆದ್ದರು.. ರಜನಿ, ಕಮಲ್, ಚಿರಂಜೀವಿ, ಮೋಹನ್‌ಲಾಲ್, ನಾಗಾರ್ಜುನ, ವೆಂಕಟೇಶ್, ಅಮಿತಾಬ್ ಬಚ್ಚನ್.. ಹೀಗೆ ಸೌಂದರ್ಯ ಆಗ ಉತ್ತುಂಗದಲ್ಲಿದ್ದ ನಾಯಕ ನಟರೊಂದಿಗೆ ಜೋಡಿಯಾಗಿ ನಟಿಸಿದ್ದಾರೆ. 1992 ರಿಂದ 2003 ರವರೆಗೆ, ಸೌಂದರ್ಯ ತಮ್ಮ ಪರದೆಯ ವೃತ್ತಿಜೀವನದಲ್ಲಿ ದಕ್ಷಿಣ ಭಾರತದ ಅಗ್ರ ನಟಿಯಾದರು. ಸೌಂದರ್ಯ ತಮ್ಮ ಸಿನಿಮಾ ಖ್ಯಾತಿಯ ಮೂಲಕ ರಾಜಕೀಯದಲ್ಲೂ ಹೆಸರು ಮಾಡಲು ಬಯಸಿದ್ದರು..

 
 
 
 

 
 
 
 
 
 
 
 
 
 
 

A post shared by SOUNDARYA 👑 (@actress.soundarya)

 

ಇದನ್ನೂ ಓದಿ- BBK11: ಎಲಿಮಿನೇಷನ್‌ ಶಾಕ್.. ನಾಮಿನೇಟ್ ಆದ 8 ಸ್ಪರ್ಧಿಗಳಲ್ಲಿ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗೋದು ಯಾರು? 

2004 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಸೌಂದರ್ಯ ಅವರು 17 ಏಪ್ರಿಲ್ 2004 ರಂದು ತಮ್ಮ ಸಹೋದರ ಅಮರನಾಥ್ ಅವರೊಂದಿಗೆ ಬೆಂಗಳೂರಿನಿಂದ ಕರೀಂನಗರಕ್ಕೆ ವಿಮಾನದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಹೊರಟಾಗ ವಿಮಾನ ಪತನಗೊಂಡು ಸೌಂದರ್ಯ ಸಾವನ್ನಪ್ಪಿದ್ದರು.. ಆಗ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 

2003ರಲ್ಲಿ ನಟಿ ಸೌಂದರ್ಯ ಸಾಫ್ಟ್‌ವೇರ್ ಇಂಜಿನಿಯರ್ ರಘು ಅವರನ್ನು ವಿವಾಹವಾಗಿದ್ದರು.. ಖ್ಯಾತಿಯ ಉತ್ತುಂಗದಲ್ಲಿದ್ದ ಸೌಂದರ್ಯಾ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವುದು ಅಭಿಮಾನಿಗಳ ಮನದಲ್ಲಿ ಇನ್ನೂ ಮಚ್ಚೆಯಾಗಿದೆ. ಇದಲ್ಲದೇ ಸೌಂದರ್ಯ ಸಾಯುವಾಗ 7 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ.. ಸೌಂದರ್ಯಾ ಸಾವನ್ನಪ್ಪಿ 20 ವರ್ಷಗಳಾದರೂ ಅವರ ಅಭಿಮಾನಿಗಳು ಅವರ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ. ಅದರಂತೆ ಇದೀಗ ಸೌಂದರ್ಯಾ ಮದುವೆಯ ಥ್ರೋಬ್ಯಾಕ್ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ-ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ... ವರ್ಷದ 90 ದಿನಗಳಷ್ಟೇ ಲಭ್ಯವಿರುವ ಇದನ್ನು ಒಮ್ಮೆ ತಿಂದರೆ ನಿಮಿಷಗಳಲ್ಲಿ ಸೊಂಟದ ಬೊಜ್ಜು ಕರಗಿ ಹೋಗುತ್ತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News