ಸಾಯಿಪಲ್ಲವಿ ಅಲ್ಲ... ರಾಮಾಯಣ ಸಿನಿಮಾದಲ್ಲಿ ಸೀತೆ ಆಗಬೇಕಿತ್ತು ಈ ಕನ್ನಡದ ಸ್ಟಾರ್‌ ನಟಿ! ಯಶ್‌ಗಾಗಿ ಪಾತ್ರವನ್ನೇ ಬಿಟ್ಟುಕೊಟ್ಟ ಎಂದ ಚೆಲುವೆ ಈಕೆ

Srinidhi Shetty statement about yash: ನಿತೇಶ್ ತಿವಾರಿ ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಈ ಪಾತ್ರಕ್ಕಾಗಿ ಮೊದಲು ಸ್ಯಾಂಡಲ್‌ವುಡ್‌ನ ಈ ಪ್ರಸಿದ್ಧ ನಟಿಗೆ ಆಫರ್‌ ನೀಡಲಾಗಿತ್ತಂತೆ.

Written by - Chetana Devarmani | Last Updated : Apr 26, 2025, 12:30 PM IST
  • ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ
  • ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ರಾಮಾಯಣ ಸಿನಿಮಾ
  • ರಾಮಾಯಣ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ
ಸಾಯಿಪಲ್ಲವಿ ಅಲ್ಲ... ರಾಮಾಯಣ ಸಿನಿಮಾದಲ್ಲಿ ಸೀತೆ ಆಗಬೇಕಿತ್ತು ಈ ಕನ್ನಡದ ಸ್ಟಾರ್‌ ನಟಿ! ಯಶ್‌ಗಾಗಿ ಪಾತ್ರವನ್ನೇ ಬಿಟ್ಟುಕೊಟ್ಟ ಎಂದ ಚೆಲುವೆ ಈಕೆ
Srinidhi Shetty

Srinidhi Shetty about Sita Role In Ramayana Movie: ನಿತೇಶ್ ತಿವಾರಿ ಅವರ ಪೌರಾಣಿಕ ಚಿತ್ರ ರಾಮಾಯಣ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಎದುರು ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗ, ಆಲಿಯಾ ಭಟ್ ಸೀತಾ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ ನಂತರ ಸಾಯಿ ಪಲ್ಲವಿ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಈಗ ಮತ್ತೊಬ್ಬ ನಟಿ ತಮಗೂ ಕೂಡ ಈ ಪಾತ್ರದಲ್ಲಿ ನಟಿಸಲು ಆಫರ್‌ ಬಂದಿತ್ತು ಎಂದು ಹೇಳಿದ್ದಾರೆ.  

Add Zee News as a Preferred Source

ಕೆಜಿಎಫ್ 2 ನಟಿ ಶ್ರೀನಿಧಿ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿ ಶ್ರೀನಿಧಿ ಶೆಟ್ಟಿ. ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಜೊತೆಗಿನ ಶ್ರೀನಿಧಿ ಶೆಟ್ಟಿ ಜೋಡಿಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿತ್ತು. 

ಈಗ ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಲು ಆಫರ್‌ ಬಂದಿತ್ತು ಎಂದಿದ್ದಾರೆ. ಇದಕ್ಕಾಗಿ ಶ್ರೀನಿಧಿ ಶೆಟ್ಟಿ ಸ್ಕ್ರೀನ್ ಟೆಸ್ಟ್ ಕೂಡ ಮಾಡಲಾಗಿದೆ ಎಂದು ಹೇಳಿದರು. ಶ್ರೀನಿಧಿ ಶೆಟ್ಟಿ ಅವರು ಸೀತಾ ಪಾತ್ರಕ್ಕಾಗಿ ಮೂರು ಸ್ಕ್ರೀನ್ ಟೆಸ್ಟ್‌ಗಳನ್ನು ನೀಡಿದ್ದು, ಮೂರೂ ಚೆನ್ನಾಗಿವೆ ಎಂದು ಹೇಳಿದ್ದರಂತೆ.  

ಇದನ್ನೂ ಓದಿ: ನಾನು ಏಳೆಂಟು ಜನರನ್ನು ಪ್ರೀತಿಸುತ್ತಿದ್ದೆ.. ಚಿಕ್ಕ ವಯಸ್ಸಿಗೆ ಅದನ್ನೆಲ್ಲ ನೋಡಿದೆ : ನಟಿ ಶಕೀಲಾ

ಸಂದರ್ಶನವೊಂದರಲ್ಲಿ ಈ ಬಗ್ಗೆ ಶ್ರೀನಿಧಿ ಶೆಟ್ಟಿ ಅವರಿಗೆ ಈ ಬಗ್ಗೆ ಮಾತನಾಡಿದ್ದಾರೆ. "ಈಗ ಚಿತ್ರೀಕರಣ ಈಗಾಗಲೇ ಆರಂಭವಾಗಿರುವುದರಿಂದ ನಾನು ಅದರ ಬಗ್ಗೆ ಮಾತನಾಡಬಲ್ಲೆ. ಹೌದು ನಾನು ಭೇಟಿಯಾಗಿ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದೆ. ನಾನು ಮೂರು ಸ್ಕ್ರೀನ್ ಟೆಸ್ಟ್ ಕೂಡ ಪಾಸ್‌ ಆಗಿದ್ದೆ. ಅವರು ಉತ್ತಮ ಪ್ರತಿಕ್ರಿಯೆ ಕೂಡ ನೀಡಿದ್ದರು ಎಂದು ನನಗೆ ನೆನಪಿದೆ. ಅವರು ಸ್ಕ್ರೀನ್ ಟೆಸ್ಟ್ ಇಷ್ಟಪಟ್ಟರು ಎಂದು ಹೇಳಿದ್ದಾರೆ.

ಯಶ್ ರಾಮಾಯಣದ ಭಾಗವಾಗಿದ್ದರು. ಆ ಸಮಯದಲ್ಲಿ ಕೆಜಿಎಫ್ 2 ಬಿಡುಗಡೆಯಾಯಿತು. ಆಗ ಯಶ್‌ ಮತ್ತು ಶ್ರೀನಿಧಿ ಶೆಟ್ಟಿ ಜೋಡಿ ಹಿಟ್ ಆಗಿತ್ತು. ಜನರು ಈ ಜೋಡಿಯನ್ನು ಇಷ್ಟಪಟ್ಟಿದ್ದರು. ಕೇವಲ ಒಂದು ಅಥವಾ ಎರಡು ತಿಂಗಳಲ್ಲಿ ರಾಮಾಯಣದ ಆಡಿಷನ್ ಆಯಿತು. ಹಾಗಾಗಿ ನಾನು ಯೋಚಿಸುತ್ತಿದ್ದೆ, ಯಶ್‌ ರಾವಣನ ಪಾತ್ರವನ್ನು ನಿರ್ವಹಿಸುತ್ತಾನೆ. ನಾನು ಸೀತೆಯ ಪಾತ್ರವನ್ನು ನಿರ್ವಹಿಸುತ್ತೇನೆ. ನಾವು ಪರಸ್ಪರ ವಿರುದ್ಧವಾಗಿ ನಟಿಸುತ್ತೇವೆ. ಆದ್ದರಿಂದ ಬಹುಶಃ ಜನರು ನಮ್ಮನ್ನು ಆ ರೀತಿ ನೋಡಲು ಇಷ್ಟಪಡುವುದಿಲ್ಲ ಎಂದು ನಾನು ಯೋಚಿಸಿದೆ ಎಂದು ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.

ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ನಿರ್ವಹಿಸಿದ್ದಕ್ಕೆ ಶ್ರೀನಿಧಿ ಶೆಟ್ಟಿ ಸಂತೋಷ ವ್ಯಕ್ತಪಡಿಸಿದ್ದು, ಆ ಪಾತ್ರಕ್ಕೆ ಅವರು ಪರಿಪೂರ್ಣರು ಎಂದಿದ್ದಾರೆ. "ಸಾಯಿ ಪಲ್ಲವಿ ಉತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ. ನಾನು ಅವರನ್ನು ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ನೋಡಲು ಇಷ್ಟಪಡುತ್ತೇನೆ ಎಂದು ಶ್ರೀನಿಧಿ ಹೇಳಿದರು.

ಇದನ್ನೂ ಓದಿ: ಚಿತ್ರರಂಗಕ್ಕೆ ಬಿಗ್‌ಶಾಕ್‌.. ರಿತೇಶ್ ದೇಶಮುಖ್ ಸಿನಿಮಾ ಶೂಟಿಂಗ್‌ ವೇಳೆ ಅಪಘಾತ! ಸೆಟ್‌ನಲ್ಲೇ ಜೀವ ಬಿಟ್ಟ ಖ್ಯಾತ ಸೆಲೆಬ್ರಿಟಿ..

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News